ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ನಿನ್ನ ಧ್ಯಾನ ಒಡೆಯ ಶ್ರೀರಮಣ ಎಡಬಿಡದಲೆ ತವಅಡಿಭಕ್ತಿಜ್ಞಾನ ಪ ವನವಸೇರಿರಲಿ ಮತ್ತನುಗಾಲ ಬಡತನ ವನುಭವಿಸುತಿರಲಿ ಘನಸುಖದಿರಲಿ 1 ಸತಿಯಳೊಂದಿಗೆ ಬಿಡದೆ ರತಿಕ್ರೀಡೆಲಿರಲಿ ಸತತದಿ ತವಭಕ್ತಿ ಹಿತಾಹಿತದ ಚಿಂತನೆಯನು 2 ಚಳಿ ಮಳೆಯೊಳು ಬಿದ್ದು ಕಳವಳಗೊಳ್ಳುತಿರಲಿ ಹುಲಿಯ ಬಾಯೊಳು ಸಿಲ್ಕಿ ಹಲುಬಿ ಎದೆಯೊಡೆದು 3 ಕೊಟ್ಟ ಒಡೆಯರು ಬಂದು ಕಟ್ಟಿ ಕಾದಲಿ ಜನ ಬೆಟ್ಟ ಬೇಸರಮಾಡಿ ಅಟ್ಟಬಡಿಯುತಿರಲಿ 4 ಬೇನೆಯೊಳ್ ಬಿದ್ದಿರಲಿ ಹಾನಿಯಾಗಲಿ ಮಾನ ಕಾಣದೆ ಸುಳ್ಳನೆಂದು ಹೀನನುಡಿಯಲಿ ಬಿಡದೆ 5 ಹಗೆಗಳು ಬಂದೆನ್ನ ಬಗೆ ಬಗೆ ನಿಂದಿಸಿ ನಗೆಗೇಡು ಮಾಡೆನ್ನ ಜಗದೆಳಡಾಡುತಿರಲಿ 6 ಅವ ಪರಿಯಲಿರಲಿ ದೇವ ಶ್ರೀರಾಮ ನಿನ್ನ ಸಾವಿರನಾಮ ಎನ್ನ ಭಾವದಿ ನುಡೀತಿರಲಿ 7
--------------
ರಾಮದಾಸರು
ಬೇಡೆಲೊ ಜೀವಾ ಜನಿಸಲೆ ಬೇಡೋ ಪ ಬೇಡ ನಿಜಸುಖ ದೊರೆಯದು ನೋಡೋ ಅ.ಪ ಹೆಣ್ಣೋ ಗಂಡೋ ಆಗಿ ಮೆರೆಯುವೆಮಣ್ಣು ಹೊನ್ನಿಗೆ ನೀ ಹಾತೊರೆಯುವೆಉಣ್ಣುತ ಪ್ರಾರಬ್ಧವ ಬಾಯ್ದೆರೆಯುವೆಹಣ್ಣಾಗುವೆ ನೀ ಪರೀಕ್ಷೆ ಮಾಡೊ 1 ಆರು ಹಗೆಗಳು ಗಡ ಮುತ್ತುವವೊಮೂರು ತಾಪಗಳು ಕಡು ಹೊತ್ತುವವೊನೂರೊಂದೊಗಟಗಳಿರದೊತ್ತುವವೊಪಾರಾಗಲು ಬಿಡವೆಂದಿಗು ಕೇಡೋ 2 ಹುಟ್ಟು ಸಾವುಗಳ ಸುಳಿಯಲಿ ಸುತ್ತುವೆಒಟ್ಟು ಮರಳಿ ಸಂಚಿತವನು ಬಿತ್ತುವೆ ಗಟ್ಟಿಸಿ ಗದುಗಿನ ವೀರನಾರಾಯಣನೆಹುಟ್ಟಿಸಬೇಡೆಂದಿಚ್ಛಿಸಿ ಬೇಡೋ 3
--------------
ವೀರನಾರಾಯಣ