ಮಾರಪಿತನ ತೋರಿದಲ್ಲದೆ ನಾ ಬಿಡೆ ನಿನ್ನ ಪಾದವ ಪ
ಧೀರ ಹನುಮ ಘೋರ ರೂಪವ
ತೋರಿ ಪಾರಲು ದೂರ ನಾ ಸಾರೆನು ಅ.ಪ.
ಭಾರ ಧರಿಸಿ
ಕೋರೆ ತೋರುತ ಘೋರ ರೂಪದಿ
ಪೋರನೆನ್ನಿಸಿ ನಾರಿ ಹತ್ಯದಿ
ಚಾರುವನವ ಸೇರಿದವನ 1
ಜಾರನೆನ್ನಿಸಿ ನಾರಿ ಮಾನವ
ಸೂರೆಗೊಳ್ಳುತ ಪಾರಿಪೋಗುವ
ಶೂರ ತೇಜಿಯನೇರಿ ಮೆರೆದ
ವಾರಿಜಾಕ್ಷನ ಧೀರ ಕಲ್ಕಿಯ 2
ದಾರಿ ತೋರದೆ ಸಾರಿ ನಿನ್ನನು
ಕೋರಿ ಭಜಿಪೆನು ಬಾರಿ ಬಾರಿಗೆ
ಭಾರತೀಶನೆ ತೋರು ಕರುಣದಿ
ಸಾರಸಾಕ್ಷ ರಂಗೇಶವಿಠಲನ 3