ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದೆ ಚಿಂತಿಸಬೇಡ ಮನವೆ ಭಯಗೊಂಡು ಹರಿಯೊಲುಮೆ ನಮ್ಮಲ್ಲಿ ಸ್ಥಿರವಾಗಿ ಉಂಟು ಪ ಕೊಲ್ಲುವನೊ ಕಾವನೋ ನಿಲ್ಲುವನೊ ಪೋಗುವನೋ ಬಲ್ಲನೊ ಅರಿಯನೋ ಇದನೆಲ್ಲವೆನುತ ಸೊಲ್ಲುಸೊಲ್ಲಿಗೆ ಕರೆದು ಎಲ್ಲವನು ತಿಳುಹಿದರೆ ಕಲ್ಲಾಗುವನೆ ಸ್ವಾಮಿ ಜಗದ ವಲ್ಲಭನು 1 ಕರಿರಾಜ ಧ್ರುವನು ಪ್ರಹ್ಲಾದ ದ್ರೌಪದಿ ದೇವಿ ಮರೆವಿನೊಳಜಾಮಿಳನು ಕರೆಯಲಾಗಿ ಮೊರೆಯ ಲಾಲಿಸಿ ತಾಯಿ ಕರುವನರಸುವ ತೆರದಿ ಉರಗ ಗಿರಿವಾಸ 2 ಗರ್ಭದೊಳಗಿರುವಾಗ ಹಬ್ಬಿರುವ ಮಾಂಸಲತೆ ಉಬ್ಬಸವ ಬಿಡುತಿರಲು ಅಬ್ಬೆ ಸಲಹಿದಳೆ ಉಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲನು ಮುಂದೆ ತೋರಿದ (ರಾ)ರೊ ನಿನಗೆ 3 ಮಡದಿ ಮಕ್ಕಳನೆಲ್ಲ ಒಡಗೊಂಡು ಮಲಗಿರಲು ಕಡಸಾರ ಬಂದವಳು ಕಾಲು ಸುತ್ತಿ ನಡುವಿರುಳು ಹಿಡಿದಿರ್ದ ಹಿಡಿತಲೆಯ ಮೃತ್ಯುವನು ಬಿಡಿಸಿ ಸಲಹಿದರಾರು ಜಡನಾದ ಮನವೆ 4 ಹರಿಯನರಿಯದೆ ಮನದಿ ಮರುಗಿ ಕರಗಲು ಬೇಡ ಎರವು ಮಾಡದೆ ಸ್ವಾಮಿ ಪರಿಪರಿಯ ಸೌಖ್ಯವನು ಕರೆದು ಈವನು ನಮಗೆ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಬಳಿಯೊಳು ಕುಳಿತು ಹೊಗಳುವಗಿಂತ ಪ ಹುಳಿಯಾಗದೆ ಕಾಯಿಸಿಹಿದಹುದೇ ಮದ ಅಳಿದಲ್ಲದೆ ಹರಿಯೊಲುಮೆಯು ಬಹುದೇ ಅ.ಪ ಹಳಿವು ಮನದೊಳಿಹ ಕೊಳೆಯನು ಕಳೆವುದು ಹಳಿವಿರದಿರೆ ಮದ ಮೊಳೆದೋರುವುದು ಹಳಿವಿನ ಭಯದಿಂದ ಬೆಳೆವುದು ಶುದ್ಧತೆ ಹಳಿವು ಸತ್ಕೀರ್ತಿಯ ಬೆಳಗುವ ದೀಪ 1 ಮನದೊಳಸೂಯೆಯ ಕಳೆದು ನಾಲಗೆಯಲಿ ಇನಿವಾತುಗಳ ಬಿನ್ನಾಣವ ಬೀರಿ ನಿನಗೆ ಸಮಾನರಿನ್ನಿಲ್ಲಾ ಎಂಬ ಕ್ಷುಲ್ಲ ಮನುಜನು ಸ್ವಾರ್ಥದಿ ಕೆಡಿಸುವನಯ್ಯ 2 ಹಳಿವಿಂದಲೆ ಕೃಷ್ಣ ಮೂರು ರತ್ನವ ತಂದ ಹಳಿವಿಂದಲಿ ಸೀತೆ ಕೀರ್ತಿ ಹೊಂದಿದಳು ಹಳಿದಲ್ಲದೆ ಸತ್ಯ ಹೊರಹೊಮ್ಮದು ಯನ್ನ ಹಳಿವರನೊದಗಿಸೋ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮರೆಯದಿರು ಮನವೆ ಮಾಧವನ ನಮ್ಮದುರಿತದಾರಿದ್ರ್ರ್ಯವನು ಹರಿಸಿ ಹೊರೆವವನಪ.ಆಳರಿತು ಊಳಿಗವ ಕೊಂಡುಂಡು ದಣಿವಂತೆಮೇಲಾಗಿ ಜೀವವನು ಕೊಡುವ ದೇವನಕಾಲಕಾಲಕೆ ಮಾಳ್ಪ ನಡೆತಪ್ಪು ನುಡಿತಪ್ಪುಆಲೋಚಿಸದೆ ಕರುಣಿಸುವ ಕರುಣನ 1ಮೂಢನಾಗಲಿ ಮತಿಯುಳ್ಳ ನರನಾಗಲಿಪಾಡಿದಾಕ್ಷಣ ಭೃತ್ಯನೆಂದು ಒಲಿದುಕೂಡಿಕೊಂಬುವ ದೊರೆಗಳಿಲ್ಲ ಹರಿಯಲ್ಲದಾನಾಡಾಡಿಬಣಗುಕಲ್ಲುಗಳ ಬೇಡಿ2ಮುನ್ನಾರು ಅನ್ಯದೇವರ ಭಜಿಸಿ ಭವಗೆದ್ದರಿನ್ನಾರು ಹರಿಯೊಲುಮೆಯಲಿ ದಣಿದರುನಿನ್ನ ಗುರುಗಳಿಂದರಿತು ನೆರೆನಂಬು ಪ್ರಸನ್ನ ವೆಂಕಟಪತಿಯ ಪಾದವನಜವ 3
--------------
ಪ್ರಸನ್ನವೆಂಕಟದಾಸರು