ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಯತಿ ; ದಾಸ ನಮನ ಶ್ರೀ ವಿದ್ಯಾಧೀಶರು ಪಾದ ಪದ್ಮಂಗಳಿಗೆ ಪ. ಸಾಧನದಗೋಸುಗಕೆ ಮೇದಿನಿಯೊಳ್ ಜನಿಸಿಸಾಧನವ ಕಾಣದೆ ಮೋದಗೊಂಡಿಹೆನುಸಾಧುಜನ ಪ್ರಿಯನೆ ಸಾದರದಿಂದಲಿಭೇದ ಕಂಚಜ್ಞಾನ ಹಾದಿಯನೆ ತೋರುತಲಿ 1 ಧರೆಯ ರಮಣನು ತಾನು ಧೊರೆ ಎಲ್ಲ ಜಗಕೆಂದುಪರಿಪರಿ ಸ್ತುತಿಸುವಾ ಪರಮ ಭಕುತಿಯನಿತ್ತುಪರಿಪಾಲಿಸಬೇಕು ಕರಮುಗಿದು ಪ್ರಾರ್ಥಿಸುವೆಶರಣು ಜನ ಪರಿಪಾಲಾ 2 ನಿರುತ ಸಂಸಾರದೋಳ್‍ವೈರಾಗ್ಯ ಕರುಣಿಸಿ ಕರಪಿಡಿಯೋ ಕರುಣಾಲವಾಲಪರಮ ಪಾವನ ತಂದೆವರದವಿಠಲನಚರಣವನು ಭಜಿಸುವೆನು ಮರುತ ಮತ ಮೋಹನ 3
--------------
ಸಿರಿಗುರುತಂದೆವರದವಿಠಲರು
ಗುರುವಿನ ಕಾಣದೆ ಪರಗತಿ ದೊರೆಯದು ಪ ವೇದ ಶಾಸ್ತ್ರಗಳ ನೋದಿ ಭೇದಿಸದೆ | ವಾದದಿಂದ ಜನಗೆದ್ದನು | ಕೊಂಡ ಗಾದಿಯಂತೆ ನಿಜ | ಸಾಧುರ್ಹಾದಿಯನೆ ಮರೆತನು 1 ಕರ್ಮ ಧರ್ಮ ಸಾರಯಜ್ಞದಿ | ಭೂರಿಯಶವನೆ ಪಡೆದನು | ಏರಿ ಸ್ವರ್ಗದಿ ಜಾರಿ ಬಿದ್ದ ಸಂ | ಸಾರ ವಾರಿಧಿಯ ಸೇರಿದನು 2 ರಂಜನಿಂದ ವಣಭಂಜನ್ಯಾತರೆದು | ಕಂಜನಾಭನ ನೆರೆ ನಿಲುಕನು | ಅಂಜಲೆತ್ತಿದರ ಗುರು ಮಹಿಪತಿ | ಪ್ರಾಂಜಳಾಗಿ ಘನದೋರುವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಖಿಯೆ ಲಾಲಿಸು ಎನ್ನ ಸಖನ ವರ್ಣಿಪೆ ಮುನ್ನ ಸುಖದಾತ ಸುಂದರನ ಪ್ರಾಣಸಖನ ಕಡುದೈನ್ಯದಿಂದೆರೆಯಲೊಡನೆ ಬಂದು ವೇದಗಳ್ಳನು ಪೋದ ಹಾದಿಯನೆ ತಾ ಪಿಡಿದು ವಾರ್ಧಿಯೊಳ್ಮುಳುಗಿ ಸಮ್ಮೋದದಿಂದ ಕ್ರೋಧಿರಕ್ಕಸನುರವ ಛೇದಿಸುತೆ ವೇದವ ನ್ನಾದರಿಸಿ ತಂದೀಯುತ ಜಗಕೆನಲವಿಂ ನಿರ್ಮಾಣ ಕಾರ್ಯದೋಳ್ ನಿಯಮಿಸಿದನಾ ಸ್ವರ್ಣಗರ್ಭನನಂತು ಮೀನನಾಗಿ ಅರ್ಣವದಿ ನೆಲೆಯಾಗಿ ನಿಂತ ಸುಗುಣ
--------------
ನಂಜನಗೂಡು ತಿರುಮಲಾಂಬಾ