ವಾರಿಧಿ ನಿಚ್ಚನೆ ಪ
ನೀರೊಳು ಪೊಕ್ಕಹನೇ ರಂಗೈಯ್ಯ ಭಾರವ ಪೊತ್ತಿಹನೇ
ಪೋರಾಚೆÉಗೆ ಇದು ದಾರ ಕಲಿಸಿದರೆನೆ
ನೀರಜಭವರು ನಿರ್ಜರರು ನಗುತಿಹರು 1
ಕಂದ ಮೂಲವ ಗೆಲುವಾ ರಂಗೈಯ್ಯ
ಬಂದ ಕಂಭವ ನೋಡಿದಾ
ಕಂದ ಇಂಥ ಬುದ್ಧಿ ಎಂದು ಕಲಿತಿಯೇನೇ
ಮೇದಿನಿ ಪ್ರಲ್ಹಾದ ನಗುತಿಹರು 2
ತಿರುಕನಂತೆ ಬೇಡುವಾ ರಂಗೈಯ್ಯ
ಕರದಿ ಕೊಡಲಿವಿಡಿವಾ
ಹರಕುತನವು ತಂದೆ ಯಾಕೋ ನಿನಗೆ ಎನೆ
ಸುರಗಂಗೆ ವರ ಜಮದಗ್ನಿ ನಗುತಿಹರು 3
ಜಟವ ಬೆಳೆಸಿ ಕಟ್ಟಿಹಾ ರಂಗಯ್ಯ
ಹಟದಿ ಮಾತುಳನಳ್ದೀಹಾ
ಹಟಮಾರಿತನ ನಿನಗ್ಯಾರು ಕಲಿಸಿದರೆನೆ
ದಿಟ ಪವಮಾನಾರ್ಜುನರು ನಗುತಿಹರು 4
ಅರಿವೆ ತಾನುಡಲು ವಲ್ಲ ರಂಗೈಯ್ಯ
ತುರಗವೇರಲು ಬಲ್ಲಾ
ನರಸಿಂಹವಿಠ್ಠಲ ಸರಿಯಲ್ಲವಿದು ಎನೆ
ಸುರರು ಗಹಗಹಿಸಿ ನಗುತಿಹರು 5