ಜ್ಞಾನ ಪ್ರದಾಯಕ ಪ್ರಾಣದೇವ ಪ
ಕಾಣೆ ನಿನಗೆ ಸಮಸತ್ಪ್ರಭಾವ ಅ.ಪ
ಈ ಶರೀರದೊಳು ವಿಭೀಷಣನ ತೋರೊ 1
ಕೋಪ ಕುಜನತ್ವ ದುರ್ ವ್ಯಾಪಾರಾದಿಗಳನ್ನೆಲ್ಲ
ರೂಪಡಗಿಸಿದೆ ನೀನೇ ಭೂಪನೈಯ್ಯ 2
ಇಪ್ಪತ್ತೊಂದು ವಿಧದ ತಪ್ಪುಗಳ ತಿದ್ದಿದೆ ತಿ-
ಮ್ಮಪ್ಪ ವೇದ ವ್ಯಾಸರ ಶಿಷ್ಯಾವರ್ಯಾ 3
ಕಲಿಮಾರ್ಗದಲಿ ಪೋಪ ಹೊರೆ ಬುದ್ಧಿನಾಶಗೈಸಿ
ಒಳಗೆ ನೀ ಪೊಳೆವುದು ಜಲಜಾಪ್ತ ಪ್ರಿಯ4
ರಂಜೀತವಾದ ಕಣ್ಣ್ಣಿಗೆ ಮಂಜು ಮುಚ್ಚಿಹುದು ದಿ-
ವ್ಯಾಂಜನ ಹಚ್ಚೈ ವೀರಾಂಜನೇಯಾ5
ಯೇಳಾರೊಳಗೆ ಹದಿನೇಳಾನೆಯವರನು
ಪಾಲಿಪ ದೊರೆ ನೀನು ಜಾಲವೇನು?6
ಸಿರಿಗುರುರಾಮ ವಿಠಲನ ಶರಣಾರಾಭರಣ ನೀನೆ
ಕರುಣೀಸದಿದ್ದರೆಮ್ಮನು ಕಾವರಾರೈ 7