ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಮಹಿಪತಿ ಆನಂದ ಮೂರುತಿ ಗುರುರಾಯಾ ಪ ಪರಮ ಪುರುಷ ಮಹಾದೀನೋದ್ಧರಣಾ | ದುರಿತ ನಿವಾರಣ ಪತಿತ ಪಾವನಾ | ಶರಣ ಜನರ ಪಾಲನಾ ಕರುಣಾ ಸಾಗರಾ 1 ಬೋಧ ಶರಾಸನ ಧರಿಸಿ | ಅಗಣಿತ ದುಷ್ಟ ಗುಣವ ಮರ್ದಿಸಿದೆ | ಭಕುತ ಹೃತ್ಪಂಕಜ ಸಂಚಾರಾ ಆಗಮ ಸನ್ಮತನೇ 2 ಜನನ ಮರಣ ಆಂಕುರ ಕುಠಾರ | ಜಾತಕ ಜಲಧರನೇ | ಅನುದಿನ ಕೃಷ್ಣನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬ್ರಹ್ಮಣ್ಯ ತೀರ್ಥ ಗುರು ರಾಜಾ | ನಿನ್ನನಮ್ಮಿದೆನೊ ಭಾಸ್ಕರ ಸುತೇಜಾ | ಭಾವಿಬೊಮ್ಮ ಮತವರುಹಿ ಮಹೋಜಾ | ಸಲಹೊಪ್ರಮ್ಮೇಯಂಗಳ ನಿಧಿಯ ಸಹೋಜಾ ಪ ಓದ್ದಾಡುತಿಹೆನೊ ಈ ಭವದೀ | ಸುಖಗದ್ದುಗೆಯನೇರ್ವಂಥ ಹಾದೀ | ತೋರಿಉದ್ಧರಿಸೊ ಬಲು ಕೃಪಾಜಲಧೀ | ಗುರುವೆಶುದ್ಧ ಬುದ್ಧಿಯ ನೀಯೊ ಮುದದೀ 1 ಯಾತ್ರೆಗಳ ಮಾಡ್ದೆನೆಂಬ | ಬಿಂಕದ್ವಾರ್ತೆಯೊಂದಲ್ಲದಲೆ ಇಂಬ | ಕಾಣೆಕ್ಷೇತ್ರ ಮೂರ್ತಿಯ ಕಾಂಬನೆಂಬ | ಆಶೆಪೂರ್ತಿ ಮಾಡೆನ್ನ ಗುರು ಬಿಂಬ 2 ಧನವನಿತೆ ವಿಷಯದಲ್ಲೀ | ಬಹಳ ಮನ ಮಾಡಿ ನೊಂದೆನಲ್ಲೀ | ಹರಿಯಮನ ಮುಟ್ಟೊ ಭಜಿಸು ಎಂಬಲ್ಲೀ | ಇನ್ನುಘನ ಜ್ಞಾನ ಭಕುತಿ ಇಲ್ಲಲ್ಲೀ 3 ಜೀವಗೆಲ್ಲಿಯ ಸ್ವತಂತ್ರಾ | ಹರಿಗುರುತಾವಲ್ಲಿ ಮಾಡುತಿಹ ತಂತ್ರ | ದಿಟವಿದುಜೀವನೇ ಮಾಳ್ಪುನೆಂಬುದೆ ಕುತಂತ್ರ | ತಿಳಿಸೊಭಾವ ಜಾನಯ್ಯನ ಸ್ವತಂತ್ರ 4 ಸಾರ ವ್ರಾತ | ತಿಳಿಸೊಜ್ಞಾನ ನಿಧಿ ಪುರುಷೋತ್ಮ ತಂತ್ರ 5 ಕಾರಕ ಕ್ರಿಯ ದ್ರವ್ಯವೆನಿಪ | ಭ್ರಮವುಮೂರರಿಂದಲಿ ದೂರ ಮಾಳ್ಪ | ಮಾರ್ಗತೋರಿಸಲಹುವುದು ಯತಿ ಭೂಪ | ತವಪದವಾರಿ ಜತೆ ಈ ನೀಚ ಬೀಳ್ಪ 6 ತ್ರ್ಯಕ್ಷಾಂಶ ಭೂತರಾದ | ಸನ್ಯಾಸಿಅಕ್ಷೋಭ್ಯ ಕರಜರಾದ | ಅಜೇಯಇಕ್ಷುಚಾಪನ್ನ ಗೆಲಿದ | ಜಯಾರ್ಯಭಿಕ್ಷುವಿನ ಮಾರ್ಗರಾದ7 ಮೋದ | ಪಡೆವದಾಯ ತೋರಿದಿ ನಿರ್ವಿವಾದ | ಇನ್ನುಗಾಯನದಿ ಮಹಿಮೆ ಅಗಾಧ | ಪೇಳ್ವಆಯತವ ನೀಯೋ ಸುಭೋಧ 8 ಬೃಹತೀ ಸಹಸ್ರ ಮಂತ್ರ | ಜಪಿಪಮಹಯೋಗದಾತ ಮಹಾಂತ | ಬೇಡ್ವೆಬೃಹತಿನಾಮಕನು ಎಂಬಂಥ | ಹರಿಯಮಹ ಮಹಿಮೆ ಕಂಡು ಹಿಗ್ವಂಥ 9 ಸೃಷ್ಟ್ಯಾದಿ ಅಷ್ಟಕಗಳ | ಗೈವಕೃಷ್ಣನ್ನ ಮಹಿಮೆಗಳ | ಕೇಳಿಹೃಷ್ಟರಾಗುವ ಜನಗಳ | ಸಂಗಕೊಟ್ಟುದ್ಧರಿಸೊ ನಮ್ಮಗಳ 10 ಸದನ 11
--------------
ಗುರುಗೋವಿಂದವಿಠಲರು
ಮನದಲಿ ಸಕಲಾರ್ಥ | ಜಗದೊಳು ಪ ಮನ ನೆಲೆಗೊಂಡರೆ ಮೋಕ್ಷದ ಹಾದೀ | ಮನ ಚಲಿಸಲು ಬಾಧೀ 1 ಮನವೇ ತಾಹದು ನಾನಾಜನ್ಮ | ಮನ ಹರಿವುದು ಕರ್ಮಾ 2 ಯೋಗಿ ಮಹಂತಾ | ಮನಮೀರಲು ಭ್ರಾಂತ 3 ಭವ ದೂರಾ | ಮನದೊಳು ಸಂಸಾರಾ 4 ಮನ ಗುರುವರ ಮಹಿಪತಿ ಪ್ರಭು ನಾಮಾ | ನೆನಿಯಲು ಸುಖಧಾಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಿದ್ಯಾ ಇಂದಿಗೆ ಹೀಂಗ | ಆಗದ್ಹಾಂಗ || ಕೂಡಿ ದುರ್ಜನರೆಲ್ಲ ನಗುವ ಪರಿಯಲಿ ಪ ಏನು ಕಂಡು ಒಲಿದೀ ನೀ ಅವಗೆ | ಖಳನ ಘಾತಕಮನದವಗೆ | ತಾನು ದಾರೆಂದು ವಿಚಾರಿಸದಧಮಗೆ |ಸಾನುಕೂಲಾಗಿ ಸರ್ವ ಬಗೆಯಲಿ 1 ಸಾಧು ಸಂತರು ಎಂಬುದನರಿಯಾ | ಭೇದವಾದ ಕುಬುದ್ಧಿಯಮರೆಯಾ || ಕಾದಾಡಿ ಕರ್ಮದ ಹಾದೀ ಹಿಡಿಯದ | ವಾದಕಂಜದ ಜನ ಸಾಧಕನಿಗೆ 2 ಹಿಂದಿನ ಗುಣಗಳ ಬಿಟ್ಟ್ಯಾಕೋ | ಮಂದಿಗೆ ಪದವಿಯ ಕೊಟ್ಟ್ಯಾಕೋ ತಂದೆ ಸದ್ಗುರು | ಭವತಾರಕನಂಘ್ರಿಯ | ಹೊಂದಿದವರಿಗಭಿಮಾನವಿಲ್ಲದಂತೆ 3
--------------
ಭಾವತರಕರು
ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ |ಐ ಅದು ಏನು ಕಾರಣ ಮೈ ಮರೆದು ಮತ್ತುಳಿದೆನೆ | ಕೈ ಕೈ ತಲೆ ಮೇಲಿಡಲು ವೈರಾಗ್ಯ ಪಡೆದೆನೆ |ಥೈ ಥೈಯಂತ ಕುಣಿಸಿ ತನ್ನಂತೆ ತಾ ಮಾಡಿದನೆ ¥ ನಾನೂ ನೀನೆಂಬುದು ಮರೆಸಿ ತಾನೇ ತಾನಾದನೆ |ಮಾನ ಅಪಮಾನ ಎರಡೂ ಪಾನ ಮಾಡಿದನೆ |ಜ್ಞಾನ ಮಾರ್ಗವ ತೋರಿ ಧ್ಯಾನ ಹೇಳಿದನೆ |ಖೂನ ತೋರಿಸಿ ವಿನೋದ ಮಾಡಿದನೆ 1 ನಾದ ಶಬ್ದದಿ ಮನಲುಬ್ಧ ಮಾಡಿದನೆ |ವಾದಿ ದುರ್ವಾದಿಗೂಡ ಕಾದಿ ಗೆಲಿಸಿದನೆ |ಭೇದಾಭೇದವ ಅರಿಯದ ಹಾದೀ ತೋರಿದನೆ |ಈದ ಹುಲಿಯಂಥ ಮನಸು ಸಾದ ಮಾಡಿದನೆ 2 ಭೃಕುಟಿ ಮಧ್ಯದಿ ವಸ್ತು ಪ್ರಕಟ ಮಾಡಿದನೆ | ಆಸನ ದ್ವಾರ ಕವಾಟವ ಬಲಿಸಿ ಶ್ವಾಶಗಳೆಲ್ಲಾ ನಿಲಿಸಿದನೆ | ನಾಸಿಕಾಗ್ರದ ಕೊನೆಯ ಮೇಲೆ ಭಾನು ಪ್ರಕಾಶವ ತೋರಿದನೆ | ಈಶನು ದತ್ತ ಮಹೇಶ ದಿಗಂಬರ ಘೋಷದೊಳಗೆ ಮನವೀಸಿದನೆ 3
--------------
ಭೀಮಾಶಂಕರ