ಬಲ್ಲೆನೋ ಚಲ್ಲಾಟವ ಪ
ಸಲ್ಲದೋ ಎನ್ನಲಿದೆಲ್ಲವು ಅ.ಪ
ದುರುಳ ಕಂಸನಿಗಂಜಿ ಇರುಳು ಸಮಯದಲಿ
ತೆರಳಿದ ನಿನ್ನಯ ತಿರುಳುಗಳನು 1
ಸಾಧು ಸುಧಾಮನ ಹಿಡಿಯವಲಕ್ಕಿಗೆ
ಮೋದವ ಪೊಂದಿದ ಮಾದರಿಯನು 2
ಗಂಧದ ಲೋಭಕೆ ನಂದದಿ ಕುಬುಜೆಯ
ಸುಂದರಿ ಮಾಡಿದ ಅಂದಗಳನು 3
ಕೋರಿಕೆ ಪೊಂದಿದ ಜಾರತನವ 4
ಹಟದಲೆ ಪಾರ್ಥಗೆ ಅನುಜೆ ಸುಭದ್ರೆಯ
ಘಟಿಸಿದ ನಿನ್ನಯ ಕಪಟತನವ 5
ನಿನ್ನ ಭಕುತರೊಳು ಎನ್ನನು ಸೇರಿಸಿ
ಮನ್ಮನವರಿತು ಪ್ರಸನ್ನ ನೀನಾಗೆಲೋ 6