ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿದ್ರೆಮಾಡಿದ ರಂಗ ನಿದ್ರೆಮಾಡಿದ ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ಪ. ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು 1 ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು 2 ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು 3 ತÀಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು ಏಳುಮೂರು ಬಾರಿ ನೀನು ಭೂಮಿಯ ಪ್ರದಕ್ಷಣೆಮಾಡಿ 4 ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು 5 ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು 6 ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾÀಗಿ 7 ಧರೆಯೊಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ 8
--------------
ವಾದಿರಾಜ
ಬಾರೆ ರುಕ್ಮಿಣಿ ನಿನ್ನ ಮುಖತೋರೆನಗೆಪಾಟಲಾಗದೆಸಾರ ಶ್ರೀಕೃಷನ್ಣ ತೊಡೆಬಿಟ್ಟುಬಾರೆ ರುಕ್ಮಿಣಿ ಪ. ಪಟ್ಟಾವಳಿ ಪಟ್ಟಾವಳಿ ಹರವಿಲ್ಲ ಕುಂತಿ ಮನೆಯವಿಶಿಷ್ಠ ಸಿಂಹಾಸನವ ತರಿಸೇವ ರುಕ್ಮಿಣಿ ಬಾರೆ1 ಜರದ ಸಿಂಹಾಸನಕೆ ಸರದ ಮಾಣಿಕವು ರಚಸಿಬರೆದಿವೆ ಮ್ಯಾಲೆ ದಶರೂಪಬರೆದಿವೆ ಮ್ಯಾಲೆ ದಿವ್ಯ ದಶರೂಪದಆಸನವ ದೊರೆಗಳು ಏರಿ ಕುಳಿತಾರೆ ಬಾರೆ ರುಕ್ಮಿಣಿ2 ಮುತ್ತಿನ ಸಿಂಹಾಸನಕೆ ಮುತ್ತು ಮಾಣಿಕವೆ ರಚಿಸಿಹತ್ತಾವತಾರವÀ ಬರೆದಿವೆಹತ್ತಾವತಾರ ಬರೆದ ಸಿಂಹಾಸನವಹತ್ತಿ ಪಾಂಡವರು ಕುಳಿತಾರೆ ಬಾರೆ ರುಕ್ಮಿಣಿ 3 ಮಂದಗಮನೆಯರೆಲ್ಲ ಚಂದ್ರಶಾಲೆಯೊಳಗೆಛಂದ ಛಂದದಲಿ ಹೊಳೆಯುತಛಂದ ಛಂದದಲಿ ಹೊಳೆಯುತ ನಿಂತಾರೆಗಂಧ ಕಸ್ತೂರಿ ಉದುರೂತ ಬಾರೆ ರುಕ್ಮಿಣಿ4 ಹರಿಯ ಮಡದಿಯರು ನಮ್ಮ ಕರೆಯ ಬರಲಿಲ್ಲೆಂದುಮರ್ಯಾದೆಯುಳ್ಳ ಶುಕವಾಣಿಮರ್ಯಾದೆಯುಳ್ಳ ಶುಕವಾಣಿ ರಾಮೇಶನಹರದೆಯರಿಗೆ ವಿನಯದಿ ನುಡಿದಳು ಬಾರೆ ರುಕ್ಮಿಣಿ5
--------------
ಗಲಗಲಿಅವ್ವನವರು
ಬೇಗನೆ ಬಾರೊ ದೇವ ಜಾಗೂ ಮಾಡದೆ ಪ ಬೇಗನೆ ಬಾರೊ ನೀನು ನಾಗಶÀಯನ ಕೃಷ್ಣ ಯೋಗಿ ಜನರು ಕಂಡು ಪೋಗಲೀಸರೆ ನಿನ್ನ ಅ.ಪ. ಹತ್ತಾವತಾರವಾಯ್ತು ಮತ್ತಗಜವ ಪೊರೆದೆ ಉತ್ತಮಪದ ಧ್ರುವಗಿತ್ತೆ ಮತ್ತೇನು ಕಾರ್ಯವೈಯ್ಯ 1 ತರಳ ಪ್ರಹ್ಲಾದನ ಕರುಣಾದಿ ಸಲಹಿದೆ ದುರುಳರ ಸದೆದ ಪರಿಯೆಲ್ಲವಾಯಿತು2 ಪರಿ ರೂಪವ ಧರಿಸಿದ ಎನ್ನದೇವ ಸಿರಿರಂಗೇಶವಿಠಲನೆ ಕರವೆತ್ತಿ ಮುಗಿಯುವೆ 3
--------------
ರಂಗೇಶವಿಠಲದಾಸರು
ದೇವರನ್ನು ಹಸೆಗೆ ಕರೆದ ಪದಗಳುವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ 1ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತಮಹಿಮಾ ಹಸಿಗೇಳೂ 2ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ 3
--------------
ಪ್ರಾಣೇಶದಾಸರು