ಹೋದ್ರೆ ಹೀಗೆ ಹೋಗಬೇಕು ಗೂಡಿನಿಂದ ಜೀವನ
ಸಾಧನೆಯನ್ನು ಮಾಡಿದಾತ ಲಾಗವನ್ನು ಹಾಕಿದಂತೆ ಪ
ಬೇನೆ ಮೈಯೊಳೇನು ಇಲ್ಲದೆ ಜ್ಞಾನವಿದ್ದು ಎಚ್ಚರಿದ್ದು
ಕಾನ ಕಪಿಯ ಮೇಲï ಮನಸು ಹೀನವೃತ್ತಿಗೆ ಹೊಗದಂತೆ 1
ಹುಚ್ಚುಗೊಳದೆ ಭಂಗಿಯನ್ನು ಹಚ್ಚದಾತ ಕುಣಿಯುವಂತೆ
ಸ್ವಚ್ಛವಾಗಿ ಕಾಯದೊಳಗೆ ತುಚ್ಛಮನವು ಇಲ್ಲದಂತೆ 2
ಅತ್ತಲಿತ್ತ ಹೊಡೆಕಣಿಲ್ಲದೆ ಸುತ್ತ ಮುತ್ತ ಕಾದುಕೊಂಡ
ಪುತ್ರಮಿತ್ರ ಕಳತ್ರದಲ್ಲಿ ಮತ್ತೆ ಮಮತೆಯಿಲ್ಲದಂತೆ 3
ನಾಭ ಹರಿಯೆ
ಎನ್ನ ಸಲಹೋ ಬಿಡದೆ ಎನ್ನುತ 4
ವಾಂತಿ ಬ್ರಾಂತಿಯೆರಡು ಇಲ್ಲದೆ ಉತ್ಕ್ರಾಂತಿ ಕಾಲದಲ್ಲಿ ಲಕ್ಷ್ಮೀ
ಜಿಹ್ವೆ ನಿರಂತರದಲ್ಲಿ ನುಡಿಯುತಿರ್ದ 5