ಸಾಯವಲ್ಲದೋ ಮನಸು | ಕಾಯದೊಳಗೆ ಕುಳಿತುಕೊಂಡು | ಬಾಯ ಬಿಡಿಸುತಿಹುದು ಜನಕೆ ಪ
ಕಾಲಿಲ್ಲದೆ ಆಡುತಿಹುದು | ನಾಲಿಗಿಲ್ಲದೆ ನುಡಿಯುತಿಹುದು |ಕಣ್ಣಿಲ್ಲದೆ ನೋಡುತಿಹುದು | ಕರ್ಣವಿಲ್ಲದೆ ಕೇಳುತಿಹುದು 1
ಎತ್ತ ಹೋದರೆನ್ನ ಬೆನ್ನ | ಹತ್ತಿಬಂದು ಕಾಡುತಿಹುದು |ಕಿತ್ತಿ ಇದರ ಬೇರನೆನಗೆ ಮತ್ತೆ ತೋರಿಸುವವರ ಕಾಣೆ 2
ಇಂದು ಶರಣು ಹೊಕ್ಕು ಅವರ | ಹಿಂದೆ ಕಳೆಯಬೇಕಿದನ 3