ಒಟ್ಟು 2 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಲ ಗಗನ ನಿಭ ನಿರ್ಮಲಗಾತ್ರನೆ ಪ ಬಾಲಶಶಾಂಕನ ಪೋಲ್ವ ಸ್ವಾಮಿ ಬಾಲಶಶಾಂಕನ ಪೋಲ್ವ ನೀಲಕುಂತಳ ಪರಿಶೋಭಿತ ಫಾಲಕೆ ಕುಂಕುಮವ ಹಚ್ಚುವೆನು 1 ನಳಿನ ನಯನ ಕೋಮಲ ಕಮಲಾನನ ಚಲುವ ಕರಂಗಳ ತೋರೋ ಸ್ವಾಮಿ ನಳಿನವ ಪೋಲುವ ಚಲುವ ಕರಕೆ ನಾ ನರಿಸಿನ ಹಚ್ಚುವೆನೀಗ ಸ್ವಾಮಿ 2 ಅಂಬುಜನಾಭನೆ ಅಂಬುಧಿ ಗಂಭೀರ ಶಂಬರಾರಿ ಶತತೇಜ ಸ್ವಾಮಿ ಕಂಬುಕಂಧರ ತೋರು ಸಂಭ್ರಮದಲಿ ನಾ ಗಂಧವ ಹಚ್ಚುವೆನೀಗ ಸ್ವಾಮಿ 3 ಸುಮಶರ ಜನಕನೆ ಸುವಶರ ವೈರಿಯ ಕಾರ್ಮುಕ ಭಂಜಕ ಸ್ವಾಮಿ ಸಮ ವಿರಹಿತ ನಿನ್ನ ಕೊರಳಿಗ್ಹಾಕುವೆನೀಗ ಕುಸುಮ ಮಾಲೆಯ ನಾನು ಸ್ವಾಮಿ 4 ವಾರಿಧಿ ಚಂದ್ರಮನೆ ಧೀರ ವೀರ ದಿತಿಜಾರಿದೇವ ಶ್ರೀರಘುವೀರ ಶ್ರೀ ಕರಿಗಿರೀಶನೇ ನಿಮ ಗಾರತಿ ಎತ್ತುವೆ ಸ್ವಾಮಿ 5
--------------
ವರಾವಾಣಿರಾಮರಾಯದಾಸರು