ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನಾರದ ಪ್ರಾರ್ಥನೆ) ನಾರದ ಮುನಿಯ ನಂಬಿರೋ ಸಜ್ಜನರೆಲ್ಲ ಪ. ನಾರದ ಮುನಿಯ ನಂಬಿ ಸೇರಿ ರಮೇಶನ ಘೋರದುರಿತ ಪರಿಹಾರಗೊಳಿಸುವಂಥ ಅ.ಪ. ಫಾಲದಿ ತಿಲಕ ನಾಮವು ಕಂಠದ ಮೇಲೆ ಜೋಲುವ ತುಳಸಿ ಮಾಲೆಯು ತಾಳ ವೀಣೆಗಳಿಂದ ಕಾಲಾನುಗುಣಸ್ವರ ಮಾಲೆ ತೋರುತ ಲಕ್ಷ್ಮೀಲೋಲನ ವಲಿಸಿದ 1 ವೇದೋಪನಿಷತ್ತುಗಳಗಾಂಧರ್ವ ವಿದ್ಯ ಹಾದಿಲಿ ತರಲು ಬಲ್ಲ ಬೋಧಿಪ ಪರತತ್ವ ವಾದವ ಸುರಕಾರ್ಯ ಸಾಧಿಸಿ ಹರಿಯ ಪ್ರಸಾದಕೆ ಪಾತ್ರನಾದ 2 ಪ್ರಲ್ಹಾದ ಧ್ರುವ ದ್ರೌಪದಿ ಮುಖ್ಯ ವೈಷ್ಣವ ರೆಲ್ಲರೀತನ ದಯದಿ ಎಲ್ಲ ಠಾವಲಿ ಲಕ್ಷ್ಮೀವಲ್ಲಭನಿಹನೆಂಬ ಸೊಲ್ಲ ತಿಳಿದು ಪರಮೋಲ್ಲಾಸ ಪಡೆದರು 3 ದೇವಾಸುರರ ಬಳಿಗೆ ಪೋಗುವ ತನ್ನ ಭಾವಾ ತೋರನು ಕಡೆಗೆ ಆವಾವ ಜನಕನುವೀವ ಮಾತುಗಳಾಡಿ ಪಾವನಾತ್ಮಕ ಹರಿ ಸೇವಾಫಲವ ಕೊಂಬ 4 ಬಂದನು ಕಲಿಯುಗದಿ ದಾಸರೊಳು ಪುರಂದರ ನಾಮದಲೀ ಮಂದಮತಿಯ ಕಳೆವಂದದಿ ಪ್ರಾಕೃತ ದಿಂದ ವೆಂಕಟಪತಿಯಂದವ ತಿಳಿಸಿದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತ್ತದೆಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸ್ಸಿಗೆ ಬರುತ್ತದೆ ಪ ಮುಂಡಕೆ ದಂಡೆಯ ಮಾಡಿಸಿದೆ ಮುಸುಕಲಿ ಸೋಭಾನ ಮಾಡಿದೆಮುಂಡಕೆ ರುಂಡವ ಕೂಡಿಸಿದೆ ಮಂಗಳಾರತಿ ಬೆಳಗಿಸಿದೆ 1 ಕೋತಿಯು ಅಲ್ಲಿ ಕುಣಿಯುತ್ತಿತ್ತು ಕೋಣವು ಮದ್ದಲೆ ಬಾರಿಸುತ್ತಿತ್ತುಕೋತಿಯ ಕಾಲನೆ ಮುರಿದೆ ಕೋಣನ ಮದ್ದಲೆ ಮುರಿದೆ2 ಹಾರುವವನನು ಕಟ್ಟಿ ಹಾಕಿಸಿದೆ ಹಾದಿಲಿ ದೀಪವ ಹಿಡಿಸಿದೆಮೂರು ಮನೆಯ ಮೇಲಟ್ಟದಲ್ಲಿ ಮೆರವಣಿಗೆಯನೆ ಮಾಡಿಸಿದೆ3 ಒಳ್ಳೆ ಬೀಗರ ಬೆಳ್ಳಿ ತಳಿಗೆಯಲ್ಲಿ ಎಲ್ಲರ ಒತ್ತೊತ್ತಾಗಿ ಕೂರಿಸಿದೆಬೆಲ್ಲದ ಪರಮಾನ್ನವನೆ ಉಣಿಸಿದೆ ಬೆಳ್ಳನೆ ಉಡುಗೊರೆ ಹೊದಿಸಿದೆ 4 ಗುಡ್ಡ ಮೂರ ಕೊನೆಯಲಿದ್ದ ಅಡ್ಡಗಲದೆ ದೇವರ ಮನೆಗೊಯ್ದುದೊಡ್ಡ ಚಿದಾನಂದ ಗುರುವಿಗೆ ನಾ ಅಡ್ಡಗೆಡವಿ ಮದುವೆ ಮಾಡಿಸಿದೆ5
--------------
ಚಿದಾನಂದ ಅವಧೂತರು
ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ಪ ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿಕಣಕ ಕುಟ್ಟೋ ಒನಕಿಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ 1 ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿಹುಗ್ಗಿ ಮಾಡೋ ಸೌಟಲಿ ಹೊಡೆದರೆ ಕುಯ್ ಕುಯ್ ರಾಗವ ಪಾಡುವಿರಿ 2 ಹಿರಿಯ ಹಾದಿಲಿ ಓಡುವಿರಿ ಕರಿಯ ಬೂದಿಲಿ ಹೊರಳುವಿರಿಸಿರಿ ಕಾಗಿನೆಲೆಯಾದಿಕೇಶವನ ಸ್ಮರಿಸದವರ ಗತಿ ತೋರುವಿರಿ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ನಂಬಿ ನಡಿಯಿರೋ | ನಂಬಿ ನಡಿಯಿರೋ | ಗುರುಪಾದವಾ ನಡಿಯಿರೋ ನಂಬಿ ನಡಿಯಿರೋ | ನೇಮದಲಿ ಅತಿ | ಪ್ರೇಮದಲಿ ಪ ತಿರುಗುವರೇ ನೀ ಮರಗುವರೇ | ಇಹದೇನೋ ಗುಣವಹುದೇನೋ | ತಾರಕರಿಲ್ಲ ಪೋಷಕರಿಲ್ಲಾ | ಸುವರುಂಟೆ ಬೆಳಗುವರುಂಟೆ1 ಬಾಳಿ ತೊಳಲಿ ಘನ ಬಳಲಿ | ಬಂದೀಗ ನೀ ನಿಂದೀಗ | ಹಾದಿಯನು ತಿಳಿ ಭೇದಿಯನು | ಶರಣವನು ಪಿಡಿ ಚರಣವನು 2 ನಿರ್ಜರ ತರುವೆ ಸರ್ವರ | ನಿಜದರುವೆ ಕರುಣವಗರವೇ | ಪಾಡುತಲೀ ನಲಿದಾಡುತಲಿ | ಡ್ಯಾಡಿ ನಮನವನೇ ಮಾಡಿ | ಸ್ವಾನಂದದ ಸುಖ ಸೂರ್ಯಾಡಿ | 3 ಮೌಳಿ ಉಚ್ಛಿಷ್ಟ ಚಾಂಡಾಳಿ | ಳೆಂಬೋಪಾಸನ ಧ್ಯಾಸನಾ | ಹಾದಿಲಿ ನಡೆವರೇ ನೋಡುವರೇ | ಅಮೃತ ಕೊಂಡಂತಾಯಿತು ಗುಣಹೇತು 4 ತಿಗಳ್ಯಾಕೆ ಚಿಂತಿಗಳ್ಯಾಕೆ | ಆಚರಿಯಾ ನೀ ಕೇಳರಿಯಾ | ಗೋವಿಂದಾ ಶ್ರೀ ಮುಕ್ಕುಂದಾ | ಇಹಪರವು ನಿಜ ಸುಖದರವು 5 ಮನದೊಳಗೆ ಈ ಜÀನದೊಳಗೆ | ಡಂಭವ ದೋರುತ ಎರೆಯುತ | ತೋರುವುದಲ್ಲಾ ಗುಣಸಲ್ಲಾ | ಕಿಡಿಸುವರೇ ನೀ ಧರಿಸುವರೇ6 ವಾರ್ತೆಗಳಾ ಮನೆವಾರ್ತೆಗಳಾ | ಪ್ರಾಣವನು ಅಪಾನವನು | ಹಾರಿಸಿದೀ ನೀ ತೋರಿಸಿದೀ | ಏನಾದರೂ ಏನಿಲ್ಲಾ ಸಮ್ಯಕ್ | ಜ್ಞಾನವಾಗದೆ ಸಿಲ್ಕುವದೀ 7 ಸೌಮ್ಯದಲಿ ನಿಷ್ಕಾಮ್ಯದಲಿ | ಸವನಿಟ್ಟು ರತಿಗಳನಿಟ್ಟು | ನಿಲದ್ಹಾಂಗ ಚಲಿಸದಲ್ಹಾಂಗ | ಗುರುವಾಜ್ಞೆಯಲಿ ಅಭಿಜ್ಞೆಯಲಿ 8 ಭಕ್ತಿಯಲಿ ನಿಜವೃತ್ತಿಯಲಿ | ಮಹೀಪತಿಯಾ ಸುಚರಿತೆಯಾ | ಪಡಕೊಂಡವರನವರಿತಾ ಸುಖಭರಿತಾ | ಭವ ಸುಗಮದಲಿ ನೀ ಬೇಗದಲಿ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಜಿಯಿದ್ದೋರೆಲ್ಲ ಕೇಳ್‍ಬಹುದಣ್ಣ ಪೂಜೆ ಮಾಡೋ ಇದ ಹೇಳತೀನಣ್ಣ ಪ ಸಾಜದ ಹಾದಿಲಿ ಬಾಳ್ಯವ್ರಣ್ಣ ಅ.ಪ ಹಾಸಿಗೇಲಿ ತಿಂಡಿ ತಿನಬಾರ್ದಣ್ಣ ಮೋಸದ ಯೋಚನೆ ಯಿರಬಾರ್ದಣ್ಣ ಕಾಸಿಗೆ ಸುಳ್ಳ ಯೋಳ್ಬಾರದಣ್ಣ 1 ನಾಮ ಇಬೂತಿಯ ಅಣೆಗಚ್ರಣ್ಣ ರಾಮಾ ನಿನ್ಪಾದ್ವೇಗತಿಯೆನ್ನಣ್ಣ 2 ಮಣ್ಣಿನ ಭೂಮಿಯ ನಂಬದಿರಣ್ಣ ಸಣ್ಣ ಕೃಷ್ಣನೇ ಗತಿಯೆನ್ನಣ್ಣ 3 ನೋಡುವ ಕಣ್ಗಳ ಮನದಲಿಡಣ್ಣ ನೋಡದರಲಿ ಹೊಳೆ ಹೊಳೆವಾಬಣ್ಣ 4 ಅದರ ಮೇಲೆಳ್ಡು ಕಾಲ್ಗಳ ನೋಡಣ್ಣ ಮದನ ಗೋಪಣ್ಣನು ಕಾಣುವನಣ್ಣ 5 ಮಡಿಯ ಪೀತಾಂಬ್ರದವುಡಗೆಯ ನೋಡಣ್ಣ ಹಿಡಿದೆತ್ತಿದ ಕೈಕೊಳಲನು ನೋಡು 6 ಮುಡಿಯ ಕಿರೀಟದ ಹೊಳಪನು ನೋಡು ನಡುಹಣೆಯ ನಿಡು ತಿಲಕವ ನೋಡು ಕಡೆನೋಟದ ಕಣ್ಮಿಂಚನು ನೋಡು 7 ಅಂಬರದಂತೆ ಸರೀರವ ನೋಡು ನಂಬಿಕೆಯಲಿ ಸರಣಾರ್ತಿಯ ಮಾಡು 8 ಬೋಗಾನಂದವ ಪಡಿತೀಯಣ್ಣ ಕೂಗಿಗೆ ಬರುವನು ಮಾಂಗಿರಿಯಣ್ಣ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್