ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾವಸುದೇವ ಸುತನ ಕಾಂಬುವೆನು ಪ
ಭವ ವಿಷಯ ವಾರುಧಿಯೊಳಗೆಶಶಿಮುಖಿಯೆ ಕರುಣದಿ ಕಾಯೆ ಅ.ಪ.
ಚಾರು ಚರಣಗಳ ಮೊರೆ ಹೊಕ್ಕೆಕರುಣದಿ ಕಣ್ಣೆತ್ತಿ ನೋಡೆ 1
ಮಂದಹಾಸವೇ ಭವಸಿಂಧುವಿನೊಳಗಿಟ್ಟುಚಂದವೇ ಎನ್ನ ನೋಡುವುದುಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನಮಂದರಧರನ ತೋರಮ್ಮ 2
ಅಂದಚಂದಗಳೊಲ್ಲೆ ಬಂಧು ಬಳಗ ಒಲ್ಲೆಬಂಧನಕೆಲ್ಲ ಇವು ಕಾರಣವುಇಂದಿರೇಶನ ಪಾದದ್ವಂದ್ವವ ತೋರಿ ಹೃನ್ಮಂದಿರದೊಳು ಬಂದು ಬೇಗ 3