ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಗೈದೊಡೇನು ನಿನ್ನ ಬಿಡೆನು ನಾನೆಲೈ ಉದಧಿಶಯನ ಕೇಳೆಲೈ ಈ ಹದನ ಲಾಲಿಸೈ ಪ. ಎತ್ತ ಪೋದಡತ್ತ ನಿನ್ನ ಬೆನ್ನ ಹತ್ತುವೆ ನಿನ್ನ ಸುತ್ತಿ ಕಾಡುವೇ ನೀನೆತ್ತ ಪೋಗುವೆ 1 ಜಲಧಿಯಲ್ಲಿ ವಾಸಗೈದೆ ಬೇಸರಿಲ್ಲದೆ ಮೋದದೆ ನೀ ಏನಗೈದೆ 2 ಘೋರ ರೂಪಕಲಸದೆ ಕೆನ್ನೀರ ನೀಂಟಿದೆ ಕರುಳಮಾಲೆ ಧರಿಸಿದೆ ಕಪಟರೂಪ ತಾಳಿದೆ 3 ನಲಿದು ತಾಯ ತಲೆಯ ಕಡಿದು ಬಲಿದನೆನಿಸಿದೆ ಜಲಧಿಯನ್ನೆ ಕಟ್ಟಿದೆ ಛಲದಿ ದ್ವಿಜನ ಕೆಡಹಿದೆ 4 ಜಾರಚೋರನೆನಿಸಿ ಜಗವಗಾರುಗೊಳಿಸಿದೆ ಕುದುರೆಯೇರಿದೆ ಇನ್ನೇನು 5 ಇಷ್ಟು ಪಾಡುಪಟ್ಟ ನಿನ್ನ ಬಿಟ್ಟು ಪೋದೆನೆ ದಿಟ್ಟತನಕೆ ಭೀತಿಪಟ್ಟೆನೇ ನಿನ್ನ ಪಿಡಿಯದಿರ್ಪನೆ6 ಮೋಸಗಾರ ಶೇಷಶೈಲವಾಸನಹುದೆಲೈ ವಾಸಿಪಂಥವೇನೆಲೈ ಮೀಸಲಾಗಿ ಭಜಿಪೆ ನೋಡಲೈ7
--------------
ನಂಜನಗೂಡು ತಿರುಮಲಾಂಬಾ
ಕೇಳೇ ಯಶೋದೆ ನಿನ್ನ ತನಯನ ಲೀಲೆಯ ಪೇಳಲು ಅಳವಲ್ಲವೇ ಪ ಬಾಳುವ ಸತಿಯರ ಧಾಳಿ ಮಾಡುವ ಯದÀು ಮೌಳಿ ಶ್ರೀ ಕೃಷ್ಣಗೆ ಪೇಳೀ ವಿವೇಕವ ಅ.ಪ ಇಂದುವದನ ಎಮ್ಮ ಮಂದಿರಗಳ ಪೊಕ್ಕು ಪೊಂದುವ ಪಾಲ್ಬೆಣ್ಣೆಯ ಇಂದು ಸಿಕ್ಕಿದನೆಂದು ಕರಗಳಿಂ ಪಿಡಿಯಲು ಮಂದಹಾಸವ ಬೀರಿ ಮನವ ಸೋಲಿಸುವನು 1 ನೀರಿಗೆ ಪೋಗಲು ಯಾರೂ ಇಲ್ಲದ ವೇಳೆ ಸೇರುವ ಎಮ್ಮೊಡನೆ ಮೀರಿ ಪೋಗಲು ಕಾಲು ಬಾರದ ಎಮ್ಮೊಳು ಸಾರಸಾಕ್ಷ ಕೃಷ್ಣ ಸರಸವ ತೋರುವ 2 ನಿನ್ನ ತನಯ ಪ್ರಸನ್ನ ಶ್ರೀಕೃಷ್ಣನು ಅನ್ಯಾಯಕಾರನಮ್ಮ ಚನ್ನಾಗಿ ಇವನಿಗೆ ಬುದ್ಧಿ ಕಲಿಸದಿರೆ ಬೆನ್ನು ಹತ್ತುವೆವು ಕನ್ಯೆಯರೆಲ್ಲರು 3
--------------
ವಿದ್ಯಾಪ್ರಸನ್ನತೀರ್ಥರು
ನಾರಾಯಣನೆ ಈತ - ನಾರಿ ಒಳ್ಳೆಯವರಿಗೆ ಮಾಡ್ದ ವಿಘಾತ ಪ ಪರಿಪರಿಯಲಿ ಪೊಗಳುವ ಗೀತ - ನಾನೆಂದವರ ಮುರಿದ ಪ್ರಖ್ಯಾತ ಅ ಕೈಕಾಲಿಲ್ಲದೆ ಆಡ್ದಾಮೈಮೇಲ್ಭಾರವ ಪೊತ್ತು ನೋಡ್ದಾಕೋರೆಯಲಿ ತಿವಿದು ಹತ ಮಾಡ್ದಾತಾಕೊ ಎಂದು ಒದರಿ ಬಗೆದು ಬೀರ್ದಾಅರ್ತಿಯಿಂದ ಪಾತಾಳಕೆ ದೂಡ್ದಾಮುನಿಯ ಮಗನಾಗಿ ಕ್ಷತ್ರಿಯರ ಕಾಡ್ದಾರಾವಣಗಾಗಿ ಅಂಬುತೆಗೆದು ಹೂಡ್ದಾಆ ಜಮುನೆ ಪೊಕ್ಕು ಮೋಜು ಮಾಡ್ದಾದಿಗಂಬರ ವೇಷವ ತಾಳ್ದಾದಿಗಿದಿಗಿ ಎಂದು ಅಶ್ವವೇರ್ದಾ 1 ಪಾದ ಭೂಮಿ ತಾನೊಲ್ಲಇವನ ಕೊಡಲಿಬಾಯಿಗಿದಿರಿಲ್ಲಕೋ ಎಂದ ಲಂಕೆಗೆ ಬೆಂಕಿ ಮಲ್ಲಕೊಂಕಲಿ ಕೊಳಲನೂದಿ ಗೊಲ್ಲಮೈಮೇಲ್ ಗೇಣರಿವೆಯಿಲ್ಲಇವ ಮೇಲಾದ ತೇಜಿಯನೇರಬಲ್ಲ 2 ವೈರಿ ವನಕ್ಕೆ ಕೇಡು ತಂದಹಾಲ್ಮೊಸರ ಮೀಸಲು ಮುರಿದು ತಿಂದಬತ್ತಲೆ ನಿಂದು ಹತ್ತುವೆ ಕುದುರೆ ಎಂದಭರದಿ ಕಾಗಿನೆಲೆಯಾದಿಕೇಶವನೆಂದ3
--------------
ಕನಕದಾಸ