ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಯಾತರ ಬಾಳೋಣಾ | ಮನವೇಗತಿ ಹಾದಿಯಾ ನೆನೆದೇನಾ ಪ ನರಜನ್ಮದಲಿ ಬಂದು ಪರಿಪರಿಯಲಿ ನೊಂದು | ಬರಿಯಾವಡಲ ಹೊರೆದೇನಾ 1 ತಲೆವೂರಿ ತಪಗೂಡಿ ಹಲವ ಕಾಲವ ಮಾಡಿ | ನೆಲೆಯ ಲೇಶವ ಪಡೆದೇನಾ 2 ತಂದೆ ಮಹಿಪತಿ ನಂದನ ಸಾರಥಿ ಹೊಂದುವದು ಇನ್ನಾರೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೋಲನ್ನ ಕೋಲೇ ಕೋಲೇ ಕೋಲನ್ನ ಕೋಲೇಸದ್ಗುರುವ ಬಲಗೊಂಬೆ ಕೋಲನ್ನ ಕೋಲೆ ಪ ನಾಯಿಗೋಣನೆ ಮುರಿದು ನಾಗಾರ ಇಲಿ ತಿಂದುಹೋಯಿತೇ ಕಣ್ಣು ಕಾಗೆಯದು ಕೋಲನ್ನ ಕೋಲೆ 1 ಕಷ್ಟದ ಹದ್ದನೆ ಬಡಿದು ಇಷ್ಟವಿಲ್ಲದೆ ಗುಡ್ಡವನೇರಿದವನ ನರಿಸೂಚಿಸಿತೇ ಕೋಲನ್ನ ಕೋಲೆ2 ಆನೆಯ ಅಣುನುಂಗಿ ಅಡರಿತೇ ಮೇಲಕೆಕೋಣನ ಕೋಗಿಲೆ ನುಂಗಿತೇ ಕೋಲನ್ನ ಕೋಲೆ 3 ಊದಿತ್ತು ಓಲೆಯು ಒಂಭತ್ತು ಮಡಕೆಗೆಹಾದಿಯಾಯಿತೇ ನಡುವಣ ಮಾರ್ಗ ಕೋಲನ್ನ ಕೋಲೇ4 ಕದವನೆ ತೆರೆದು ಕಳ್ಳರ ಬಲಿಕೊಟ್ಟುಮೊದಲಗಿತ್ತಿಗೆ ಮೂಗುತಿಯಿಟ್ಟೆ ಕೊಲನ್ನ ಕೋಲೇ 5 ತುಂಬಿ ಕಮಲ ಕಳೆಯೇರೆ ಕೋಲನ್ನ ಕೋಲೇ 6 ಓಡಿಲಗಲ ಮಾಡಿ ಉಣ್ಣದೂಟವುಂಡುಓಡುವ ಹಾರುವನ ಕಟ್ಟಿಹಾಕಿ ಕೋಲನ್ನ ಕೋಲೆ 7 ಕೋತಿಯು ಸತ್ತಿತೇ ಕೊಡವೀಗ ಒಡೆಯಿತೇಜೋತಿಯು ಒಳಗ್ಹೊರಗೆ ಬೆಳಗಿತೇ ಕೋಲನ್ನ ಕೋಲೆ 8 ಮುದುಕಿಯನೆ ಕೊಂದು ಮರವನೆ ಮುರಿದೊರಗಿಚಿದಾನಂದ ಬ್ರಹ್ಮ ತಾನಾಯಿತೇ ಕೋಲನ್ನ ಕೋಲೆ9
--------------
ಚಿದಾನಂದ ಅವಧೂತರು
ಲಕ್ಷ್ಮೀನಾಥ ವಿಠಲ | ರಕ್ಷಿಸೊ ಇವನಾ ಪ ಇಕ್ಷುಚಾಪನ ಪಿತನೆ | ಅಕ್ಷರನೆ ದೇವಾ ಅ.ಪ. ನಿತ್ಯ ತೃಪ್ತಾತ್ಮಾಅರ್ಥಿಯಲಿ ಲಕ್ಷ್ಮಿಯನು | ಭಕ್ತಿಯಿಂ ಸೇವಿಸುತಪ್ರಾರ್ಥಿಸುವ ತವಪ್ರೀತಿ | ಲಕ್ಷ್ಮಿವಲ್ಲಭನೇ 1 ಅಪ್ರಮೇಯನ ಪತ್ನಿ | ಲಕ್ಷ್ಮಿಯನೆ ತುತಿಸುತ್ತಸುಪ್ರಸಾದವ ಕೊಂಡು | ಗೃಹಕಾಗಿ ತೆರಳೀಅಪ್ರತಿಮ ಸಂತಸದಿ | ಹರಿಯ ಕೊಂಡಾಡುತ್ತಅಪ್ಪವೆಂಕಟನನ್ನು | ಹಾಡಿ ಹೊಗಳಿದನಾ 2 ವೇದಾಂತ ವೇದ್ಯ ಹರಿ | ವೇದ್ಯವಾಗಲಿ ಇವಗೆಮೋದ ತೀರ್ಥರ ಮತದ | ಸಾದು ತತ್ವಗಳುಹಾದಿಯಾಗಲಿ ಮುಕುತಿ | ಸಾಧನ ಸುಮಾರ್ಗಕ್ಕೆಬಾದರಾಯಣ ದೇವ | ಮಾಧವನೆ ಹರಿಯೆ 3 ಕರ್ಮಮರ್ಮವ ತಿಳಿಸಿ | ದುಷ್ಕರ್ಮ ಪರಿಹರಿಸಿನಿರ್ಮಮನ ಮಾಡಯ್ಯ | ಬ್ರಹ್ಮಾದಿ ವಂದ್ಯಪ್ರಮ್ಮೆಯಂಗಳ ಬೋದ | ಸಲ್ಲಲಿತವಾಗಿರಲಿಅಮ್ಮಹಾ ಪರದೈವ | ಹರಿಯೆಂದು ತಿಳಿಸೊ4 ಅದೈತ ತ್ರಯದರಿವು | ಬುದ್ದಿಗೇ ನಿಲುಕಿಸುತಸಿದ್ಧಾಂತ ಪಥವೆಂಬ | ಹೆದ್ದಾರಿ ನಡಸೋಕೃದ್ಧಬಳಮರ್ದನನೆ | ಮುದ್ದು ನರಹರಿದೇವಅದ್ವಿತೀಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಾರಿ ಭಜಿಸಿರೋ | ವಿಜಯ ಗುರುಗಳೆಂಬರಾ ಪ ಚಾರು | ಚರಣ ತೊರ್ಪರಾ ಅ.ಪ. ಸತ್ರಯಾಗದೀ ಗಂಗೆ | ಕ್ಷೇತ್ರ ತೀರದಿಭ್ರಾತೃವರ್ಗವೂ ಅವರ ತುತಿಸಿ ಕಳುಹಲೂ 1 ಗಿರಿಜೆ ರಮಣನಾ ಪುರವ | ಸಾರಿ ಬೇಗನೇಮಾರ ಕೇಳಿಯಾ ನೋಡಿ | ಗಿರಿಯ ತ್ಯಜಿಸಿದಾ 2 ಚತುರವದನನಾ ದಿವ್ಯ | ಸತ್ಯಲೋಕವಾಚತುರ ಸೇರುತಾ ಅವನ | ಸ್ತುತಿಯ ಮಾಡಿದ 3 ವೇದ ಪಠಿಸುತಾ | ಬಧಿರನಂತಿರೇವದಗಿ ಸಾಗಿದಾ | ನಾರ್ದ ದೂತನೂ4 ಹರಿಯೆ ಕಾಣುವೆ ಎಂದು | ತ್ವರದಿ ಬಂದನೂಹರಿಯ ಮಾಯವಾ ಜಗದಿ | ಯಾರು ಅರಿವರು 5 ನಿದ್ರೆ ಬಂದವಾ | ನಂತೆ ಮಲಗಿಹಾಭದ್ರ ಮೂರ್ತಿಯಾ ತಾನು ಕಾಲಿಲೊದ್ದನು 6 ಪಾದ ಒತ್ತುತಾಮೋದ ಬಡಿಸಿದಾ ತಾನು | ಸಾಧು ಮುನಿಯನು 7 ಹರಿಯೆ ಪರನೆಲ್ಲಾ | ಹರಿಯ ಸರ್ವಜ್ಞಾಹರಿಗಿನ್ನಿಲ್ಲವೋ | ಸಮರು ಅಧಿಕರವಾ 8 ಎಂದು ಸ್ಥಾಪಿಸೀ | ತಾನು ಬಂದು ನಿಂತನುಛಂದದಿಂದಲಿ ಯಜ್ಞ | ಸಾಂಗಗೈಸಿದಾ 9 ಪದಸುಳ್ಹಾದಿಯಾ | ರಚಿಸಿ ಮೋದದಿಂದಲೀವೇದ ಸಾರವಾ | ಜನಕೆ ಬೋಧಿಸೀರುವಾ 10 ಪವನನಯ್ಯನಾ ಗುರು | ಗೋವಿಂದ ವಿಠಲನಾಸ್ತವನ ಮಾಡುತ ತಾನು | ಭವವ ಕಳದನಾ 11
--------------
ಗುರುಗೋವಿಂದವಿಠಲರು