ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾದಿರುವೆನೋ ಕೃಷ್ಣ ಕಾದಿರುವೆನೋ ಪ ಮೋದಕ ನಿನ್ನ ನೆನಪಿನ ದೇಗುಲದಲ್ಲಿ ಆದಿನ ಕಾದಿದ್ದ ರಾಧೆ ಶಬರಿಯೊಲು ಅ.ಪ ಹಗಲಿರುಳೂ ನಿನ್ನ ಸ್ಮರಣೆಯ ಮಾಡುತ ಬಗೆಬಗೆಯಲು ನಿನ್ನ ಬಾಹ್ಯದಲೂ ನಿನ್ನ ನಗಧರ ಕಾಣಲು ಕಾದಿಹೆನೋ ಚ- ನ್ನಿಗ ನಿನ್ನ ನೆನೆನೆನೆದು ಹಾಡುವೆನೋ 1 ನನ್ನೀ ಸ್ಮರಣೆಯ ನುಡಿ ನುಡಿಯಲ್ಲೂ ಚಿನ್ಮಯ ನೀ ಕುಣಿದಾಡುತಿಹೆ ನನ್ನಯ ಪೂಜೆಯ ಆಡಿ ಅಡಿಯಲ್ಲೂ ಎನ್ನಯ್ಯ ಸಾಮೀಪ್ಯವಾಗಿರುವೆ 2 ಜಾಜಿಪುರಿಯ ಚೆನ್ನಕೇಶವ ನಿನ್ನ ಮೋಜಿನ ಚಿತ್ರವ ಚಿತ್ತದಿ ನಿಲಿಸಿಹೆ ಈಜಿಸಬೇಡಯ್ಯ ಸಾಕು ಸಂಸಾರ ಪಾದ ತೋರೊ ಪವಡಿಸುವೆ3
--------------
ನಾರಾಯಣಶರ್ಮರು
ಪರಮಪುರುಷ ಪಾಲಿಪುದೈ ಸರಸಿಜಾಕ್ಷ ಸರ್ವರಕ್ಷ ಪ ಮಗುವಾದ ಧ್ರುವನು ಅಗಣಿತಗುಣ ನಿನ್ನನು ಹಗಲಿರುಳೂ ಮೃದುಪದವಂ ಬಿಗಿದಪ್ಪುತ ಧ್ಯಾನಿಸೆ 1 ಯೋಗಿಜನಾನಂದಕನೆ ಬೇಗದಿ ಮೈದೋರುತಲಿ ಭಾಗವತಪ್ರಿಯಪದವಂ ರಾಗದಿತ್ತೆ ಜಾಜೀಶ 2
--------------
ಶಾಮಶರ್ಮರು