ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡು ಧನ್ಯಳಾದೆ ನಾ ಪಾಂಡುರಂಗವಿಠಲನಾ ಪ. ಕಂಡು ಧನ್ಯಳಾದೆ ಹರಿಯ ಪುಂಡರೀಕ ಪದದಿ ಎನ್ನ ಮಂಡೆ ಇಟ್ಟು ವಂದಿಸುತಲಿ ಪುಂಡರೀಕ ವರದ ನಾ ಅ. ದೂರದಿಂದ ಬಂದು ಹರಿಯ ಸೇರಿವಂದಿಸುತಲಿ ಈಗ ಹಾರಹಾಕಿ ನಮಿಸಿ ಮನೋ ಹಾರ ನೋಡಿ ದಣಿದೆನಿಂದು 1 ಗುರುಗಳಂತರ್ಯಾಮಿ ಹರಿಯ ಇರಿಸಿ ಎನ್ನ ಬಿಂಬ ಸಹಿತ ಸ್ಮರಿಸಿ ಚಿಂತಿಸಿ ವಿಠಲನಲ್ಲಿ ಕರುಣಮೂರ್ತಿ ಪಾಂಡುರಂಗನ 2 ಗುರುಪುರಂದರ ಸ್ತಂಭ ಕಂಡೆ ವರದ ಚಂದ್ರಭಾಗ ತೀರದಿ ಚರಣ ಇಟ್ಟಿಗೆಯಲಿ ಇಟ್ಟು ಸಿರಿ ಗೋಪಾಲಕೃಷ್ಣವಿಠಲನ 3
--------------
ಅಂಬಾಬಾಯಿ
ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ ಶ್ರೀ ರಮೇಶನೆ ನಾನಾ ಗುಣನಾಮ ಮಾಲೆ ಪ. ವಾರಿಜಾಂಬಕನೆ ಶ್ರೀ ಗುರುಗಳ ರಚಿಸುತಲಿ ಹಾರಹಾಕಿಹರೊ ನಿನಗೆ ಹರಿಯೆ ಅ.ಪ. ಮೋಹನವಿಠ್ಠಲನೆಂಬಾ ಒದ್ದು ತಾಪತ್ರಯವನು ತಿದ್ದಿ ತಿಳಿಸುತಲಿ ಜ್ಞಾನ ಕರ್ಮ ತಿದ್ದಿ ತಿಳಿಸಿದ ಗುರುಗಳು ಇವರು 1 ಇಂದಿರಾಪತಿ ರಂಗನಾಥ ರಘುರಾಮ ಇಂದಿರೇಶ ದಯಾಪೂರ್ಣ ಸೀತಾಪತೇ ವೇದೇಶ ಯಾದವೇಂದ್ರ ಸ್ವಾಮಿ 2 ಇಂದಿರಾರಮಣ ಜಯ ಗೋಪಾಲನೆ ವರದೇಶ ಪ್ರಾಣನಾಥಾ ಪದ್ಮನಾಭ ಶ್ರೀನಾಥ ಜಗದೀಶನೆ ವರದ ಮೋಹನದೇವಾ 3 ಶ್ರೀಕಾಂತ ಪುರುಷೋತ್ತಮ ಪರಮಾನಂದ ಶ್ರೀ ಸುರೇಂದ್ರ ಕರುಣಾಕರ ವೆಂಕಟ ದಯಾಮಯನೆ ಭವತಾರಕ ಹರಿಯೆ 4 ವಸುದೇವ ಪಾರ್ಥಸಾರಥಿಯೆ ಪ್ರಾಣಪ್ರಿಯ ಪರಿಪೂರ್ಣ ಮಧ್ವವಲ್ಲಭಮುಕ್ತಿ ದಾಯಕ ಸತ್ಯೇಶನೆ ಪರಮಪಾವನ ರಮೇಶ ಕರುಣಾನಿಧೆ ಪುಂಡರೀಕಾಕ್ಷ ಸ್ವಾಮಿ 5 ಕಲ್ಯಾಣಗುಣಪೂರ್ಣ ಚಂದ್ರಹಾಸವರದ ಮಾಯಾಪತಿ ಉಪೇಂದ್ರ ಚಕ್ರಪಾಣಿ ಮುಕ್ತೇಶ ಬದರಿನಾಥಾ ಜಯಪ್ರದ ನಿರ್ಜರೇಶ ಜಾನಕೀಪತಿ ವಿಶ್ವನಾಥಾ ಸ್ವಾಮಿ 6 ಭುವನೇಶ ಗಜರಾಜವರದ ಜನಾರ್ಧನ ಮಧ್ವನಾಥ ಆನಂದ ಅರವಿಂದಾಕ್ಷ ಪುಂಡರೀಕವರದ ಶ್ರೀ ಕೃಷ್ಣಸ್ವಾಮಿ 7 ಮಾಧವ ಕಮಲಾನಾಥ ಕಮಲನಾಭ ಸದಮಲಾನಂದ ವೈಕುಂಠವಾಸ ಪದ್ಮೇಶ ಗುರು ಮಧ್ವೇಶ ಇಂದಿರಾಪತಿ ರಮೇಶ ಶ್ರೀಶÀ 8 ನಿಗಮ ಸಿರಿರಮಣ ಕಮಲಾಕಾಂತನೆ ಸರವ ಪೋಣಿಸಿ ಹಾಕುತ ಪರಮ ಪ್ರಿಯ ಶ್ರೀ ಗುರುಗಳು ಉಳಿದ ನಾಮಾ ಪೊರೆಯೋ 9
--------------
ಅಂಬಾಬಾಯಿ