ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿದ್ದರೇನು ಶ್ರೀ ಹರಿಗಲ್ಲದವನು ಪ ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ ಅ.ಪ ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ | ಅರೆ ಘಳಿಗೆ ಬಿಡದೆ || ಬಪ್ಪದಿಂದಲಿ ಅದರ ಪರಿಮಳದ ಸೊಬಗ ನೀ- | ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ 1 ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು | ಕಾಲವನು ಕಳೆವ ಬಗೆ ಬಲ್ಲಿರೆಲ್ಲ || ವೇಳೆವೇಳೆಗೆ ಹಸುವ ಕರೆದುಂಬ ನರನಂತೆ | ಕೀಳು ತೊಣಸಿಯು ಉಂಡು ಹರುಷಪಡಬಲ್ಲ್ಲುದೆ2 ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ | ಹೊಲಸು ಹೋಗ್ವುದೆ ಹಲವು ಕಾಲಿದ್ದರೆ || ಸಿರಿ ವಿಜಯವಿಠ್ಠಲನ ಬಳಿಯಲಿದ್ದರೇನು ದೂರಿದ್ದರೇನು 3
--------------
ವಿಜಯದಾಸ
ಚಿತ್ತಗೊಟ್ಟು ಸಿರಿಕೃಷ್ಣ ಕಾಯಿ ಕಂಡ್ಯ ಪ ಮತ್ತೊಬ್ಬ ನಾನಲ್ಲ ನಿನ್ನ ಭೃತ್ಯರ ಭೃತ್ಯಅ.ಪ ಕಾಲನವರ ಮುನ್ನ ಮುಂಚೂಣಿ ದಾಳಿಗೆಕೀಳು ಮನಮಂತ್ರಿ ಮೂಲೆಯ ಪೊಗಲುಮೂಲ ಬಲದಾಳಿಗೆ ಮುರಿದು ನಾನೋಡಲುಕಾಲಗೆಟ್ಟು ನಾನಿಹ ಕಾಲದಲ್ಲಿ 1 ಪಿತ್ತವೆಂಬ ಕಿಚ್ಚು ವಾತಕೂಡ್ಹೆಚ್ಚಿತುಹತ್ತಿಕೊಂಡು ದೇಹಪುರ ಸುಡುವಾಗಮತ್ತೆ ಶ್ಲೇಷ್ಮವು ಕೂಡಿ ಸುತ್ತು ಮುತ್ತೆಳೆವಾಗಎತ್ತ ಹೋಗಲೆಂಬ ಸಂಕಟದೊಳಗೆ 2 ತಿಂದೋಡಿ ಬಂಧುಗಳೆಲ್ಲ ಕೈಬಿಟ್ಟರುಮುಂದೆಮದೂತರು ಬಂದು ನಿಂದಾಗಎಂದಿಗಾದರು ಒಮ್ಮೆ ನೆನೆದುದ ಕೈಗೊಂಡುಹಿಂದಿಟ್ಟುಕೊಂಡೆನ್ನ ಕಾಯಿ ಕಂಡ್ಯ ಕೃಷ್ಣ3
--------------
ವ್ಯಾಸರಾಯರು
ಬಿದ್ದ ಹುಣ್ಣು ಮಾಯವಲ್ಲದವ್ವಾ ಹ್ಯಾಂಗೆ ಸಹಿಸಲಸಾಧ್ಯ ಬೇನೆ ನಿದ್ರೆ ಬರದವ್ವಾ ಪ ಬಿದ್ದ ಹುಣ್ಣು ಮಾಯವಲ್ಲದು ಮುದ್ದು ಮುಖ ನಿನ್ನಪಾದ ಪದ್ಮಕೆ ಬಿದ್ದು ಬೇಡುವೆ ಸದ್ದು ಮಾಡದೆ ಅಬ್ದಿಶಯನನೆಂಬ್ವೈದ್ಯನ್ನ್ಹಿಡಿತಾ ಅ.ಪ ಮುತ್ಯ ಅಜ್ಜರನಳೀತು ಯೀ ಹುಣ್ಣು ಮತ್ತು ಎನ್ನ ಹೆತ್ತ ತಾತ ಮಾತಾ ಪಿತರನು ಹತ್ತಿಕೊಂಡು ಭ್ರಾತೃ ಬಂಧುವನು ಗೊತ್ತಿಗ್ಹಚ್ಚಿತು ಎತ್ತಪೋದರೊ ಪತ್ತೆಗಾಣೆನು ಅತ್ತು ಅತ್ತು ಇದರ ಬೇನೆಗೆ ಸತ್ತು ಸತ್ತು ಹೋದರೆಲ್ಲರು ಪುತ್ರ ಮಿತ್ರ ಕÀ ಳತ್ರರೆಲ್ಲರ ವ್ಯರ್ಥಕೊಲ್ಲಿ ಬೆನ್ಹತ್ತಿದೆನ್ನಗೆ 1 ಎಷ್ಟು ಬಂಧುಬಳಗವನೀ ಹುಣ್ಣು ನುಂಗಿಬಿಟ್ಟಿದೆ ಇಷ್ಟು ಖೂನಕ್ಕುಳಿಸಿಲ್ಲೋರ್ವರನು ಶಿಷ್ಟಜನರಿಗೆ ಮೃತ್ಯು ಕಾಣ್ಹುಣ್ಣು ಬಿಟ್ಟಿಲ್ಲಾರನು ಎಷ್ಟು ಪೇಳಲಿ ನಷ್ಟಸುದ್ದಿಯನು ದುಷ್ಟಶಿಷ್ಟರೆಂಬರೆಲ್ಲರ ಕಟ್ಟಿ ಮುರಿದು ಮುಟ್ಟಿಗಿಯಮಾಡಿ ಮೊಟ್ಟೆಕಟ್ಟಿ ಕೊಟ್ಟು ಮೃತ್ವಿಗೆ ಕಟ್ಟಕಡಿಗೆ ಬೆನ್ನಟ್ಟಿದೆನಗೆ 2 ಕುಂತೆನೆಂದರೆ ಕುಂದ್ರಗೊಡದಮ್ಮ ಸಂತಜನರೊಳು ನಿಂತೆನೆಂದರೆ ನಿಂದ್ರ ಗೊಡದಮ್ಮ ಸಂತಸೆಂಬುದು ಇನಿತು ಇಲ್ಲಮ್ಮ ಅಂತರಂಗದಿ ನಿಂತು ಸುಡುವುದು ತಾಳಲೆಂತಮ್ಮ ಅಂತ:ಕರಣದಿ ಪೋಗಿ ಎನ್ನಯ ಅಂತ್ಯಕ್ವೈದ್ಯನಾದಂಥ ಪ್ರಾಣದ ಕಾಂತ ಶ್ರೀರಾಮನನ್ನು ಕರೆತಂದು ಕಾಂತೆ ಈ ಹುಣ್ಣು ಮಾಯ್ಸೆ ಬೇಗನೆ 3
--------------
ರಾಮದಾಸರು
ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಒಳ್ಳೆವೀರನೆಂಬೊ ಮಾತು ಸುಳ್ಳು ಕೃಷ್ಣರಾಯಮೈಗಳ್ಳನೆಂದು ಕರೆಯೋರಲ್ಲೊ ಅಜರ್ಂುನರಾಯ ಪ.ವೀರಮಾಗಧಯುದ್ಧಕ್ಕೆ ಬಾರೆಂದು ಕರೆಯಲು ಅಂಜಿನೀರೊಳಗೆ ಹೋಗಿ ಅಡಗಿದೆಯಲ್ಲೊ ಶ್ರೀಕೃಷ್ಣರಾಯ 1ಯುದ್ಧ ಮಾಡುವೆನೆಂದು ಸನ್ನದ್ದನಾಗಿ ಬಂದು ಅಂಜಿಗುದ್ದುಹೊಕ್ಕೆಯಲ್ಲೊ ನೀನು ಅರ್ಜುನರಾಯ2ಜರಿಯ ಸುತನು ಯುದ್ದದಲ್ಲಿ ಕರಿಯೆ ಅಂಜಿಕೊಂಡು ನೀನುಗಿರಿಯಮರೆಯಲ್ಲಡಗಿದೆಲ್ಲೊ ಶ್ರೀ ಕೃಷ್ಣರಾಯ 3ಬಿಂಕದಿಂದ ಬಾಣ ಧರಿಸಿ ಶಂಕಿಸದೆ ಅಂಜಿ ಬಂದುಮಂಕು ಮನುಜರಂತೆ ನಿಂತ್ಯೊ ಅರ್ಜುನರಾಯ 4ದೊರೆಯು ಮಾಗದ ಯುದ್ದಕ್ಕೆ ಬಾರÉಂದು ಕರೆದರೆ ಅಂಜಿವರಾಹನಾಗಿ ಓಡಿದೆಲ್ಲೊ ಶ್ರೀ ಕೃಷ್ಣರಾಯ 5ಪೊಡವಿರಾಯರೆಲ್ಲ ಒಂದಾಗಿ ಬಿಡದೆ ಯುದ್ಧಮಾಡೆನೆಂಬೊಬಡಿವಾರವು ಎಷ್ಟು ನಿನಗೆ ಅರ್ಜುನರಾಯ 6ಬಿಲ್ಲು ಧರಿಸಿ ಮಾಗಧನು ಬಿಲ್ಲಿಗೆ ಬಾ ಎಂದು ಕರಿಯೆಹಲ್ಲು ತೆರೆದು ಹೆದರಿಕೊಂಡ್ಯೊ ಶ್ರೀಕೃಷ್ಣರಾಯ 7ಸಿಟ್ಟಿನಿಂದಕರ್ಣಬಾಣ ಬಿಟ್ಟನಯ್ಯ ನಿನ್ನ ಮ್ಯಾಲೆಕೊಟ್ಟಿಯಲ್ಲೊ ಮುಕುಟವನ್ನು ಅರ್ಜುನರಾಯ 8ಹಲವುರಾಯರೆಲ್ಲ ನಿನ್ನ ನೆಲಿಯುಗಾಣದಂತೆÀ ಮಾಡೆಬಲಿಯ ಹೋಗಿ ಬೇಡಿದೆಲ್ಲೊ ಶ್ರೀ ಕೃಷ್ಣರಾಯ 9ಕರ್ಣನ ಬಾಣವು ನಿನ್ನಹರಣಮಾಡಲೆಂದು ಬರಲುಮರಣ ತಪ್ಪಿಸಿದೆನಲ್ಲೊ ನಾನು ಅರ್ಜುನರಾಯ 10ನಡವಕಟ್ಟಿ ವೈರಿಗಳ ಹೊಡೆಯಲಿಕ್ಕೆ ಅರಿವೊ ಕೃಷ್ಣಕಡಿಯಲಿಕ್ಕೆ ಜಾಣನಯ್ಯ ಶ್ರೀ ಕೃಷ್ಣರಾಯ 11ಎಷ್ಟು ಗರ್ವದಿಂದ ದ್ವಿಜಗೆಕೊಟ್ಟೊ ಭಾಷೆ ಶಪಥ ಮಾಡಿನಷ್ಟವಾಯಿತಲ್ಲೊ ವಚನ ಅರ್ಜುನರಾಯ 12ಎಲ್ಲ ವ್ಯಾಪ್ತಿ ಎಂಬೊ ಮಾತು ಎಲ್ಲಿದೆಯೊ ಈಗನಿನ್ನವಲ್ಲಭೆಯ ಒಯ್ದನ್ಹ್ಯಾಂಗೊ ಶ್ರೀಕೃಷ್ಣರಾಯ 13ಧೀರಾಧೀರರೆಲ್ಲ ಕೂಡಿ ವೀರನೆಂದು ಪೊಗಳಲುನಾರಿಯ ಸೀರೆಯ ಹ್ಯಾಂಗ ಸೆಳಿದಾನಯ್ಯ ಅರ್ಜುನರಾಯ 14ಶಂಭರಾರಿ ಪಿತನೆ ನಿನ್ನಜಂಬವೆಷ್ಟು ಕದ್ದುಕೊಂಡುತಿಂಬೋದಕ್ಕೆ ಜಾಣನಯ್ಯ ಶ್ರೀಕೃಷ್ಣರಾಯ 15ಎಷ್ಟುಗರುವ ನಿಮ್ಮೆಲ್ಲರ ಅಷ್ಟಗುಣವ ನಾನ ಬಲ್ಲೆಹೊಟ್ಟೆಬಾಕ ಭೀಮನಯ್ಯ ಅರ್ಜುನರಾಯ 16ಬತ್ತಲೆಂದು ನಗಲು ಜನರು ಮತ್ತೆನಾಚಿ ಕುದುರೆಯನ್ನುಹತ್ತಿಕೊಂಡು ಓಡಿದೆಲ್ಲೊ ಶ್ರೀ ಕೃಷ್ಣರಾಯ 17ವ್ಯರ್ಥಕೈಪ ಧರಿಸಿ ಕನ್ಯೆ ಎತ್ತಿಕೊಂಡು ಒಯ್ದಮ್ಯಾಲೆಹತ್ತು ಜನರು ನಕ್ಕರಲ್ಲೊ ಅರ್ಜುನರಾಯ 18ಕೃಷ್ಣಾರ್ಜುನರ ಈ ಸಂವಾದ ಸಂತುಷ್ಟನಾಗಿ ರಮಿ ಅರಸುಇಷ್ಟಾರ್ಥವ ಕೊಡಲಿ ನಮಗೆ ಶ್ರೀ ಕೃಷ್ಣರಾಯ 19
--------------
ಗಲಗಲಿಅವ್ವನವರು