ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಟ್ಟಿ ಕೊಳ್ಳೊ ಮಾಣಿ ನಿನ್ನ ಹುಟ್ಟಿಸಿರುವ ದೈವಕೆ ಹೊಟ್ಟೆ ತುಂಬ ಬಾಯಿಗಾನು ಬಿಟ್ಟೆನೆಂದ್ರೆ ಕ್ಷೀರವಿಲ್ಲ ಪ ಕೊಟ್ಟು ಪಡೆಯಲಿಲ್ಲ ಮುನ್ನಹುಟ್ಟಿ ಪಡೆಯಲಿಲ್ಲ ಮುಂದೆ ಹಟ್ಟಿಯೊಳಗಣಾಕಳೆಲ್ಲ ನಷ್ಟವಾಯ್ತು ರೋಗದಿಂದ 1 ಅತ್ತು ಸಾಯ ಬೇಡ ನೀನು ಎತ್ತಿ ಕೊಂಬರೊಬ್ಬರಿಲ್ಲ ಭತ್ತವನ್ನು ಕುಟ್ಟಿ ನಾನು ತುತ್ತಮಾಡಿ ತಿನ್ನಿಸುವೆನು 2 ನೀರು ಕಾದು ಬಂತು ಬಿಸಿಯ ನೀರ ನೆರೆವೆನೀಗ ನಿನಗೆ ಸಾರಿ ಮೊಲೆಯ ನೂಡಿ ನನ್ನ ಸೀರೆ ಸೆರಗಹಾಸಿ ಕೊಡುವೆ 3 ದೊಡ್ಡ ಕೂಸ ಕಾಣೆಯವಳು ಗುಡ್ಡೆ ಬಸವಿಯಾದಳೀಗ ಚಡ್ಡೆಯಲ್ಲದೆ ಹೋಗುತಿಹಳು ಸಡ್ಡೆ ಮಾಡಳೆನ್ನಮಾತ 4 ಇಂತೆನುತ್ತ ಬಾಲಕನ್ನ ಸಂತವಿಟ್ಟು ನಾರಿ ಲಕ್ಷ್ಮೀ ಕಾಂತ ಮಾಡ್ದ ಲೀಲೆಗಳನು ನಿಂತು ಪಾಡಿಪೋದಳಾಕೆ 5
--------------
ಕವಿ ಪರಮದೇವದಾಸರು