ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡುಪಿ ದೃಷ್ಟಿ ಇದ್ಯಾತಕೆ ಉಡುಪಿ ಕೃಷ್ಣನ್ನ ನೋಡದ ಪ ಗೋಪಿಯರ ಪೂಜೆ ಗ್ರಹಿಸಿ ಗೋಪಿಚಂದನ ಸಹಿತವಾಗಿ ವ್ಯಾಪಾರದ ಹಡಗೀಲಿ ಬಂದ ಶ್ರೀಪತಿಯ ನೋಡದ 1 ಮಧ್ವರಾಯರಿಗೊಲಿದು ಬಂದು ಸಮುದ್ರತೀರದಲ್ಲಿ ನಿಂದು ಪದ್ಮನಾಭನಪುರದಿ ನೆಲಸಿದ ಮುದ್ದು ಶ್ರೀಕೃಷ್ಣನ್ನ ನೋಡದ 2 ದುಷ್ಟವಾದ ದೇಶವನೆಲ್ಲಾ ಶ್ರೇಷ್ಠ ಮಾಡಿದ ಕೃಷ್ಣನ್ನ ನೊಡದ 3 ಶುದ್ದವಾದ ಗೋವುಘೃತವು ಕ್ಷೀರ ಸಕ್ಕರೆ ಮಧುವು ದಧೀ ನಾರಿಕೇಳ ಫಲಗಳಿಂದ ಮಿಂದ ಶ್ರೀಕೃಷ್ಣನ್ನ ನೋಡದ 4 ಉದ್ದಂಡವಾದ ಉರನಲ್ಲಿ ಭೂಮಂಡಲನಾಳ್ವ ಶಿರವನಿಟ್ಟು ಕೊಂಡೆ ಮಕರಿತು ಚೆಂಡು ಧರಿಸಿದ ಪುಂಡರೀಕಾಕ್ಷನ್ನ ನೋಡದ 5 ಪಾನಪಟ್ಟಿ ಮುತ್ತಿನಬಟ್ಟು ಮೂಗುತಿಯನಳವಟ್ಟು ವಜ್ರದ ಕರ್ಣಕುಂಡಲವನಿಟ್ಟು ಅರ್ಜುನಸಾರಥಿಯ ನೋಡದ 6 ವೈಜಯಂತಿ [ನವ] ಹಾರಪದಕ ಸರಗಳಿಟ್ಟ ವಾರಿಜನಾಭನ ನೋಡದ 7 ಕಡೆಗೋಲ ಬಲದ ಕೈಲಿ ಎಡದ ಕೈಯ ತೊಡೆಯೊಳಿಟ್ಟು ಉಡುದಾರ ಗೆಜ್ಜೆಯನಿಟ್ಟ ಪೊಡವಿಗೀಶ್ವರನ್ನ ನೋಡದ 8 ಅಂದುಗೆ ಗೆಜ್ಜೆನಿಟ್ಟು ಕುಂದಣದಾವುಗೆಯ ಮೆಟ್ಟಿ ಆ ನಂದದಿಂದ ಗಂಗೆ ಪಡೆದ ಇಂದಿರೇಶನ ಪಾದವ ನೋಡದ 9 ಸಂಸಾರದಗ್ನಿಯಲ್ಲಿ ಬೆಂದು ನೊಂದುಬಂದ ಭಕ್ತರ ಚರಣವೆಂ ಬೊ ಶರಧಿಯಲ್ಲಿ ಭರದಲಿರುವ ಹರಿಯ ನೋಡದ 10 ದುರುಳ ಶಕಟನನ್ನು ತುಳಿದ ವರದ ವೆಂಕಟಕೃಷ್ಣನ್ನ ನೋಡದ 11
--------------
ಯದುಗಿರಿಯಮ್ಮ