ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತಿಗೆಟ್ಟೆ ಭವತಾಪವ್ಯಥೆಯಿಂದ ನಾನು ಸುತನರಿಕೆ ಹಿತದಿಂದ ಕೇಳು ಮಮಪಿತನೆ ಪ ವಿಧಿವಶದಿ ಸಿಲ್ಕಿ ನಾ ಉದಿಸಿ ಈ ಬುವಿಯೊಳಗೆ ಸದಮಲನೆ ತವಸ್ಮರಣವಿಧಿಯ ತಿಳಿಯದಲೆ ಉದಯದೇಳುತ ನಾನು ಅಧಮ ಉದರಕ್ಕಾಗಿ ವದನತೆರೆದನ್ಯರನು ಹುದುಗಿ ಬೇಡುತಲಿ 1 ಹಸಿತೃಷೆಯ ತಡೆಯದೆ ಪುಸಿಯಾಡಿ ದಿನಗಳೆದೆ ನಿಶೆಯೆಲ್ಲ ಸಂಸಾರವ್ಯಸನದೊಳು ಕಳೆದೆ ವಸನ ಒಡೆವೆಗೆ ಮೆಚ್ಚಿ ವಸುಧೆಯೊಳ್ತಿರುತಿರುಗಿ ಪುಸಿಯ ಮಾನವರನ್ನು ರಸನೆಯಿಂದ್ಹೊಗಳಿ 2 ವಾನರಗೆ ವಶನಾದಿ ದಾನವನ ರಕ್ಷಿಸಿದಿ ಮಾನವಗೆ ಆಳಾದಿ ದೀನದಯಾಸಿಂಧು ನೀನೆ ಗತಿಯೆನಗಿನ್ನು ಜ್ಞಾನಬೋಧಿಸಿ ಕಾಯೊ ಹೀನಭವ ಗೆಲಿಸಿ ಮಮಪ್ರಾಣ ಶ್ರೀರಾಮ 3
--------------
ರಾಮದಾಸರು
ಶ್ರೀಮಧ್ವ ಚಿತ್ತಮಂದಿರನೆ ನಿನ್ನಯ ಚರಣತಾಮರಸ ನೆರೆ ನಂಬಿದೆ ಪ ಕಾಮ ಕ್ರೋಧಗಳನ್ನು ಕಡಿದು ನಿನ್ನಯ ದಿವ್ಯನಾಮಾಮೃತವನುಣಿಸೋ ಸ್ವಾಮಿ ಅ.ಪ. ಪರ ನಾರಿಯರಮೋರೆ ಬಣ್ಣವನೆ ನೋಡಿಆರು ಇಲ್ಲದ ವೇಳೆ ಕಣ್ಣು ಸನ್ನೆಯಲವಳಕೋರಿದ್ದು ಇತ್ತು ಕೂಡಿವಾರಿಜನಾಭ ನಿನ್ನಾರಾಧನೆಯ ಮರೆದುಧಾರುಣಿಗೆ ಭಾರಾಗಿ ಅಶನ ಶತ್ರುವಾದೆ 1 ಉಪರಾಗ ಮೊದಲಾದ ದಶಮಿ ದ್ವಾದಶಿ ದಿನದಿಉಪೇಕ್ಷೆಯನು ಮಾಡಿ ಜರಿದೆ |ಉಪಕಾರವೆಂದು ನಿಜವೃತ್ತಿ ಪೇಳಿದರೆನಗೆಅಪಕಾರವೆಂದು ತಿಳಿದು |ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆತಪವೃದ್ಧರನ್ನು ಜರಿದೆ |ಸ್ವಪನದೊಳಗಾದರೂ ವೈರಾಗ್ಯ ಬಯಸದಲೆಕಪಟ ಮನುಜರೊಳಗಾಡಿ ನಿನ್ನ ಮರೆದೆನೊ ಸ್ವಾಮಿ 2 ಭೂಸುರರು ಚಂಡಾಲ ಜಾತಿಯನ್ನದೆ ಬಲುಹೇಸಿಕಿಲ್ಲದಲೆ ತಿರಿದೆ | ಆಶಾಪಾಶಕೆ ಸಿಲುಕಿ ಕಂಡಕಂಡಲಿ ತಿಂದುದೋಷರಾಶಿಯನು ತರುವೆ |ಆ ಸತೀ ಸುತರ ಸಲಹುವೆನೆಂದು ಪರಿಪರಿವೇಷವನು ಧರಿಸಿ ಮೆರೆವೆ |ವಾಸುಕೀ ಶಯನ ವಸುದೇವ ತನಯನೆ ನಿನ್ನದಾಸನೆನಿಸದಲೆ ಅಪಹಾಸ ಮಾನವನಾದೆ 3 ಹರಿದಾಸರಲ್ಲಿ ಒಂದರಘಳಿಗೆ ಕುಳಿತರೆಶಿರವ್ಯಾಧಿಯೆಂದ್ಹೇಳುವೆ |ದುರುಳ ದುರ್ವಾರ್ತೆಗಳ ಪೇಳಲು ಹಸಿತೃಷೆಯಮರೆದು ಆಲಿಸಿ ಕೇಳುವೆ |ತರುಣಿ ತರಳರು ಎನ್ನ ಪರಿಪರಿ ಬೈದರೆಪರಮ ಹರುಷವ ತಾಳುವೆ |ಗುರು ಹಿರಿಯರೊಂದುತ್ತರವನಾಡಲು ಕೇಳಿಧರಿಸಲಾರದಲೆ ಮತ್ಸರಿಸುವೆನೊ ಅವರೊಳಗೆ 4 ನಾ ಮಾಡಿದಪರಾಧಗಳನೆಣಿಸಿ ಬರೆವುದಕೆಭೂ ಮಂಡಲವೆ ನೆರೆ ಸಾಲದೊ | ಸೀಮೆಯೊಳಗುಳ್ಳ ದುರ್ಮತಿಯೆಲ್ಲ ಕೂಡಲುಈ ಮತಿಗೆ ಆದು ಪೋಲದೋಹೋಮ ಜಪತಪವು ಇನ್ನೆಷ್ಟು ಮಾಡಲು ಪಾಪಸ್ತೋಮ ಎಂದಿಗು ವಾಲದೊ |ಸಾಮಜ ವರದ ಮೋಹನ್ನ ವಿಠ್ಠಲ ನಿನ್ನ |ನಾಮವೊಂದಲ್ಲದೆ ಪ್ರಾಯಶ್ಚಿತ್ತವ ಕಾಣೆ5
--------------
ಮೋಹನದಾಸರು