ಯಥಾದೇವೊ ತಥಾ ಗುರೌ
ಶ್ರುತಿ ಹೇಳಿದ ಸನ್ಮತಲಿರ್ಯೊ ಧ್ರುವ
ವೃಥಾ ಅಭಾವ ನೀ ಹಿಡುವರೆ
ಸ್ವತ:ಸಿದ್ಧವ ತಾಂ ಬಿಡುವರೆ
ಸತ್ಸಂಗದಲಿ ನೋಡಿನ್ನಾರೆ
ಚಿತ್ಸುಖ ಹೊಳೆವರು ಕಣ್ಣಾರೆ 1
ಮುಗಿಲಿಗೆ ಮತ್ತೆ ಮುಗಿಲುಂಟೆ
ಹಗಲಿಗೆ ಹಗಲಾಗುದುಂಟೆ
ಜಗ ಇಹುದಕೆ ಜಗಮುಂಟೆ
ಹೀಗಾದ ಮ್ಯಾಲೆ ವಸ್ತು ಎರಡುಂಟೆ 2
ಅನುಭವಕಿದರಿಟ್ಟು ಬಾಹುದು
ಖೂನ ಹೇಳವ್ಯಾವು ನೋಡು ವೇದ
ದೀನ ಮಹಿಪತಿಗಿದೆ ಬೋಧ
ಭಾನುಕೋಟಿತೇಜನೊಂದೇ ತಾನಾದ 3