ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ) ರುದ್ರದೇವರು ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ. ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ 1 ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ2 ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ 3 ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ4 ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ 5
--------------
ಶ್ರೀಪಾದರಾಜರು
ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ ಶ್ರೀ ಕೃಷ್ಣಮೂರುತಿಗೆ ಪ ನಾರೀಮಣಿ ಶ್ರೀ ರುಕ್ಮಿಣೀದೇವಿಗೆ ಮತ್ತು ಭೂಮಾಮಣಿಗೆ ಅ.ಪ ಪನ್ನಗಪತಿ ಫಣಿಯನ್ನು ತುಳಿಯುತಲಿ ಚನ್ನಾಗಿ ಕುಣಿದವಗೆ ಸನ್ನುತ ನಿಜ ಜನರನ್ನು ಸಲಹುವ ಮನ್ಮಥ ಜನಕನಿಗೆ 1 ಪಾರ್ಥಗೆ ಸಖನಾಗಿ ಧಾರ್ತರಾಷ್ಟ್ರನ ಹಠ ವ್ಯರ್ಥ ಮಾಡಿದವಗೆ ಆರತಿ ಎತ್ತಿರೆ ಶುಭಕೀರ್ತನೆ ಮಾಡುತ ಪಾರ್ಥಸಖನ ಸತಿಗೆ 2 ಚಂಡಮುನಿಯು ಬೇಡಿಕೊಂಡ ವರವನಿತ್ತ ಪಾಂಡವರ ಕಾಯ್ದವಗೆ ಪುಂಡರೀಕದಳಲೋಚನಗೆ ಜಗದಂಡಪತಿಯ ಸತಿಗೆ3 ವಾಮಲೋಚನರೆಲ್ಲಾ ನಾಮಗಿರೀಶ ಶ್ರೀ ನರಸಿಂಹ ಮೂರುತಿಗೆ ಪ್ರೇಮ ಮಾಡುವನೆಂದು ಕಾಮಿನಿಯರೇ ಸತ್ಯ ಭಾಮಾಸಹಿತನಿಗೆ 4
--------------
ವಿದ್ಯಾರತ್ನಾಕರತೀರ್ಥರು
ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1 ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ ದುಡಿಯ ಬೇಕಮ್ಮ ಮಗಳೆ ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2 ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3 ಕ್ಲೇಶ ಕೇಳಮ್ಮ ಮಗಳೆ ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4 ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5 ಸೊಲ್ಲು ಕೇಳಮ್ಮ ಮಗಳೆ ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6 ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7 ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8 ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9 ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ ಕೇಳಮ್ಮಾ ಮಗಳೆ ನಿತ್ಯ ಸುಖಿಸಮ್ಮ 10 ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ ಮೊರೆಯ ಹೋಗಮ್ಮ 11
--------------
ಕೃಷ್ಣವಿಠಲದಾಸರು
ವಾಸನ್ಹಿಂಗದವನ ಬಲುಮಡಿ ಮೀಸಲ್ಯಾಕೆ ಆಸೆಬಿಡದವನ ಹರಿದಾಸತ್ವವ್ಯಾಕೆ ಪ ಚಿತ್ತಶುದ್ಧಯಿಲ್ಲದವನ ತತ್ವ ಉಪದೇಶವ್ಯಾಕೆ ಕುತ್ತಿಗೆಯ ಕೊಯ್ವವನ ಭಕ್ತಿಭಾವ್ಯಾಕೆ ಹೆತ್ತವರ ಬಯ್ವವನ ಸತ್ಯರೊಡನಾಟವ್ಯಾಕೆ ಉತ್ತಮರ ಹಳಿವವನ ನಿತ್ಯನೇಮವ್ಯಾಕೆ 1 ಭೇದಕಡಿಯದವನ ಪರಸಾಧನೆಯು ಯಾತಕ್ಕೆ ವಾದಬಿಡದವನ ಸುವೇದ ಓದ್ಯಾಕೆ ಕ್ರೋಧದೊಳುರುಳುವನ ಸಾಧುತ್ವ ಯಾತಕ್ಕೆ ಜಾದುಗಾರನ ಸುಬೋಧವದು ಯಾಕೆ 2 ನಾನೆಂಬುದಳಿಯವ ಜ್ಞಾನಭೋದ್ಯಾಮೃತವ್ಯಾಕೆ ಹೀನಗುಣ ಬಿಡದವನ ಮೌನತ್ವವ್ಯಾಕೆ ದೀನರನು ಬಾಧಿಪರ ದಾನಧರ್ಮವು ಯಾಕೆ ನಾನಾ ಬಯಕ್ಯುಳ್ಳವನ ಧ್ಯಾನವು ಯಾಕೆ 3 ಕುಟಿಲತ್ವ ಸುಡದವನ ಜಟೆ ಕೌಪೀನ್ಯಾತಕೆ ಸಟೆಬೊಗಳಿ ಬದುಕುವನ ಪಟ್ಟೆನಾಮವ್ಯಾಕೆ ದಿಟವರಿಯದಧಮನ ನಿಟಿಲದಲಿ ಭಸಿತ್ಯಾಕೆ ದಿಟ್ಟೆಯರಿಗೆ ಸೋಲುವನ ಹಠಯೋಗವ್ಯಾಕೆ 4 ಯತಿಗಳನು ನಿಂದಿಪನ ಸ್ಮøತಿಶಾಸ್ತ್ರ ಯಾತಕ್ಕೆ ಸತಿಗಳುಕಿ ನಡೆಯುವನ ಅತಿಜಾಣ್ಮೆ ಯಾಕೆ ಸತತ ಖಲು ಕುಹಕನಲಿ ಅತಿಸ್ನೇಹ ಯಾತಕೆ ಕ್ಷಿತಿಯೊಳ್ ಶ್ರೀರಾಮನ ನುತಿಸದವನ್ಯಾಕೆ 5
--------------
ರಾಮದಾಸರು
ಶ್ರೀ ಶ್ರೀ ರಾಘವೇಂದ್ರತೀರ್ಥರು ಆನೆಂತು ತುತಿಪೆ ನಿನ್ನ - ಮಂಚಾಲಿ ರನ್ನ ಪ ಆನೆಂತು ತುತಿಪೆ ನಾ - ಮಾನಮೇಯದಿನಿಪುಣಗಾನ ವಿಶಾರದ - ಶ್ರೀನಿವಾಸನ ದೂತ ಅ.ಪ. ಕೃತಯುಗದಲಿ ನೀನು | ದಿತಿಜ ವಂಶದಿ ಬಂದುವಿತತ ವಿಶ್ವಾಧಾರ | ಕೃತಿಪತಿಯ ತುತಿಸಿ ಮುಕುತಿ ಪಥಕೆ ಸತ್ತರ ತಮ ಪಂಚಭೇದಮತಿಯೆ ಸಾರ್ಥಕವೆಂದು | ಹಿತದಿಂದ ಸಾಧಿಸೆಮತಿಭ್ರಾಂತನಾದಂಥ | ದಿತಿಜ ಗುರುವು ತಾನುಖತಿಯಿಂದ ನೋಡುತ್ತಲೀ || ಬಾಲಕರೆಲ್ಲಹತಭಾಗ್ಯರೆನ್ನುತ್ತಲೀ | ನೃಪಗೆ ಪೇಳೆಖತಿ ನಿನ್ನೋಳ್ ತೋರುತ್ತಲೀ | ದಂಡಿಸೆ ನಿನ್ನಪಿತಗೆ ಬುದ್ಧಿಯ ಪೇಳ್ದ | ಅತುಳ ಪರಾಕ್ರಮೀ 1 ಕಡು ವೇಗದಲಿ ಬಂದ | ಶಂಡ ಮರ್ಕನ ಕಳುಹಿಒಡ ಹುಟ್ಟಿದವನನ | ದಾಡೆದಂತಗಳಿಂದಬಿಡದೆ ಶೀಳಿದ ಹರಿಯ | ದೃಢದಿ ಪೂಜಿಪೆ ನೀನುಬಿಡು ಬಿಡು ಈ ಮತಿ | ಮೃಡನೆ ನಮ್ಮಯ ದೇವಪುಡುಕಿ ಆ ಹರಿಯನ್ನೆ | ಖಡುಗದಿಂದಲಿ ಅವನಕಡಿದು ಹಾಕುವೆನೆನ್ನುತ್ತ || ಕರೆದು ನಿನ್ನಕಡು ಭಾಗ್ಯ ಕೋ ಎನ್ನುತ್ತ | ಪೇಳಲು ನೀನುಮಿಡುಕದೆ ಬೇಡೆನ್ನುತ್ತ | ಬುದ್ದಿಯ ಮಾತದೃಢದಿ ಪಿತಗೆ ಪೇಳ್ದೆ | ಬಿಡೆನು ಹರಿಯ ಎನ್ನುತ್ತ 2 ಸಹೋದರಿ | ವರಲಕ್ಷ್ಮಿ ಮಾತೆಯಸ್ಮರಿಸಿ ಜೀವಿಸೆ ಅವನೂ || ರಕ್ಕಸ ನೋಡಿಭರದಿ ಖಡ್ಗವ ಸೆಳೆದೂ | ತೋರೊ ಕಂಬದಿಹರಿಯ ಎಂದು ಒದೆದೂ | ನಿಲ್ಲಲು ಪಿತಗೆನರಹರಿ ರೂಪವ ತೋರ್ದೆ | ಕ್ರೂರನ ಜರಿದೂ 3 ದಿಟ್ಟ ತರಳನ ಸಲಹೆ | ಗಟ್ಟಿ ಕಂಬದಿ ಬರೆಛಟ ಛಟ ಶಬ್ದಾ | ಜಾಂಡ ಕಟಹ ಬಿಚ್ಚೆಕಠಿಣ ಖಳನ ಪಿಡಿದು | ಜಠರವ ಭೇದಿಸಿಹಠದಿ ಕರುಳಿನ ಮಾಲೆ | ಕಂಠದಿ ಧರಿಸುತ್ತತೃಟಿಯು ಬಿಡದೆ ತನ್ನ | ಹಠದಿ ಭಜಿಪನಿನ್ನಸ್ಫುಟದಿ ಕರದೋಳತ್ತಿದ || ಮುದ್ದಿಸಿ ಬಲುದಿಟ ಭಟ ಎನೆ ಎನಿಸೀದ | ಮಗನ ಮಾತುದಿಟವ ಜಗಕೆ ತೋರಿದ | ವೆಂಕಟನ್ನಪಟುತರ ವ್ಯಾಪ್ತಿಯ | ಮಹಿಮೆ ಸ್ಫುಟದಿ ತೋರ್ದ 4 ದಶಶಿರ | ದೂತ ಹನುಮನ್ನವ್ಯಥೆಯ ಪಡಿಸೆ ಪೋಗಲೂ || ಖತಿಯಲಿ ಲಂಕೆಹುತವಹನಿಗೆ ಈಯಲೂ | ವಾತನ ನೀಪ್ರೀತಿಯಲ್ಲಾಶ್ರಯಿಸಲೂ | ಲಂಕೆಯ ಪುರನೀತಿಯಿಂದಲಿ ಆಳ್ದ | ಖ್ಯಾತ ದೂತನೆನಿಸಲೂ 5 ಪಾದ ಭಜಿಸಿದಿ 6 ಶೇಷಾವೇಶದಿ ಪುಟ್ಟಿ | ವ್ಯಾಸ ತೀರ್ಥರಾಗಿಮೀಸಲಾದ ಮತ | ದಾಶಯಗಳನೆಲ್ಲಸೂಸಿ ಪೇಳುತ್ತಲಿ | ಶೇಷಾಚಲದಿ ಶ್ರೀನಿವಾಸನ ದ್ವಾದಶ | ವರ್ಷ ಸೇವಿಸಿ ನೃಪತೀಶನ ಕುಹುಯೋಗ | ಲೇಸಾಗಿ ಕಳೆಯುತಆಶುಗತಿಯ ತತ್ವ ಮತವ || ಸ್ಥಾಪಿಸಿ ಬಲುಮೀಸಲು ತರ್ಕತಾಂಡವ | ನ್ಯಾಯಾಮೃತಭೂಸುರರ್ಗಿತ್ತು ನಾಯಕರ | ಪುರಂದರದಾಸರಾಯರ ಮಾಡ್ದ | ದಾಸ ಪಂಥೋದ್ಧಾರ 7 ವಿಹಂಗ ವಾಹನ ಶ್ರೇಷ್ಠನೂ || ಎಂದೆನಿಸುತ್ತತುಂಗ ತೀರದಲಿ ನೀನೂ | ರಾಮರ ಪಾದಭೃಂಗನೆಂದೆನಿಸಿ ಇನ್ನೂ | ವ್ಯಾಖ್ಯಾನದಿಶೃಂಗರಿಸಿದೆ ನಿನ್ನ | ಬಿಂಬ ಮೂರುತಿಯನ್ನೂ 8 ಮಾಸ ಭವ ವನಧಿಯತರಣೋಪಾಯವ ತೋರುತ್ತ | ಪವನಾಂತಸ್ಥಗುರುಗೋವಿಂದ ವಿಠಲನೆಂಬಾತ | ಗುಣ ಪೂರ್ಣಸರ್ವೋತ್ತಮನೆನ್ನುತ್ತ | ಕೀರ್ತಿಪೆ ನೀನು ನಿರುತ9
--------------
ಗುರುಗೋವಿಂದವಿಠಲರು