ಏಳಯ್ಯ ಶ್ರೀ ಲಕ್ಷ್ಮೀರಮಣ ಸುರನÀುತ ಚರಣ
ಏಳು ಶ್ರೀ ನೀಲಕಂಠನ ಮಿತ್ರ ಸುಚರಿತ್ರ
ಏಳು ಶ್ರೀ ಭಾಗೀರಥೀ ಪಿತನೆ ಮತಿಯುತನೆ
ಏಳು ಶ್ರೀ ಕೃಷ್ಣರಾಯ ಸ್ವಾಮಿ ಏಳಯ್ಯ ಬೆಳಗಾಯಿತು ಪ
ನಸುಗೆಂಪಾಗಿ ತಾರಕಿಗಳಡುಗುತಿದೆ
ಬೊಂಪು ಹರಿದೋಡುತಿದೆಕೋ
ಸೊಂಪಡಗುತಿದೆ ಕುಮುದ ಕಮಲವರಳುತಿದೆ ನಾಗ
ಸಂಪಿಗೆಯ ಬನದಿ ಸ್ವರ ಗೈಯುತಿದೆ ಮರಿದುಂಬಿ
ಸಂಪತ್ತು ಬಡವಗೆ ಬರುವಂತೆ ರವಿ ಬಿಂಬ
ಸೊಂಪಿ ನಿಂದೆಸೆಯುತಿದೆಕೋ ||ಸ್ವಾಮಿ|| 1
ಹಲವುಮೃಗ ಜಾತಿಗಳು ಹಳುವನಡ ಹಾಯುತಿವೆ
ಫಲ ಪುಷ್ಪಚಯವು ಪಲ್ಲವಿಸಿ ಪಸರಿಸುತಲಿವೆ
ಗಿಳಿ ವಿಂಡು ನಲಿಯುತಿದೆ ನವಿಲು ಜೇಂಕರಿಸುತಿವೆ
ಹೊಲ ಮನೆಗಳೆಲ್ಲ ಹಸನಾಗಿ ಕಾಣಿಸುತಲಿವೆ
ಸುಳಿಗಾಳಿ ಸುಳಿಯುತಿದೆ ಜಲಜಾಕ್ಷನುಪ್ಪವಡಿಸಾ ||ಸ್ವಾಮಿ|| 2
ಹಕ್ಕಿಗಳು ಹಾರುತಿದೆ ಕುಕ್ಕುಟವು ಕೂಗುತಿದೆ
ನಕ್ಷತ್ರ ಪತಿಯ ಪ್ರಭೆ ಮಾಸುತಿದೆ ಸುರಭಿ ಬಲು
ರಕ್ಕಸಾಂತರನೆವಳು
ಮನೆಮನೆ ಬಿಡದೆ
ಅಮ್ಮಿಯನು ಹುಡುಕುತಿವೆ
ಚೊಕ್ಕ ಬೆಳಗಾಯಿತಿದೆ ಕೋ ||ಕೃಷ್ಣ || 3
ಪತಿವ್ರತೆಯರೆದ್ದು ಪುರುಷನ ಚರಣಕ್ಕೆರಗಿ ಚಮ
ತ್ಕøತಿಯಿಂದ ಮುಖ ಮಜ್ಜನವಮಾಡಿ ಪಣೆಗಿಟ್ಟು
ದಧಿ ಮಥಕನುವಾಗಿ ಕುಳಿತು
ಅತಿಶಯ ದೊಳಗೆಲ್ಲ ಮನೆವಾರ್ತೆಯನು ಮುಗಿಸಿ ನಿಜ
ಮತ ವಿಡದು ಭಕ್ತಿಯಲಿ ಗಿಂಡಿಲುದಕವ ತುಂಬಿ
ನೀನು ಉಪ್ಪವಡಿಸ 4
ಮದ್ದು ಮಂತ್ರವು ಸಿದ್ದಿಸುವ ಕಳವಿನೊಳಗಿರ್ದ ಚೋರರಿ
ಗೆದೆಯ ಧೈರ್ಯಗುಂದುವ ಸಮಯ
ಉದ್ಯೋಗವಂತರಿಗೆ ಎಚ್ಚರಿಕೆ ಸಮಯ ದರಿದ್ರರಿಗೆ
ನಿದ್ದೆ ಸಮಯ ಬುದ್ದಿಯುತರಾದ ಬುಧಬಾಲರಿಗರ್ಥಗ್ರಂಥ
ದ್ಯಾನ ಶಾಸ್ತ್ರ ಪುರಾಣಗಳ ಬಹುವಿದ್ಯೆ ಪಠಿಸುವ
ಮುದ್ದು ಗೋಪಾಲಕೃಷ್ಣ 5
ವ್ಯಾಸ ವಾಲ್ಮೀಕಿ ಶುಕನಾರದನು ಶೌನಕ ಪರಾಶರ
ವಶಿಷ್ಟ ವೈಶಂಪಾಯ ಕಣ್ವ ವಿಶ್ವಾಮಿತ್ರ ಗೌತಮ ಭರದ್ವಾಜ
ಸನಕ ದೂರ್ವಾಸ ಕೌಶಿಕ ಕಪಿಲರು
ಕೌಶ್ಯಪ ದಧೀಚಿ ಭಾರ್ಗವರಗಸ್ತ್ಯ ಋಷಿ
ಈ ಸಮಸ್ತಾದಿ
ಹರಿಯೇ || ಸ್ವಾಮಿ || 6
ಜಾಂಬವ ವಿಭೀಷಣಾಶ್ವತ್ಥಾಮ ಹನುಮಂತ
ಜಂಭಾರಿಸುತ ಧನಂಜಯ ಬಲಿಷ್ಠಹಲಾದರೆಂಬಸದ್ಭಕ್ತರುಗಳು
ಅಂಬುಜೋದ್ಭವ ಮುಖ್ಯರಮರ ಗಂಧರ್ವಾದಿ
ತುಂಬುರ ಭುಜಂಗ ಭೂಸುರರೆಲ್ಲರೊಂದಾಗಿ
ಬಿಡದ ಹಂಬಲಿಸುತೈದಾರೆ ಹರಿಯೆ || ಸ್ವಾಮಿ || 7
ಗಂಗೆ ಗೋದಾವರಿಯ ಭೀಮರತಿವರದೆ ವರ
ತುಂಗ ಭದ್ರೆಯು ಯಮುನೆ ಕಾವೇರಿ ಸಿಂಧು
ಅಂಗನೆಯರೆಲ್ಲರೂ ಕೂಡಿ
ರಂಗು ಮಾಣಿಕದ ಆಭರಣಗಳಲಂಕರಿಸಿ
ಹಿಂಗದೆಲ್ಲರು ನೆರೆದು ಹರಿ ನಿಮ್ಮ ಬಾಗಿಲೋಳು
ಮಂಗಳಭಿಷೇಕಕೆಂದು ಸ್ವಾಮಿ 8
ಕರುಗಳನು ಕಾಯ್ದ ಕಾರುಣ್ಯ ಮೂರುತಿ ಏಳು
ವರ ಪಾಂಡುರಂಗ ವಿಠಲ
ಹರಿಸುತನ ಹಯವರೂಥವ ಹರಿಸಿದವನೆ ಏಳು
ಹರಿಸುತನ ಸುತನ ಸುತನ ಕಾಯ್ದವನೆ ಏಳು
ಹರಿಸುತನ ಕೋಣೆ ಲಕ್ಷ್ಮೀರಮಣನೆ ಏಳು ಶ್ರೀ ಹರಿಯೆ
ನೀನು ಉಪ್ಪವಡಿಸಾ ||ಕೃಷ್ಣ || 9