ನೆನೆ ಮನವೆ ಮಾಧವನ ಪ
ಮುನಿವರೇಣ್ಯರ ಮನದಿ ಅನುದಿನವು ನೆಲಸಿಹ
ವನರುಹ ಲೋಚನನ ಅ.ಪ
ಸತಿಸುತರ ಮೋಹವನು ಹಿತವೆಂದು ಅರಿಯುತಲಿ
ಮತಿಯ ಕೆಡದಂತೆ ನೀ ಅತಿಶಯದ ಭಕುತಿಯಲಿ 1
ಮರುಳು ಮಾಡುವ ಭವದ ಪುರಳು ಸುಖಗಳಿಗೆ ನೀ
ಇರುಳು ಹಗಲಲ್ಲಿ ಉರಳಿ ಕೆಡದಿರುವಂತೆ 2
ಮುನ್ನಗಳಿಸಿದ ಬಹಳ ಉನ್ನತದ ಅಘಗಳಿಗೆ
ಖಿನ್ನನಾಗುತ ಸುಪ್ರಸನ್ನ ಶ್ರೀ ನರಹರಿಯ 3