ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿದೇವ ನಿನ್ನೊಲುಮೆಯೊಂದಾದರೆ ಮೇದಿನಿ ವೈಕುಂಠ ಎನ್ನಿಸದೆ ಪ ವೇದವೇದ್ಯ ನಿನ್ನಾದರವಿರದಲೆ ಮೇದನಿ ಬೂದಿಯಾಗದಿಹುದೇ ಅ.ಪ ಹೂವಿಗೆ ಗಂಧವ ಎರೆದವರಾರೋ ಬೇವಿಗೆ ಕಹಿಯನು ಕೊಟ್ಟವರಾರೋ ಜೀವಿಗಳೆಲ್ಲಾ ಸಲಹುವರಾರೋ ಸಾವು ನೋವುಗಳ ಬಿಡಿಸುವನಾರೋ 1 ದೇವರಿಗಮೃತವ ಕೊಟ್ಟವನಾರೋ ಹಾವಿನ ಹಾಸನು ಪಡೆದವನಾರೋ ಭಾವದನೆಲೆಯ ಮಾಂಗಿರಿಪತಿಯೆಲೆ ಕಾವನು ಕೊಲ್ವನು ನೀನಲ್ಲದಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಷ್ಟೆಂದು ಹೇಳಲಮ್ಮಯ್ಯಕೃಷ್ಣನ ದಯವ ದಿಟ್ಟ ಪಾಂಡವರಲ್ಲೆಪ್ರಾಣ ಇಟ್ಟುಕೊಂಡಿ ಹನಮ್ಮ ಪ. ನೀರಜಾಕ್ಷಗೆ ನಮಿಸಿ ವೀರರೈವರು ಮಹಾದ್ವಾರದಲ್ಲಿ ಹೋರೆಂದು ಸಾರಿ ಹೇಳಿದೆನಮ್ಮಮಾರನಯ್ಯನ ಪಿತನ ಮೋರೆ ನೋಡುತಲಿತೀವ್ರ ಕರೆತಾರೆ ಮುತ್ತಿನ ಹಾರ ನಿನಗೆ ಈವೆನೆಂದ1 ಇಂದು ಮುಖಿಗೆ ನಾನು ವಂದಿಸಿ ಐವರು ಹೊರಗೆ ಬಂದಾರೆ ಹೀಗೆಂದೆ ನಮ್ಮಯ್ಯಮಂದಹಾಸನು ದಯದಿಂದ ನೋಡುತಲೆನ್ನತಂದು ತೋರಮ್ಮ ತೋಳಬಂದಿ ನಿನಗೀವೆನೆಂದ2 ಪುಟ್ಟ್ಟಸುಭದ್ರೆ ಪಾಂಡವರ ಪಟ್ಟದರಾಣಿ ದ್ರೌಪತಿಅಷ್ಟೂರೂ ಬಂದಾರೆಂಬೊ ಉತ್ಕ್ರಷ್ಟ ಹೇಳಿದೆನಮ್ಮತುಷ್ಟÀನಾಗಿ ರಮಿಯರಸು ಥಟ್ಟನೆ ಕರೆತಾರೆÀಂದುಕೊಟ್ಟು ವೀಳ್ಯವ ದಯದ ವೃಷ್ಟಿಗರೆದನಮ್ಮ 3
--------------
ಗಲಗಲಿಅವ್ವನವರು
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ