ಹುಚ್ಚರಾಗಿ ಕೆಡಬೇಡಿರೆಚ್ಚರವ ಪಡಿರೋ
ಮೆಚ್ಚಿ ಸ್ತ್ರೀಯರ ಇಚ್ಛೆಗೊಳಗಾಗದಿರಲೊ ಪ
ಬಡಿವಾರತನದಿಂದ ಕಡುದೈನ್ಯದೋರುವರು
ಒಡಲೊಳಗಿನ ಹರಳು ಒಡೆದರಳುವಂತೆ
ಒಡಲೊಳೊಂಚನೆ ಬಿಡರು ಕಡೆತನಕ ಸ್ಥಿರವಲ್ಲ
ಕಡುಪಾಪಿರೂಪಿನ ಮಡದಿಯರ ಮನವು 1
ಮನವ ಕರಗಿಸಿ ತನ್ನ ಮನೆಯ ಪುರುಷನ ಜರೆದು
ಮನಮೋಹಿಸಿನ್ನೊಬ್ಬ ಗೆಣೆಯನಂ ಕೂಡಿ
ತಿನುವಳು ಬಿಡದೊಂದುದಿನ ಪತಿಯ ಪ್ರಾಣಮಂ
ಘನಪಾಪಿ ವನಿತೆಯರ ಮನನಂಬಿಗಲ್ಲ 2
ತನ್ನ ಪುರುಷನಮುಂದೆ ಬಣ್ಣದಮಾತಾಡಿ
ಹಣ್ಣಿಗೆತಂದವನ ತನ್ನೊಶದಲಿರಿಸಿ
ಮುನ್ನ ಜನನೀ ಜನಕರನ್ನು ಅಗಲಿಸಿ ಒಡನೆ
ತನ್ನಯ ಅನುಕೂಲವನ್ನೆ ಸಾಧಿಪಳು 3
ಅವಗೆ ಹಿತವನೆ ತೋರಿ ಇವಗೆ ಕಾಲನೆ ಎತ್ತಿ
ಅವನಿಗೆ ಕೈಕೊಟ್ಟು ದಿವರಾತ್ರಿಯೆನದೆ ಭ
ಭವ ಭವವ ತಿರುಗುವರು
ಜೀವಘಾತಕಿಯರದಾವ ಭರವಸವೊ 4
ಹರಿದಿಯರ ಒಡನಾಟ ನರಕಕ್ಕೆ ಮೂಲವು
ದುರಿತಕ್ಕೆ ತವರಿದು ಮರೆಮೋಸದುರುಲು
ದುರುಳೆಯರ ಚರಿತಕ್ಕೆ ಮರುಳಾಗಿ ಕೆಡದೆ ಭವ
ಹರ ಶ್ರೀರಾಮನ ಪದಸ್ಮರಣೆ ಸಂಪಾದಿಸಿರೊ 5