ಸೀತಾಪತಿ ಹರಿ ವಿಠಲಾ | ಪ್ರೀತ ನಾಗೊ ಇವಗೇ ಪ
ಮಾತಿಗೆ ಗತಿ ಪ್ರದ | ಖ್ಯಾತಿ ಉಳ್ಳವನೇ ಅ.ಪ.
ಉಚ್ಛ ಸಂಸ್ಕøತಿ ಪೊತ್ತು | ಮೆಚ್ಚಿ ಹರಿಪಾದ ದಾಸ್ಯದೀಕ್ಷೆ ಕಾಂಕ್ಷಿಸುತಿಹನು | ಅಚ್ಯುತಾನಂತಾಕುಚ್ಛಿತನು ಇವನಲ್ಲ | ಅಚ್ಚ ಭಕುತನು ಇವಗೆಮೆಚ್ಚಿ ತವದಾಸ್ಯ ಕೊಡು | ಸಚ್ಚಿದಾನಂದಾ 1
ಸಿರಿ | ತೈಜಸಾಭಿಧನಿಂದಬೋದಿಸಿಹೆ ಅಂಕಿತವ | ಶ್ರೀದ ಶ್ರೀ ರಾಮ 2
ಮಧ್ವಮತ ಪದ್ದತಿಯ | ವೃದ್ಧಿಗೈಸಿವನಲ್ಲಿಬುದ್ಧಿ ಚತುರತೆ ಇತ್ತು | ಉದ್ದರಿಸೊ ಇವನಾಕೃದ್ಧ ಖಳ ಜನರಿವನ | ಸ್ಪರ್ಧಿಸದ ತೆರಮಾಡೊಮಧ್ವಾಂತರಾತ್ಮಕನೆ | ಅದ್ವಯನೆ ದೇವಾ 3
ಬಿಂಬೈಕ್ಯ ಚಿಂತನೆಯ | ಹಂಬಲವನೇ ಹಚ್ಚಿತುಂಬಿಸೋ ಸಾಧನವ | ಅಂಬುಜಾಂಬುಕನೇಉಂಬುಡುವ ಕ್ರಿಯೆಗಳನು | ಬಿಂಬ ಮಾಡಿಸೆ ಪ್ರತಿಬಿಂಬ ಮಾಳ್ಪನು ಎಂಬ | ನಂಬುಗೆಯ ನೀಯೋ 4
ಶ್ರೀವರನೆ ತವನಾಮ | ಸರ್ವದಾಸ್ಮರಿಪಂಥಭಾವವೀಯುತ ಹೃದಯ | ಗಹ್ವರದಿ ತೋರೀತಾವಕಗೆ ಭವವನಧಿ | ದಾಂಟಿಸಲು ಪ್ರಾರ್ಥಿಸುವೆಪಾವು ಮದ ಹರ್ತ ಗುರು | ಗೋವಿಂದ ವಿಠಲಾ 5