ನಾನು ತಿಳಿದವನಲ್ಲ ನೀ ಕಾಯ್ದೆ ಶ್ರೀ ಕೃಷ್ಣ
ನಾನರಿಯದಿರ್ದಡಿದ ನೀನರಿಯದವನೇ ಪ
ಒಂದು ದಿನ ನಿನ್ನ ಧ್ಯಾನದಿ ನಡೆದು ಬರುತಿರಲು
ಕೊಂದು ಚೂತದ ನೆಳಲಸಾರಿ ನಾನು
ಒಂದು ನಿಮಿಷಮ ನೀರ ತಡಿಯಲಿ ಸಂಚರಿಸುತಿರ
ಲೊಂದು ತಕ್ಷಕ ಬಂದು ವನವ ಹೊಕ್ಕಿರಲು 1
ಮಲ ಮೂತ್ರದುಪಹತಿಯ ಪರಿಹರಿಸಿ ಕೈಗಳನು
ಜಲಮೃತ್ತಿಕೆಗಳಿಂದ ತೊಳೆದು ತೊಳೆದು
ಎಳೆ ಬಿಸಿಲ ಸೇವಿಸುತ ದಂತಧಾವನ ಗೈದು
ಸಲಿಲವನೆ ಮುಕ್ಕುಳಿಸಿ ಕೇಲದೊಳುಗಿದು 2
ನಿಂತು ಕಾಲ್ಮೊಗ ದೊಳೆದು ಆಚಮಿಸಿ ಆದಿತ್ಯ
ನಂತಿ ಕಕೆ ಸಲಿಲಮಂತಿದ್ದಿ ಜಪವಾ
ಅಂತ ರಂಗದಿ ಜಪಿಸಿ ಮುಗಿಸಿ ವಸ್ತ್ರಗಳಿಟ್ಟು
ಗೊಂತಿಗೈತಂದವನು ಮರಳಿಧರಿಸಿ 3
ಹಚ್ಚಡವ ಹೊದ್ದು ಮುಂದಕೆ ನಡೆದು ಬರುತಿರ
ಲಾಶ್ಚರ್ಯವೆನಿಸಿ ಬದಿಯೊಳಗುಮ್ಮಲು
ಸ್ವಚ್ಚವಲ್ಲವಿದೆಂದು ಕಿಮುಚಿನಾ ನೋಡಿ ಬಲು
ಬೆಚ್ಚಿ ಹಚ್ಚಡ ಬಿಸುಡೆ ಬಿಚ್ಚೆ ಪೆಡೆಯಲು ಕಂಡೆ 4
ನೀ ಕೊಲುವ ಕಾಲದೊಳು ಕೊಲುವರಿಲ್ಲ
ಲೋಕೈಕನಾಥ ಚಿಪ್ಪಳಿ ವೇಣುಗೋಪಾಲ
ನೀ ಕರುಣದಿಂ ಕಾಯ್ದೆ ಎನ್ನಸುವನು 5