ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಕ್ರೂರನ ಒಸಗೆ) ರಥವೋಗದಾ ಮುನ್ನ ಗೋಕುಲಕೆ ಮನ್ಮನೋ- ರಥ ಹೋಗಿರುವುದೇನೆಂಬೇ ಪ ಅತಿ ಕೌತುಕವದಾಯ್ತು ಖಳರಾಯನೊಲಿದು ಯದು- ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ. ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ- ಪತಿ ಸೇವೆ ತಾನಾಗಿ ದೊರೆತೂ ಶತಸಹಸ್ರಾನಂತ ಜನುಮಗಳ ಸು- ಕೃತಕೆ ಫಲವಾಯಿತೆಂದರಿತೂ ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ ಪಥದೊಳಗೆ ತಾವೆ ಮುಂದುವರಿದೂ ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ 1 ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು- ನಾಪುಳಿನದಲಿ ಮೆರೆವ ಚರಣಾ ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ ತಾಪತ್ರಯಾವಳಿವ ಚರಣಾ ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ ಆಪದ್ಬಾಂಧವನ ಚರಣಾ ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ 2 ನೋಡುವೆನು ನೀರದಶ್ಯಾಮಸುಂದರನ ಕೊಂ- ಡಾಡುವೆನು ಕವಿಗೇಯನೆಂದೂ ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ- ಡಾಡುವೆನು ಕೈ ಮುಗಿದು ನಿಂದೂ ಬೇಡುವೆನು ಭುವನೈಕದಾತನೆಂದಲ್ಲಿ ಕೊಂ ಡಾಡುವೆನು ದಾಸ್ಯ ಬೇಕೆಂದೂ ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ- ಗೂಡುವುದು ನಿಸ್ಸಂದೇಹ ದೈವ ಸಹಾಯ 3 ಇರುವನೋ ಏಕಾಂತದೊಳಗಿರುವ ಕೇಳದಿರು ಬರುವನೋ ಬಂದವನ ಕಂಡೂ ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ ಬೆರೆವನೋ ಬೆರಸಿಯದನುಂಡೂ ಒರೆವನೋ ಒಡಲ ಧರ್ಮವನೆಲ್ಲ ವರಗಿನೇ ಜರಿಯನೋ ಜಗದೀಶ ಹಗೆಯವನೆನುತ ಬಗೆಯ 4 ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ- ಗಾಗಿ ಹೆಜ್ಜೆಗಳ ನೋಡಿ ಭೂದೇವಿಗಾಭರಣವೆನುತ ತೇರಿಳಿದು ಶ್ರೀ ಪಾದರಜದೊಳಗೆ ಪೊರಳಾಡೀ ಗೋದೋಹನದೊಳಿದ್ದ ರಾಮಕೃಷ್ಣರ ಕಂಡು ನಾ ಧನ್ಯ ಧನ್ಯನೆಂದಾಡೀ ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ 5
--------------
ಶ್ರೀದವಿಠಲರು
4 ಲೋಕನೀತಿ294ಅಂದೇನಿಂದೇನಯ್ಯ ಶ್ರೀಅರವಿಂದನಾಭನ ಹಗೆಯವ ಅಸುರಎಂದಿಗೆ ಮತಿ ಕವಲಿಲ್ಲದೆ ಹರಿಪದಹೊಂದಿದಗೆ ಮುಕ್ತಿಯವಸರ ಪ.ಅಂದಿಗೆ ಹರಿಮಹಿಮೆಗಳನ್ನು ಆನಂದದಿಂದ ಕೇಳದವ ದ್ವೇಷಿಇಂದಿಗೆ ಹರಿಕಥೆ ತಾತ್ವಿಕ ಜನರನುನಿಂದಿಸುವವನೆ ನಿಜದ್ವೇಷಿ 1ಸರ್ವಹ ಕೃಷ್ಣಾಕೃತಿಗೆ ವೈರ್ಯಾಗಿ ಬಹುಗರ್ವಿಪ ಕಂಸನು ಅತಿತಾಮಸಉರ್ವಿಲಿ ನರಹರಿ ಚರಣವರ್ಚಿಸದೆಶರ್ವಸರ್ವೋತ್ತಮನೆಂಬವತಾಮಸ2ವಾಸುದೇವನ ಪಾಶದಿ ಬಿಗಿಸುವೆನೆಂದುಆಶಿಸಿ ಕೆಟ್ಟ ಕೌರವ ಕುಮತಿದೋಷ ಧರ್ಮವನೆಲ್ಲ ಸರಿಮಾಡಿ ಶಾಕ್ತನಾಗ್ಯಾಸುರಿ[ಯ] ಪೂಜಿಪ ಹೊಲೆ ಕುಮತಿ 3ರುಕ್ಮಿಣಿ ದೇವಿಯೆ ಲಕ್ಷ್ಮಿಯೆಂದು ತಿಳಿಯದರುಕ್ಮನು ಮದಸೊಕ್ಕಿದ ಪಾಪಿಲೆಕ್ಕವರಿಯದೆ ಜೀವೇಶರು ಸಮರೆಂದುಲೆಕ್ಕಿಸುವವ ನರರೊಳು ಪಾಪಿ 4ಕೃತಕ ಹಕ್ಕಿಯನೇರಿ ತಾ ವಾಸುದೇವನೆಂದುಅತಿಕ್ಲೇಶವುಂಡ ಪೌಂಡ್ರಕ ಕಲಿಯುಸಕಳ ಜಗದೊಡೆಯ ಪ್ರಸನ್ವೆಂಕಟೇಶನಭೃತ್ಯನಾಗದೆಯೆ ನಾನೆಂದವ ಕಲಿಯು 5
--------------
ಪ್ರಸನ್ನವೆಂಕಟದಾಸರು