ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟುಪಾಪವನು ಮಾಡಿದುದೆ ಸಾಕೊ |ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |ಕೊಡದೆ ಅನ್ಯರ ಋಣವನಪಹರಿಸಿದೆ |ಮಡದಿಯ ನುಡಿಕೇಳಿಒಡಹುಟ್ಟಿದವರೊಡನೆ |ಹಡೆದ ತಾಯಿಯ ಕೂಡಹಗೆಮಾಡಿದೆ1ಸ್ನಾನಸಂಧ್ಯಾನಜಪ ಮಾಡದಲೆ ಮೈಗೆಟ್ಟೆ |ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |ಶ್ವಾನ- ಸೂಕರನಂತೆ ಹೊರೆದೆ ಹೊಟ್ಟೆ2ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |ಅತಿಥಿಗಳಿಗನ್ನವನು ನೀಡಲಿಲ್ಲ |ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |ವೃಥವಾಗಿ ಬಹುಕಾಲ ಕಳೆದನಲ್ಲ 3ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |ಮಧ್ವ ಮತಸಿದ್ದಾಂತ ಪದ್ಧತಿಗಳ ||ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |ಮಂದಭಾಗ್ಯದಬವಣೆತಪ್ಪಲಿಲ್ಲ ||ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5
--------------
ಪುರಂದರದಾಸರು
ಶ್ರೀ ರಮಾರಮಣಂ |ಸರಸಿಜನಯನಂ ||ಕ್ಷೀರವಾರಿಧಿ ಶಯನಂಪಮಾರಜನಕಮುರವೈರಿ ಜನಾರ್ದನ |ತೋರಿಸಲಹು ದಶಾವತಾರ ಹರೀ ||ಶ್ರೀರಾಮ||ಅ.ಪಪೊಳವ ನಾರುವ ಮೈಯ್ಯಾ | ತಳೆದು ತೋರುವ ಕೈಯಾ ||ಬಲಿದ ಕೋರೆಯ ಬಾಯಿ | ಗಳದ ಕರುಳ ಮಾಲೆಯ |ಚೆಲುವ ಬ್ರಹ್ಮಚಾರಿ || ಪಡೆದಳ ಕಡಿದು ಪಿತಗೆ ತೋರಿ ||ಇಳೆಯಧಿಪತಿ | ಗೋವಳರರಸನು |ಘೋರತಮಾ ಸುರಾರಿ | ಭಾರಮಂದರೋದ್ಧಾರಿ |ಧಾರಿಣೀ ಚೋರವೈರಿ | ಸಾರೀ ಮನವ ಕೇಸರೀ ||ಮೂರಡಿಧರೆಬೇಡಿ ಧರಣಿಪ | ವೀರರೊಳ್ ಹಗೆಮಾಡಿ |ವಾರಿಧಿಬಂಧಿಸಿ | ತೀರಿಸಿ ಕಂಸನ | ನಾರಿಯರೊಡಗೂಡಿ |ಏರಿದೆ ತುರಗವಾ 2ವೇದೋದ್ಧಾರವ ಗೈದೆ | ಭೇದದಿ ಸುಧೆಯೆರೆದೆ ||ಮೇದಿನಿಯನು ತಂದೆ | ಪ್ರಹಲ್ಲಾದಗೊಲಿದೇ ||ಕಾದೆ ಬಲಿಯೊಳ್ ದ್ವಾರ | ವಿಬುಧರ ಆದರಿಸಿದೆ ವೀರ |ಮೇದಿನಿಸುತೆ ಚೋರಾಂತಕ ಯದುಪತಿ | ಸಾಧು ವಂದಿತ |ಮ್ಲೇಂಛಾರಿ ಗೋವಿಂದನೇ 3
--------------
ಗೋವಿಂದದಾಸ