ಖುಲ್ಲ ಮಾತುಗಳು
ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ
ಅರಸು ಸಣ್ಣವನೆಂದು ಸರಸವಾಡಲು ಸಲ್ಲ
ಕರೆಸಿ ಕೇಳದ ಮಾತು ಆಡಸಲ್ಲ
ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ
ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ 1
ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ
ಹಗೆಯೊಡನೆ ಸ್ನೇಹವನು ಮಾಡಸಲ್ಲ
ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ
ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ 2
ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ
ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ
ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ
ದೃಢವಾದ ಮೂರ್ಖನೊಳು ಕದನ ಮಾತಿಲ್ಲ 3
ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ
ಗುರುಹಿರಿಯರಾದವರ ಜರೆಯ ಸಲ್ಲ
ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ
ಪರಿ ಸಲ್ಲ 4
ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ
ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ
ವರಾಹ ತಿಮ್ಮಪ್ಪನಿರಲು ಬಲ್ಲ
ನರನು ಹರಿದೂಷಕರ ಸರಿಯೊಳಗೆ ನಿಲ್ಲ 5