ಒಟ್ಟು 11 ಕಡೆಗಳಲ್ಲಿ , 10 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತವರಿಗತಿ ಸುಲಭ ಹರಿಯ ಪೂಜೆ ಪ ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ. ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮ ಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು 1 ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೇ ಶ್ರೀಗಂಧ ಧೂಪಾ ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು 2 ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು ದಕ್ಷಿಣೋತ್ತರ ಅಯನಗಳೇ ಬನವು ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3 ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು ಉಡುಪ ಭಾಸ್ಕರರ ಮಂಡಲಗಳಾದರ್ಶಗಳು ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ 4 ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ ಭಗವಂತಗುಪಬರ್ಹಣಗಳು ಷಡೃತುಗಳೆಂದೂ 5 ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ ಯೋಗಗಳೇ ಚೂರ್ಣ ರಾತ್ರೆ ತಾಂಶೊಕ ಭೋಗವತೀ ಜಲವೆ ಗಂಡೂಷೋದಕ ಶುದ್ಧ ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು6 ಶಾತಕುಂಭೋಧರಾಂಡಾಂತಸ್ಥ ರೂಪ ಸಂ ಪ್ರೀತಿಯಿಂದಲಿ ಯಜಿಸಿ ಮೋದಿಪರನಾ ಮಿತ ಶೋಕರ ಮಾಡಿ ಸಂತೈಸುತಿಹ ಜಗ ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ 7
--------------
ಜಗನ್ನಾಥದಾಸರು
ಅಸಿಸ್ಟೆಂಟ್ ಅಮಲ್ದಾರ್ರು ಹೇಳಿಕಳುಹಿಸಿದ್ದಾರೆ ಪ ಬಿಸಿ ನೀರು ನಿನಗಾಗಿ ಹಸನಾದ ಪನ್ನೀರ- ರಿಸಿನ ಕುಂಕುಮ ಕಳಶ ಕನ್ನಡಿಗಳಾ ಶಶಿಮುಖಿಯರೆಲ್ಲರು ತಂದು ಕಾದಿಹೆವಿಲ್ಲಿ ಕುಸುಮಾಸ್ತ್ರ ನಾಟದಲಿ ನಿಶಿ ನಿದ್ರೆ ಇಲ್ಲವೇನೋ 1 ಒಬ್ಬ ಒಡವೆಗಳು ಮತ್ತೊಬ್ಬ ಸೀರೆಗಳು | ಇ ನ್ನೊಬ್ಬ ಪರಿಮಳ ದ್ರವ್ಯ ತಂದು ಕೊಡುವಾ ಹಬ್ಬ ಪ್ರತಿದಿನ ರಾತ್ರಿಯಾಗುತ್ತಲೆ ನಿನಗೆ ನಮ್ಮ ಸುಬ್ಬ ಪೋಲೀಸನವರಿಂದ ಬಿಡಿಸಲಿಲ್ಲವೆ 2 ಹೊನ್ನು ಹಣಗಳಿಗೇನು ಕಡಿಮೆಯಿಲ್ಲ ಇನ್ನಾದರು ಸ್ಮರಿಸಿ ಕಣ್ದೆರೆದು ನೋಡೆ 3
--------------
ಗುರುರಾಮವಿಠಲ
ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು - ಮಿಕ್ಕಬಣಗು ದೈವದ ಗೊಡವೆ ಬೇಡ ನರಕ ತಪ್ಪದು ಪ ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರುಸೊಕ್ಕಿನಿಂದ ಸೊಂಟಮುರುಕ ಬೈರೇ ದೇವರುಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು 1 ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದುಬತ್ತಲೆಯೆ ದೇವರೆದುರು ಬರುವುದು ನೋಡಿರೊಮತ್ತೆ ಬೇವಿನುಡುಗೆಯ ಅರ್ತಿಯಿಂದುಟುಗೊಂಡುಮುಕ್ತಿ ಕಾಂಬೆವೆಂಬ ಮೌಢ್ಯ ಬೇಡಿರÉೂ 2 ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡುಹಾಳು ಮಾಡಿ ಕೈಯಲಿದ್ದ ಹೊನ್ನು ಹಣಗಳಬಾಳುತಿಪ್ಪ ಕೋಣ ಕುರಿಯ ಏಳಬೀಳ ಕೊರಳ ಕೊಯ್ದುಬೀಳ ಬೇಡಿ ನರಕಕೆಂದು ಹೇಳ ಬಂದೆನೊ3 ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡುಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತುಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳು ಕೊಡನ ಬರಿದು ಮಾಡುವಂಥಪೊಳ್ಳು ದೈವದ ಗೊಡವೆ ಬೇಡ ನರಕ ತಪ್ಪದು4 ಪಾದ ಬಿಡದೆ ಭಜಿಸಿರೊಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ 5
--------------
ಕನಕದಾಸ
ಕುಣಿ ಕುಣಿಯೆಲೋ ಹರಿಗಾನದಲಿ ಪ ಅಣಕಿಸುವರೆಂದು ಮನ ಜರಿಯದೆಲೆ ಅ.ಪ ಅನುಗಾಲವು ಮನಕೊರೆಯುವ ಅನುತಾಪಗಳ ಕೊನೆಗಾಣಿಸಲು 1 ಸ್ಥಿರವಲ್ಲವು ನರಜನ್ಮವು ಸರಿಸಮಯವೆಂದು ಅರಿಯುತ್ತ ಮುದದಿ 2 ಒಣ ಭೋಗವ ಉಣಲೋಸುಗ ಹಣಗಳಿಸೆ ಬಲು ದಣಿವುದಕಿಂತ 3 ಗಾನ ಲೋಲನ ನಾಮ ಮಧುರಸ ಸಾನುರಾಗದಿಂದ ವಾಸಮಾಡುತಲಿ 4 ಪನ್ನಗಾರಿವಾಹನ ಹರಿಯು ಪ್ರ ಸನ್ನನಾಗಲೆಂದು ಸನ್ನುತಿಸುವ ಸದಾ 5
--------------
ವಿದ್ಯಾಪ್ರಸನ್ನತೀರ್ಥರು
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ ಹರುವ ಸರ್ಪಯಿರುವ ಚೋರ ಶರಧಿ ಉರೆವ ಕಿಚ್ಚು ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ ಹೊಡೆವ ದೈತ್ಯಾ ತೊರೆವ ಸನ್ನ್ಯಾವ ಮೇರೆ ತಪ್ಪಿ ಭರದಿ ತನಗೆ ಇದಿರು ಬಂದವ ಕಾಣುತತಿ ಹರಿಯ ನಾಮ ಮುಟ್ಟುವ ದೇವ ಶ್ರೀನಿವಾಸಾ1 ಸೃಷ್ಟಿ ಜನರಿಗೊಂದು ಆಳು ಕೊಟ್ಟು ವೇಗದಿಂದ ಕರಿಯ ಲಟ್ಟಿದವರ ಕಾಣೆನಯ್ಯಾ ಎಷ್ಟೆಷ್ಟು ದೂರದಿಂದಲಿ ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ ಅಟ್ಟಹಾಸದಿಂದ ಮಂಗಳವ ಪಾಡಿ ಪೊರ ಮಟ್ಟ ಒಪ್ಪ ತಿರುವೆಂಗಳಾ2 ಹದಿನೆಂಟು ಜಾತಿಯವರು ಒದಗಿ ಮುದದಿಂದ ಕುಣಿದು ಪದೋಪದಿಗೆ ಹಾಡಿ ಪಾಡುತ ಹದುಳವಾದ ಪಂಚವಾದ್ಯ ಎದುರುನಿಂದು ಧ್ವನಿಯ ಮಾಡುತಾ ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ 3 ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು ಇಲ್ಲೆ ಸುಖವು ಬಟ್ಟು ಕಡಿಗೆ ಎಲ್ಲೆಲ್ಲಿ ಜನಿಸಿ ಬಹು ಭವದ ಪಲ್ಲಡಿಯೊಳಗೆ ಜನಿಸಿ ಜ್ಞಾನ ವಿಲ್ಲದೆ ಸಲ್ಲುವರು ದುರಿತವ ವಹಿಸಿ 4 ಮನುಜರೆಣಿಕೆ ಏನು ಮತ್ತೆ ವನಜ ಸಂಭವ ಈಶ ಮುಖ್ಯ ಅನಿಮಿಷರೆಲ್ಲ ಬಂದು ಭಯದಿ ಮನಸಿನಲಿ ನಿನ್ನ ಅರಸುತನದ ಶೌರ್ಯ ಮಣಿದು ನಮಸ್ಕರಿಸುತಾ ವಾಲ್ಗೈಸುತಾ ಹೊಣಿಯೊ ವಿಜಯವಿಠ್ಠಲ ಎನುತಾ 5
--------------
ವಿಜಯದಾಸ
ನ್ಯಾಯವೆ ನಿನಗೆ ಎನಗೆ ಸಿರಿಕೃಷ್ಣ ಪ ಬಾಯಾಡಬಹುದೆ ಕೈಯೊಳಿತ್ತ ಹಣಗಳ ಅ.ಪ ಆರು ಅರಿಯದ್ಹಾಂಗೆ ಒಂಭತ್ತು ಕೊಡುವಾಗತೋರಿಯಾಡಿದೆ ಒಮ್ಮೆ ನಿನ್ನ ಹೆಸರಗಾರುಮಾಡದೆ ಬಡ್ಡಿ ತೆತ್ತು ಬರುವೆನೆಂದುಹಾರೈಸಿ ಕೊಡದೆ ಚುಂಗುಡಿಯ ನಿಲಿಸುವರೆ 1 ಸಾಲವ ಬೇಡಿದರೆ ಕೋಪವೇ ಕಮಲಾಕ್ಷಕಾಲಿಗೆ ಎನ್ನ ಕೊರಳ ಕಟ್ಟಿಕೊಂಬೆಆಲಯದವರ ಕೇಳದೆ ನಿನಗೊಳಗಾದೆಭೋಳೆಯತನದಲ್ಲಿ ನಿನ್ನ ನಂಬಿದೆ ಹರಿ2 ಅಸಲು ನಿನಗೆ ಸಮರ್ಪಣೆಯಾಯಿತೆಲೊ ದೇವಮೀಸಲು ಪೊಂಬೆಸರು ನಿರುತ ನಡೆಯಲಿಶಶಿಧರ ಬ್ರಹ್ಮಾದಿ ವಂದ್ಯ ಸತ್ಯವೆಂಬಮೀಸಲುಳುಹಿ ಎನ್ನ ಸಲಹೊ ಶ್ರೀಕೃಷ್ಣ 3
--------------
ವ್ಯಾಸರಾಯರು
ಮೋಹ ಬೇಡಣ್ಣಾ ಸಂಸಾರದೊಳು ಪ ಎರವಿನ ಕಂಗಳು ಎರವಿನ ಶ್ರುತಿಯೊಳು | ನಾಸಿಕ ಎರವಿನ ನಾಲಿಗೆ | ಎರವಿನ ಕರಗಳು ಎರವಿನ ಪಾದವು | ಎರವಿನ ಬುಧ್ಯರವಿನ ಬದುಕು 1 ಎರವಿನ ಹಣಗಳು ಎರವಿನ ಭೂಷಣ | ವಾಹನ ಎರವಿನ ಸಿರಿಸುಖ | ಎರವಿನ ತರುಣಿಮದ್ಯೆರವಿನ ಸುತರು | ಎರವಿನ ಬಂಧು ಎರವಿನ ಬಳಗಾ 2 ಹರಿಯೇ ಕರ್ತನು ಹರಿ ಸೂತ್ರಾತ್ಮನು | ಗುರುಮಹಿಪತಿ ಪ್ರಭು ಹರಿ ಪರವೆಂದು | ಹರಿಯನೆ ಸ್ಮರಿಸಿ ಹರಿಯನೇ ಧ್ಯಾನಿಸಿ | ಹರಿಯನೆ ಪೂಜಿಸಿ ಹರಿ ಪದಹೊಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾರವಲ್ಲ ಸಂಸಾರವಿದು ಪ ತನುವಿನ ಪಾಶವು ವನಿತೆರ ಪಾಶವು | ಉಣಲುಡುಪಾಶಾ ಹಣಗಳ ಪಾಶವು | ಮನೆ ಪಶು ಪಾಶಾ ಇನಿತಿಹ ಪಾಶದ | ಮನುಜಗ ಸುಖವೆ 1 ಭ್ರಾಂತಿಯ ಮಂದಿರ ಚಿಂತೆಯ ಮಡುವು | ಪಂಥವು ನರಕದ ಕಂತುವಿನಾಶ್ರಯ | ಖಂತಿಯ ನೆಲೆಭವ ಜಂತುರ ನೋಡಲು | ಸಿಂತರ ಬೀಳುವಂತಿನಾ ಜನುಮಾ 2 ತಾಪತ್ರಯ ನಾನಾ ಪರಿಯಿಂದಲಿ | ವ್ಯಾಪಿಸಿಕೊಂಡಿಹ ದೀಪರಿ ಭವಣಿ | ಆ ಪರಗತಿ ನಿನಗಾಪೇಕ್ಷಾದರ | ಪಡಿ ತಂದೆ ಮಹಿಪತಿ ಬೋಧಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲೊ ರಮಾಪತಿ ಹಕ್ಕಿಗಳು ಬಾಯಿ ಬಿಡುವಂತೆಬಳಲುವೆವೊ ಈಗ ನಾವೆಲ್ಲ | (ನಾವೆಲ್ಲ) ಈ ಬ್ರಹ್ಮಕುಲದ ಅಭಿಮಾನ ನಿನದಲ್ಲೆ ಪಗೌಡ ಪ್ರಬಲಾಗೆ ತಲೆಗೂಡೆನಿಸಿತೆನಗೆ ನೋಡ ಮನೆಕಡೆಗೆ ಮಡಿವಾಳ | (ಮಡಿವಾಳ) ಮರ ಹಾಳುಮಾಡುವರು ದ್ವಿಜರೆಂಬನು ಜೀಯ 1ಗಡಿಗೆಗಳು ಒಂದನ್ನ ಕೊಡನು ಗ್ರಹಣಗಳು ಹನ್ನೆ-ರಡೂ ಆದರನ್ನಾ ಕುಂಬಾರ | (ಕುಂಬಾರ)ನಿದ ಸ್ಮರಿಸಿಅಡವಿಯೊಳು ಕುಳಿತು ಆ(ಅ ?)ಳಬೇಕು 2ಭಕ್ರಿಯೆಂಬುದು ತುಪ್ಪ ಸಕ್ರಿ ಮಾಡಿದ ಬಡಿಗಅಕ್ರೂರ ವರದ ದಯಾಸಿಂಧು | (ದಯಾಸಿಂಧು) ಎಂದು ಈಅಕ್ರಮವ ನಿನಗೇ ಉಸಿರುವೆ3ಕಾಲರಕ್ಷೆಯ ಹೊಲಿಯ ಧಾಳಾಯ ಕೊಡುಯೆಂದುಗೋಳಾಡಿಸುವನು ಅತಿಶೂದ್ರ | (ಅತಿಶೂದ್ರ) ಈ ದುಃಖಕೇಳುವರೇ ಇಲ್ಲೋ ಪರಮಾತ್ಮ 4ಯರಿಬೀಳು ಅದಕೂ ಮತ್ತೇರಿಸುವನೋ ಎಲ್ಲೋ ಎಂ-ದಿರುಳೆಲ್ಲ ನಿದ್ರಿಲ್ಲೋ ಮೇಲ್ಪøತ್ತಿ | (ಮೇಲ್ಪøತ್ತಿ)ಯೆಂಬುವದುಗುರುತಿಲ್ಲಧೋಯ್ತೋ ಗುರುವರ್ಯ 5ಇದ್ದ ಜ್ಞಾತಿಗಳಿಂದೆ ಮುದ್ದ್ಯಾಗಬೇಕೆಂಬಶ್ರದ್ಧೆಯನೇ ಬಿಟ್ಟು ಅವನನ್ನೇ | (ಅವನನ್ನೇ) ಕೊಂಡಾಡಿಹೊದ್ದಿ ದಿನಗಳದೂ ಬದುಕುವರು6ಈ ರೀತಿ ನೋಡಲ್ಕೆ ಮೂರನೆ ಕಾಲವೇಂತೋರುವದೊ ಯಮಗೆ ಪ್ರಾಣೇಶ | (ಪ್ರಾಣೇಶ) ವಿಠಲ ಉ-ದ್ಧಾರ ಮಾಡುವದು ನೀ ಬಲ್ಲೆ7
--------------
ಪ್ರಾಣೇಶದಾಸರು
ರಾಯನೆಂದರೆಗುರು- ರಾಯ ಸದ್ಗುಣಗಣxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಕಾಯಸುಜನಗೇಯ ಮಹರಾಯಾಪಮಾಯಾಮಯಭವತೋಯ ನಿಧಿಯೊಳುಕಾಯೋ ಎನ್ನನು ಅ.ಪನಿನ್ನಾ ನಂಬಿದ ಮಾನವಾ - ಭವದೀಘನ್ನಾ ಮಹಿಮಾ ಪಾ -ವನ್ನ ತವಪಾದಾಮನ್ನಾದೊಳಗೆ ನಿತ್ಯಾ - ಚನ್ನಾಗಿ ಭಜಿಸುತಧನ್ಯನೆನಿಸುವ - ಹೊನ್ನು ಹಣಗಳೂಘನ್ನ ಮಹಿಮನೇ - ನಿನ್ನ ನಂಬಿದೆಎನ್ನ ಪಾಲಿಸ - ನನ್ಯರಕ್ಷಕ 1ಅನ್ನಾ ವಸನವಿಲ್ಲದೆ - ನಿತ್ಯಾಘನ್ನಾತೆ ನಿನಗಿದ- ನನ್ಯ ಭಕ್ತನಪರ-ರನ್ನಕ್ಕೆ ಗುರಿಮಾಡಿ-ಬನ್ನಬಡಿಸಿದರೆನ್ನನಿನ್ನ ಸೇವಕ - ನಿನ್ನ ಪೂಜಕ -ನಿನ್ನ ಧ್ಯಾನವÀ - ಮನ್ನದಿಂದಾನಿನ್ನ ತ್ಯಜಿಸಿ - ಅನ್ಯ ದೈವರ - ಮನ್ನಿಸೆನೋಪಾ - ವನ್ನ ಮೂರುತಿ 2ಹೊಟ್ಟೆಗೋಸುಗ ದೇಶಾ ತಿರುಗಿ - ದೇಹಾಎಷ್ಟು ಪೇಳಲಿ ಎನ್ನ - ದುಷ್ಟ ಬುದ್ಧಿಲಿ ಜ್ಞಾನನಷ್ಟವಾಗಲಿ ಬಹು - ಭ್ರಷ್ಟಮಾರ್ಗವ ಸೇರಿದುಷ್ಟಮತಿಯಲಿ - ಶಿಷ್ಟದ್ವೇಷವಕಟ್ಟಿ - ಕಾದಿದೆ - ನಷ್ಟ ತಿಳಿಯದೆಕೆಟ್ಟು - ಪೋಗುವೆ ಥಟ್ಟನೆ ನೀ ಪೊರಿಧಿಟ್ಟಾ ಗುರುಜಗನ್ನಾಥ ವಿಠಲದೂತಾ 3
--------------
ಗುರುಜಗನ್ನಾಥದಾಸರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು