ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿಕ್ಕೆಯಿಲ್ಲ ನಮ್ಮ ಕಡೆಗೆ ಸೊಕ್ಕಿ ಬಂದರಾರೆರು ಚಿಕ್ಕ ಮನುಷ ಕೆಂಚೆಗೌಡ ಠಕ್ಕ ಮುನಿಯ ಭಾವಬಿರಿಯ ಬೆಂಕಿಯಂತೆ ತೋರ್ಪನೊಬ್ಬ ಪರಶುರಾಮನು ಪ ಆನೆಯಲ್ಲಿ ತೇಜಿಯಿಲ್ಲ ಸೇನೆ ಬಹಳವಾಗಿಯಿಲ್ಲ ಹೀನಗೆಟ್ಟು ದಂಡು ಬಂದು ಮಾನಗೊಂಡು ಹೆಣ್ಣುಗಳನು ಭಾನು ಮುಟ್ಟಲೆತ್ತಿ ಆಸಿಯ ದೀನ ಬೇಕು ಬೇಡೆಂದೆಂಬರಿಲ್ಲ 1 ಮನೆಗಳನ್ನು ಹೊಕ್ಕು ಚಾರುವರಿದು ಕೊಟ್ಟ ಕಣ್ಣಿಯ ಸೂರೆಮಾಡಿ ಕಟ್ಟಿಕೊಂಡು ತೆರೆದ ಮನೆಯ ಸುಟ್ಟು ದಾರಿದೆಗೆದು ಹೋಗುವಾಗ ಧೀರರಾಗಿ ನಿಲ್ಲಿರೆಂದು ಎಂಬವರೊಬ್ಬರಿಲ್ಲ ವೋ 2 ಯಾವಜನರ ದಂಡು ಗಂಟು ಹಣದಾಸೆಗಾಗಿ ಮಾಡಿ ದಾವ ಕಡೆಗೆ ಬರುವರೆಂದು ಸೋವ ನೋಡು ತಲ್ಲಿತಮ್ಮ ಜೀವ ದೊಳಗೆ ಜೀವ ವಿಲ್ಲದಾಗಿ ಜನರುಬಾಯಬಿಡಲು ಕೋವಿ ಕತ್ತಿ ಎಂಬುದೊಂದು ಶಬ್ದವಿಲ್ಲ ನಮ್ಮ ಕಡೆಗೆ 3 ಬೀಸಿ ಬೀಸಿ ಕತ್ತಿಯನ್ನು ಸಾಸವನ್ನು ತೋರಿರೋರ ದಾಸೆಗಾಗಿ ಕಂಡ ಜನರ ಮೋಸದಿಂದ ಕಡಿದುಕೊಚ್ಚಿ ಲೇಸುಗಾಣದಾಗಿ ಮತ್ತೆ ಭಾಸೆಯಿಂದ ತಮ್ಮ ತಾವೆ ಮಾರ್ಗವಿಡಿಯೆ4 ಕೆಟ್ಟು ಪ್ರಜೆಯು ನಾಶವಾಗಿ ಸುಟ್ಟು ಮನೆಯು ಮಾರುಬಿದ್ದು ನಿಟ್ಟು ಹಾಳುಸುರಿಯೆ ಪ್ರಜೇಯು ಹೊಟ್ಟೆಗಿಲ್ಲ ದಳಲುತಿಹುದು ಸೃಷ್ಟಿ ಗೊಡೆಯನಾದ ಲಕ್ಷ್ಮೀರಮಣ ಬಲ್ಲನೆಲ್ಲವನ್ನು 5
--------------
ಕವಿ ಪರಮದೇವದಾಸರು
ಕೊಡಲಾಗದಿದ್ದರೆ ನುಡಿಯುವರೇನಣ್ಣ ಕಡೆಯಿಂದ ಬಾರೆಂದು ಜಡಿದಿಂದು ಪ. ದುಡುಕಿದೆವೆನ್ನುತ ಮಿಡುಕದಿರಣ್ಣಯ್ಯ ಕಡುಮುದದಿಂದಾವು ನಡೆದೇವು ಕೋಲೇಕೋಲೆ ಮುತ್ತಿನ ಕೋಲೆ ಅ.ಪ ಗುಣಯುತರೆನಿಸುವ ಹಿರಿಯ ವಂದಿಸ ಲೆನಂತಲೈ ತಂದೆವು ಮಣಿದೆವು ಹಣಗಾರರರೆಂದಲ್ಲಿ ಮಣಿಯಲು ಬರಲಿಲ್ಲ ಹಣದಾಸೆ ನಮಗಿಲ್ಲ ಕೇಳೀಸೊಲ್ಲ ||ಕೋಲೇ|| 1 ಅಣ್ಣಯ್ಯ ನಿಮಗೀ ಘನತೆಯು ಸಲ್ವುದು ಗಣ್ಯರಾದಿರಿ ನೀವು ಜಗದೊಳು ಪುಣ್ಯವಂತೆಯು ನಿಮ್ಮ ಪಡೆದಾಮಾತೆಯು ಧನ್ಯರಾದಿರಿ ನಿಮ್ಮೀಗುಣದಿಂದ ಕೋಲೆ 2 ದೋಷರಹಿತ ಶ್ರೀಶೇಷಗಿರೀಶನಾ ಕೇಶವನೊಲವೊಂದೆಮಗಿರಲಿ ಭಾಷೆಯ ಕೊಡುವೆವು ದೇಶಸೇವಕರಾವು ಲೇಸಾಗಲಿಳೆಗೆಂದು ಮನದಂದು ||ಕೋಲೆ||3
--------------
ನಂಜನಗೂಡು ತಿರುಮಲಾಂಬಾ
ಬಡವನಾಗಿರುವನಕ ಭಯವಿಲ್ಲವಯ್ಯ ಪ ಕೆಡುಕ ವಂಚಕ ಕಳ್ಳ ಬಳಿಬಾರನಯ್ಯ ಅ.ಪ ಬಡವತಾನಡಿಗಡಿಗೆ ಕಡುದೈನ್ಯಭಾವದಲಿ ದೃಢ ಭಕ್ತಿಯೊಳು ಹರಿಗೆ ಪೊಡಮಡುವನು ಕಡವರವನಾಂತವನು ಕಡುನುಡಿಗಳನು ಕಲಿತು ಪೊಡವಿಚನೆಂದೆನಿಸಿ ಕಡುಲೋಭಿಯಹನು 1 ಗುಣ ಶಾಂತಿ ನಯ ವಿನಯ ಹಣವಂತಗಿರದಯ್ಯ ಹಣವು ಕಪಿಯಂತವನ ಕುಣಿಸದಿರದು ಉಣಿಸು ನಿದ್ರಾದಿಗಳು ಕ್ಷಣಮಾತ್ರವಿಲ್ಲವಗೆ ಹಣದಾಸೆ ಎಳ್ಳಷ್ಟು ಬೇಡ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್