ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಕರವ ಮುಗಿವೆ ಚರಣಕ್ಕೆರಗುವೆ ಭರದಿ ರಕ್ಷಿಸು ಬಿಡದೇ ಶ್ರೀ ಪ ಮಾನವ ಕಾಯ್ದೆಯೊ ಹೀನರ ಮದಗರ್ವವನೆಲ್ಲ ಅಳಿದೆಯೊ ಧ್ಯಾನ ಮಾಡುವ ಸ್ವಾನುಭವಿಗಳ ಸ್ಥಾನ ಹೃದಯವಾಸ ಶ್ರೀ 1 ಧ್ಯಾನಿಸಿವಂಥಾ ಗಜರಾಜನ ಕಾಯ್ದೆ ಮಾನಿನಿ ಅಹಲ್ಯೆಯ ಪಾದದೊಳುದ್ಧರಿಸಿದೆ ದೀನರಕ್ಷಕ ಬಿರುದ ಪೊತ್ತ ವಿ ಜ್ಞಾನದೊಳಗಿರಿಸೆನ್ನಾ 2 ಶಬರಿಯ ಭಕ್ತಿಗೆ ಮೆಚ್ಚನೀ ಬಂದೆಯೊ ಬದರಿಯ ಹಣ್ಣನೆ ಸವಿಸವಿ ದುಂಡೆಯೊ ವಿಭು ಪರಮಾನಂದಾ ಪ್ರಭೆಯೊಳಗಿರಿಸಿದೆ 3 ಸ್ವರ್ಣಕಶ್ಯಪನ ಸೊಕ್ಕಗಿಸಿದೆ ದೇವಾ ಮನ್ನಿಸಿ ಪಾಂಡವರೈವರ ಸಲಹುವಾ ಚನ್ನ ಗೋಪಿಯರ ಕೂಡಿ ಮನ್ನಣೆಕ್ರೀಡೆಯ ನಾಡಿ 4
--------------
ಶಾಂತಿಬಾಯಿ
ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ ಸಚ್ಚಿದಾನಂದಾತ್ಮ ಹರಿಯೆಂದರಿಯದಲೆ ಪ ರಕ್ಕಸಾಂತಕ ಹರಿಗೆ ಸೊಗಸಿನ ತಕ್ಕ ವಾಹನವಿಲ್ಲದಿದ್ದೊಡೆ ಹಕ್ಕಿಯ ಹೆಗಲೇರಿ ತಿರುಗುವ ಚಿಕ್ಕ ಬುದ್ಧಿಯ ಚಲುವ ಕೃಷ್ಣಗೆಅ.ಪ ನೀರೊಳು ಮುಳುಗಿ ಭಾರವಪೊತ್ತು ಧರಣಿಯ ಕೋರೆದಾಡೆಲಿ ತಂದ ಕ್ರೂರ ರೂಪನಿಗೆ ಮೂರಡಿ ಭೂಮಿಯ ಬೇಡಿ ಕ್ಷಿತಿಪರ ಕೊಂದು ನಾರು ವಸ್ತ್ರಗಳುಟ್ಟು ಸೀರೆ ಕದ್ದವಗೆ ಶೂರತನದಲಿ ತ್ರಿಪುರರಗೆದ್ದು ವಿ- ಹಾರ ಮಾಡ್ಡ ಏರ್ದ ಕುದುರೆಯ ಮಾರಪಿತ ಮಧುಸೂಧನನ ವ್ಯಾ- ಪಾರ ತಿಳಿಯದೆ ವಾರಿಜಾಕ್ಷಿ 1 ಹಾಸಿಕಿಲ್ಲದೆ ಹಾವಿನ ಮೇಲೆ ಮಲಗುವ ಹೇಸಿಕಿಲ್ಲದೆ ಎಂಜಲ್ಹಣ್ಣನೆ ಮೆಲುವ ದೋಷಕಂಜದೆ ಮಾವನ ಕೊಂದು ಮಧುರೆಲಿ ದಾಸಿ ಕುಬ್ಜೆಯ ಡೊಂಕು ತಿದ್ದಿ ಪರಿಮಳ ಪೂಸಿ ಸೋಸಿನಿಂದಲಿ ಕರಡಿ ಮಗಳನು ಯೋಚಿಸದೆ ಕೈಪಿಡಿದು ಸೌಳ- ಸಾಸಿರದ ಸತಿಯರನು ಕೂಡಿದ ವಾಸುದೇವನ ಮೋಸವರಿಯದೆ 2 ಮೋಸದಿಂದಲಿ ಬಂದು ಶಿಶುವನೆತ್ತಿದ ದೈತ್ಯ ದಾಸಿಯ ಕೊಂದ ಉದಾಸೀನದಿಂದ ಗ್ರಾಸಕಿಲ್ಲದೆ ಗೋಪೇರ ಮನೆಗಳ ಪೊಕ್ಕು ಮೀಸಲು ಬೆಣ್ಣೆ ಪಾಲ್ಮೊಸರನೆ ಸವಿದು ರಾಸಕ್ರೀಡೆಯ ವನಿತೆಯರ ಮನ ದಾಸೆ ಪೂರೈಸಿ ರಾತ್ರಿ ವೇಳದಿ ವಾಸುದೇವನು ಓರ್ವ ಸತಿಯೊಳು ಕ್ಲೇಶಪಡಿಸದೆ ಮೋಸವರಿಯದೆ3 ಅಖಿಳ ಮಹಿಮನೆನೆ ಊಳಿಗ ಮಾಡಬಹುದೆ ಚಂಡನಾಡುವ ನೆವದಿಂದ ಕಾಳಿಂಗನ ಮಂಡೆಯ ತುಳಿದು ನಾಟ್ಯವನಾಡಬಹುದೆ ಗಂಡುಗಲಿ ಅರ್ಜುನನು ರಥಕೆ ಬಂಡಿಬೋವನ ಮಾಡಬಹುದೆ ಪುಂಡಲೀಕನು ಇಟ್ಟೆಗೆಯ ಮೇ- ಲ್ಪಾಂಡುರಂಗ ನಿಲಿಸಬಹುದೆ4 ಕಮಲಾಕ್ಷ ಯಾಗಶಾಲೆಗೆ ಗೋಪರನು ಕಳುಹಿ ರಮೆಯರಸಗೆ ಬಹಳ್ಹಸಿವೆನುತಿರಲು ಕಮಲಾಕ್ಷನ ನುಡಿ ಗಮನಿಸದೆ ರುಷಿವರರಿಗೆ ಕಮಲ ಮುಖಿಯರೆಲ್ಲ ಪರಮ ಸಂಭ್ರಮದಿಂದ ಕಮಲನೇತ್ರಗೆ ವಿವಿಧ ಭಕ್ಷಗ- ಘೃತ ಪರಮಾನ್ನಗಳನು ಕಮಲನಾಭ ವಿಠ್ಠಲಗೆ ಅರ್ಪಿಸಿ ಶ್ರಮವ ಕಳೆದೈದಿದರು ಮುಕ್ತಿಯ 5 ಯಾಕೆ ಮೆಚ್ಚಿದೆಯಮ್ಮ ಲೋಕ ಸುಂದರಿಯೆಶ್ರೀ ಕಮಲಜಪಿತ ಲೋಕ ಮೋಹಕನ
--------------
ನಿಡಗುರುಕಿ ಜೀವೂಬಾಯಿ