ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೀದಿಯೊಳು ಯಾತರಾ ನಂಟು ಬೇಡ ದಮ್ಮಯ್ಯ ಪ ಭೇದಿಸಿ ನೋಡುವರುಂಟು ಬೆಂಬತ್ತಿ ಬಾರದಿರಯ್ಯ ಅ ಕಂಡ ಕಂಡ ಠಾವಿನಲಿ ಕಣ್ಣೆತ್ತಿ ನೋಡದಿರಯ್ಯಕಂಡಿಯೊಳು ಕೈಸನ್ನೆ ಮಾಡದಿರಯ್ಯಗಂಡನುಳ್ಳವಳ ಜೊತೆ ಭಂಡಾಟವ್ಯಾಕಯ್ಯಕೊಂಡೆಗಾತಿಯರುಂಟು ದುಡುಕದಿರಯ್ಯ 1 ಬೇಳುವೆಯ ಮಾತಾಡಿ ಗಾಳ ಹಾಕದಿರಯ್ಯಬಾಳೆ ಹಣ್ಣಿಗೆ ಕೊಡಲಿ ಬೇಕೆ ದಮ್ಮಯ್ಯಆಳುವ ಅರಸಾಗಿ ನಿನಗಾವ ಬರವಯ್ಯಮೇಳದವರ ಬಿಟ್ಟು ಮೇರೆದಪ್ಪುವರೇನಯ್ಯ 2 ನೋಡುವರು ಜನರೆಲ್ಲ ನಾಚಿಕೆ ಇಲ್ಲವೇನಯ್ಯಜೋಡು ಕಳಸವ ಹಿಡಿಯದಿರು ಜೋಕೆ ದಮ್ಮಯ್ಯಮಾಡುವ ದೈನ್ಯ ಬಲ್ಲೆ ಮದ್ದೂರು ನರಸಿಂಹಯ್ಯಕೂಡಿದ ಕನಕನಾದಿಕೇಶವ ನೀನಹುದಯ್ಯ 3
--------------
ಕನಕದಾಸ
ವಿಶೇಷ ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ ಹಡಗಿಂದ ಬಂದಿತು ಉತ್ತತ್ತಿ ಹಣ್ಣು ಬಡವರಿಗೆ ಬೇಕಾದ ಬಾಳೆಯ ಹಣ್ಣು ಕೂತರೆ ಏಳದು ಕುಂಬಳದ್ದಲ್ಲ ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1 ಮಕ್ಕಳು ಬಯಸುವ ಚಕ್ಕೋತ ಹಣ್ಣು ಸಕ್ಕರೆ ಸವಿಯಾದ ಅನಾಸಿನ ಹಣ್ಣು ರುಚಿ ಹಲಸಿನ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2 ದಾಹವಡಗಿಸುವದು ದ್ರಾಕ್ಷಿಯ ಹಣ್ಣು ದೊರೆಗಳು ತಿನ್ನುವ ದಾಳಿಂಬೆ ಹಣ್ಣು ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3 ಅತಿಮಧುರವಾದ ಕಿತ್ತಲೆ ಹಣ್ಣು ಯತಿಗಳಿಗಾನಂದ ಸೀತಾಫಲದ್ಹಣ್ಣು ಅತಿರುಚಿಯಾದ ಅಂಜೂರದ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4 ಮಾನವಂತರು ತಿನ್ನುವ ಮಾವಿನ ಹಣ್ಣು ಜ್ಞಾನಿಗಳಿಗೆ ರಾಮನಾಮದ ಹಣ್ಣು ದೀನಜನರು ತಿಂಬ ಮೂಸುಂಬೆ ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5 ಅಪರೂಪದಲಿ ಬೆಳೆದ ಮಾದಳದ್ಹಣ್ಣು ಕಪಿಗಳು ತಿನ್ನುವ ಸೀಬೆಯ ಹಣ್ಣು ತಪಸ್ವಿಗಳಾಹಾರ ಜಂಬುನೇರಳೆಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6 ಪರಿ ಔಪಧಕೆ ಹೆರಳೆಯ ಹಣ್ಣು ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು ಪರಮ ರೂಪಿಯಾದ ಕರಬೂಜದ್ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7 ಬಡವರಿಗೂ ಈ ಹುಣಸೇ ಹಣ್ಣಿರಬೇಕು ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು ರುಚಿ ಎಲ್ಲ ಜನರುಗಳು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8 ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9 ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10 ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
--------------
ನಿಡಗುರುಕಿ ಜೀವೂಬಾಯಿ
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ ಯಶವ ಬಡಿಗೋಲವನು ಎತ್ತುವರೇ ರಂಗಾ ಪ ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ| ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ| ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ| ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ 1 ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ| ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ| ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ| ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ 2 ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ| ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ| ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ| ನ್ಯೂನಾರಿಸದೇ ನಿನ್ನವನೆಂದು ಸಲಹೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಚ್ಚರಾಗಿ ಕೆಡಬೇಡಿರೆಚ್ಚರವ ಪಡಿರೋ ಮೆಚ್ಚಿ ಸ್ತ್ರೀಯರ ಇಚ್ಛೆಗೊಳಗಾಗದಿರಲೊ ಪ ಬಡಿವಾರತನದಿಂದ ಕಡುದೈನ್ಯದೋರುವರು ಒಡಲೊಳಗಿನ ಹರಳು ಒಡೆದರಳುವಂತೆ ಒಡಲೊಳೊಂಚನೆ ಬಿಡರು ಕಡೆತನಕ ಸ್ಥಿರವಲ್ಲ ಕಡುಪಾಪಿರೂಪಿನ ಮಡದಿಯರ ಮನವು 1 ಮನವ ಕರಗಿಸಿ ತನ್ನ ಮನೆಯ ಪುರುಷನ ಜರೆದು ಮನಮೋಹಿಸಿನ್ನೊಬ್ಬ ಗೆಣೆಯನಂ ಕೂಡಿ ತಿನುವಳು ಬಿಡದೊಂದುದಿನ ಪತಿಯ ಪ್ರಾಣಮಂ ಘನಪಾಪಿ ವನಿತೆಯರ ಮನನಂಬಿಗಲ್ಲ 2 ತನ್ನ ಪುರುಷನಮುಂದೆ ಬಣ್ಣದಮಾತಾಡಿ ಹಣ್ಣಿಗೆತಂದವನ ತನ್ನೊಶದಲಿರಿಸಿ ಮುನ್ನ ಜನನೀ ಜನಕರನ್ನು ಅಗಲಿಸಿ ಒಡನೆ ತನ್ನಯ ಅನುಕೂಲವನ್ನೆ ಸಾಧಿಪಳು 3 ಅವಗೆ ಹಿತವನೆ ತೋರಿ ಇವಗೆ ಕಾಲನೆ ಎತ್ತಿ ಅವನಿಗೆ ಕೈಕೊಟ್ಟು ದಿವರಾತ್ರಿಯೆನದೆ ಭ ಭವ ಭವವ ತಿರುಗುವರು ಜೀವಘಾತಕಿಯರದಾವ ಭರವಸವೊ 4 ಹರಿದಿಯರ ಒಡನಾಟ ನರಕಕ್ಕೆ ಮೂಲವು ದುರಿತಕ್ಕೆ ತವರಿದು ಮರೆಮೋಸದುರುಲು ದುರುಳೆಯರ ಚರಿತಕ್ಕೆ ಮರುಳಾಗಿ ಕೆಡದೆ ಭವ ಹರ ಶ್ರೀರಾಮನ ಪದಸ್ಮರಣೆ ಸಂಪಾದಿಸಿರೊ 5
--------------
ರಾಮದಾಸರು
ಕರುಣಿಸಿನ್ನಾದರೆ ರಂಗ ಸುರಾರಿಭಂಗಕರುಣಿಸಿನ್ನಾದರೆ ರಂಗ ಪ.ಹುಳು ಹಕ್ಕಿ ನಾಯಿ ನರಿ ಗಿಡ ಹುಲ್ಲು ಮುಳ್ಳುಗಳಜನ್ಮವಾಂತು ನಾ ಬಳಲಿದೆ ರಂಗನೆಲೆಗಾಣೆನಿನ್ನು ಮಾನಿಸನಾಗಿ ವೃಥನಾದೆಗುಳದ ಹಣ್ಣಿಗೆ ಸೊರಗಲ್ಯಾಕೊ ರಂಗ 1ತುದಿಮೊದಲಿಗೆ ಮದ ಮತ್ಸರದಿಂ ಬೇಗುದಿಗೊಂಡು ನಿನ್ನಂಘ್ರಿ ಮರೆದೆನೊ ರಂಗಪದುಮನಾಭನೆ ನನ್ನ ಹೊರೆಯಲಾರೆಯಹುಲ್ಲೆವದನಕ್ಕೆ ಮುಳ್ಳ ಕಡಿವಾಣ್ಯಾಕೊ ರಂಗ 2ಮಲೆತವನಾದರೊದಿಯೊ ನಿನ್ನಂಗಣದೊಳುತೊಳಲುವ ನಾಯಿಗೆ ಕ್ಲೇಶವು ಸಲ್ಲ ರಂಗಹಲವು ದುಷ್ಕøತ ನಿನ್ನ ನಾಮ ಘೋಷಣೆಯಲ್ಲಿನಿಲ್ಲಬಲ್ಲವೆ ಪ್ರಸನ್ವೆಂಕಟ ರಂಗ 3
--------------
ಪ್ರಸನ್ನವೆಂಕಟದಾಸರು