ತಿಳಿದರೆ ನೀ ಶಿವ ದಿಟಾ ದಿಟಾ | ತಿಳಿಯದೆ ಕಳೆದ್ಯೋ ಘಟಾ ಘಟಾ ಪ
ವೇದ ಶಾಸ್ತ್ರಾಗಮವನು ಓದಿ | ಏನು ಕಲಿತಿಯೋ ಹಟಾ ಛಲಾ | ಸಾಧು ಸಂತರು ಮನೆಗೆ ಬಂದರೆ | ಬಯ್ಯುವಿ ಆ ಕ್ಷಣ ಥಡಾ ಥಡಾ 1
ಪರ ಉಪಕಾರಿಲ್ಲದೆ | ಯಾತಕ ಈ ಮನಿ ಮಠಾ ಮಠಾ | ಸ್ವಾನುಭವ ಸುಜ್ಞಾನವಿಲ್ಲದೆ | ಮೌನವ ಧರಿಸಿದ್ಯೋ ಶಠಾ ಶಠಾ 2
ಭವ ಚಿನ್ನದ ಪುಟಾ ಪುಟಾ || ಹರ ಗುರುನಾಥನ ಸ್ಮರಣೆಯ ಮಾಡದೆ ಒದರುವಿ ಸುಮ್ಮನೆ ವಟಾ ವಟಾ 3