ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ ಕಳ್ಳರಿಗೆ ಕಳ್ಳನಂತೆ - ಬೆಳ್ಳಕ್ಕಿಯಂದದಿ ಡಂಭಅ ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ1 ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ 2 ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ 3
--------------
ಕನಕದಾಸ
ಎಳ್ಳು ಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯಬೆಳ್ಳಕ್ಕಿಯಂತೆ ನಿನ್ನ ಧ್ಯಾನವ ಮಾಡುವೆನಯ್ಯಾ ಪಗಂಡು ಮುಳುಗಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿಮಂಡೆಶೂಲೆಯಲ್ಲದೆ ಗತಿಯು ಇಲ್ಲಮಂಡೆಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ1ಗಾಣದೆತ್ತಿನಂತೆ ಕಣ್ಣಕಟ್ಟಿ ಪ್ರದಕ್ಷಿಣೆ ಮಾಡಿಕಾಣದೆ ನಾ ತಿರುಗಿದೆ ಕಂಡುದಿಲ್ಲಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿಆಣಿಕಾರಿಕೆ ಮಾಡಿದಂಥ ಈ ಕುಯುಕ್ತಿಯು 2ಇಕ್ಕಳವ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲಪೊಕ್ಕಳ ಪೂವಿನ ಶ್ರೀ ಪುರಂದರವಿಠಲನೆಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ 3
--------------
ಪುರಂದರದಾಸರು