ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪತಿ ಪೋದನೆಂದು ಶೋಕಿಸುವುದ್ಯಾಕೆ ಶ್ರೀ - ಪತಿಯು ಇರಲಾಗಿ ಮರುಳೆ ಪ ಪ್ರತಿ ಪ್ರತಿ ಜನ್ಮದಿ ಜತೆ ಮಾಡಿದ ಪಂಚ - ಕಾಯ ಸತ್ಯ ಸ್ಥಿರವಲ್ಲವೇ ಮರುಳೆ ಅ.ಪ ನೋತ ಪುಣ್ಯಾಪುಣ್ಯದ ಫಲ ವ್ರಾತ ಸುಖ ಸುಖವಿತ್ತು ಬರಿದಾಗುವುದು ನಿತ್ಯವಾಗಿ ಸುಖವೆ ಇರಲೆಂದು ಬೇಡಿದರೆ ವ್ಯರ್ಥಧಾವತೆ ಅಲ್ಲದೆ ಸಾರ್ಥಕೆಲ್ಲಿ ಮರುಳೆ 1 ಸೃಷ್ಟಿಯಲಿ ಎಲ್ಲರೂ ನಷ್ಟವಾಗುವರಲ್ಲದೆ ಶ್ರೇಷ್ಠರಾಗಿ ಬಾಳುವರೊಬ್ಬರಿಲ್ಲ ಎಷ್ಟು ಶೋಕಿಸಿದರು ಪೋದ ಕಾಷ್ಠ ಬರಲರಿಯದು ಎ- ಳ್ಳಷ್ಟು ಲಾಭ ಇದರಿಂದ ಇಲ್ಲ ಮರುಳೆ2 ಮುಟ್ಟಿ ಕಟ್ಟಿದ ತಾಳಿಯ ಸಂಬಂಧ ಕೊಟ್ಟ ಹರಿ ತಾ ತಟ್ಟನೆ ಒಯ್ದ ಮೇಲೆ ದುಷ್ಟವೆನ್ನದಲೆ ಇಷ್ಟವೆಂದೆಣಿಸಲು ಸೃಷ್ಟಿಪತಿಯು ತುಷ್ಟನಾಗುವ ಮರುಳೆ 3 ಸರಿಯಲ್ಲಾ ಬರಿದೆ ಚಿಂತಿಸುವುದು ನಿನಗೆ ಕರೆಕರೆಯು ಹೆಚ್ಚುವುದು ಮುಂದೆ ಬಹಳ ಹರಿಕಥೆಯ ಕೇಳು ಹರಿದಾಸರೊಳ್ ಬೀಳು ಹರಿಗೆ ಪೇಳು ನಿನ್ನಯ ಗೋಳು 4 ಇನ್ನಾದರೂ ನೀನು ಹರಿಯ ಸಂಕಲ್ಪವಿದೆಂದು ನಿನ್ನ ಮನದೊಳು ತಿಳಿದುಕೊಂಡು ಘನ್ನ ಮಹಿಮಾ ವಿಜಯ ರಾಮಚಂದ್ರವಿಠಲನ್ನ ಸನ್ನುತಿಸಲು ಮುನ್ನೆ ಹತಿಯಾಗುವುದು ಮರುಳೆ 5
--------------
ವಿಜಯ ರಾಮಚಂದ್ರವಿಠಲ