ಕನ್ನಡಿಯ ಪೋಲುವೊ ಚೆನ್ನ ಕೆನ್ನೆಯ ತೋರು ಪ.
ಚನ್ನ ಚೆಲುವೆ ಬಣ್ಣದರಿಶಿಣವ ಪೂಸುವೆನು
ರನ್ನದ ಲಲಾಟಕೆ ಚನ್ನ ಕುಂಕುಮ ತಿಲಕ
ಚಿನ್ನದಾ ಬೊಂಬೆ ಪದ್ಮಾವತಿ ನಿನಗೆ ತಿದ್ದುವೆನೆ
ಚನ್ನಕೇಶವರಾಯ ನಿನ್ನ ಚೆಲುವಿಕೆಗೆ ಮೆಚ್ಚಿ ಬಂದಿಹೆನೆ 1
ಅರವಿಂದದಳನಯನೆ ಅಡವಿಯಲಿ ಯನ ಮೇಲೆ
ಅರಸಿ ನೀ ಕಲ್ಲುಗಳ ಬೀಸಿದಾ ಕರಕೆ ಗಂಧ
ಸರಸದಲಿ ಹಚ್ಚುವೆನೆ ಸರಸಿಜಾಕ್ಷಿಯೆ ಕೊರಳ
ಹರುಷದಲಿ ತೋರೀಗ ನಿನ್ನ ಸರಸಿಜಾಕ್ಷಗೆ ಅರಸಿ ಪದ್ಮಿನಿಯೆ 2
ಸರ್ಪವೇಣಿಯೆ ನಿನಗೆ ಕಂದರ್ಪಪಿತ ಮಲ್ಲಿಕಾ ಪುಷ್ಪ
ದಂಡೆಯನು ಮುಡಿಸುವೆನು ಕಮಲನಯನೆ
ಸರ್ಪಶಯನನು ನಿನಗೆ ಅರ್ಪಿಸುವೆ ಸುತಾಂಬೂಲ
ದರ್ಪವನು ಬಿಟ್ಟು ಕೈಕೊಳ್ಳೆ ವೀಳ್ಯವ ಅರಸಿ
ಸರ್ವರಿಗೆ ಅಪ್ಪ ಶ್ರೀ ಶ್ರೀನಿವಾಸಾನೆಂದು ತಿಳಿಯೆ ದೇವಿ 3