ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇತರೆಯಳ ಸುತನೆನಿಪ ಐತರೇಯ |ಗತಿಪ್ರದ ಶ್ರೀ ವಿಷ್ಣು ಸರ್ವಾಂತರಾತ್ಮಾ ಪ ವಿಭೂತಿ ಪಾದ್ಯ ಹರಿಯೇ 1 ಕರ್ಮ ಕರ್ಮಾಂಗದಲಿಪ್ರಕಟವಾಗಲು ಅಲ್ಲಿ ಸನ್ನಿಹಿತನಿರುವೇ 2 ಭೂತ ಪಂಚಕದಲ್ಲಿ ಪಂಚಾತ್ಮ ನೀನಿದ್ದುಭೂತ ವಾಯುವಿನಲ್ಲಿ ಮತ್ತೆ ಪಂಚಾತ್ಮಾ |ಈ ತೆರದಿ ನೀನಿದ್ದು ಭೂತೇಂದ್ರಿ ಮಾನಿಸಹವಾತನಡೆಸುವುದೆಲ್ಲ ಯಜ್ಞವೆನಿಸುವುದು 3 ಇಂತಿಪ್ಪ ಯಜ್ಞದಲಿ ಸಂತ ಶ್ರೀಪಾದಾರ್ಯಅಂತೆ ತಮ ಶಿಷ್ಯ ಸಹಕೃತ ಸುಮಂಗಳದಲಿ |ಧ್ವಾಂತ ಹರ ಶ್ರುತಿಯನ್ನೆ ಐತರೇಯದಿ ವಾಚ್ಯಪಂಥಬಿಧ ಸರ್ವರಿಗೆ ಒಲಿಯೆ ಪ್ರಾರ್ಥಿಸುವೇ 4 ಪರಮ ಹಂಸರು ಎನಿಪ ವಿಶ್ವೇಶ ತೀರಥರವರ ಸುನೇತೃತ್ವದಲಿ ಮಂಗಳದ ಕಾರ್ಯ |ಪರಕಿಸುವ ಸೌಭಾಗ್ಯ ದೊರಕಿದವನಿಗೆ ಭಾಗ್ಯಹರಿ ಗುರು ಗೋವಿಂದ ವಿಠಲ ಕರುಣಿಸುವ 5
--------------
ಗುರುಗೋವಿಂದವಿಠಲರು
ದರುಶನವನು ಕೊಡೆಲೊ ದೇವ ಪ ಸರಸಿಜ ಮಿತ್ರನು ಮೂಡೆ ಪ್ರಾರ್ಥಿಸುವೆನು ಅ.ಪ ತುಂಗಾ ಕೃಷ್ಣ ಕಾವೇರಿ ಗಂಗೆ ಯಮುನೆ ಗೋದಾವರಿ ನರ್ಮದಾ ಮಂಗಳ ನದಿಗಳು ಕಾದುಕೊಂಡಿರುವುವು ರಂಗ ನಿನ್ನ ಚರಣಂಗಳ ಸೇವೆಗೆ 1 ಜಗವನುದ್ಧರಿಸಿದ ಸುಂದರ ನಿನ್ನಯ ಮೊಗವನು ನೋಡುತ ಸಂಭ್ರಮದಿ ಬಗೆ ಬಗೆ ಹೈಮವಸ್ತ್ರಗಳನು ಧರಿಸುತ ನಗವೃಂದವು ಕಾದಿರುವುದು ದೇವ 2 ತರುಲತೆಗಳು ಕಾದಿರುವುದು ಪೂಮಳೆ ಗರೆಯಲು ನಿನ್ನಯ ಶಿರದಲ್ಲಿ ಪರಮಹಂಸರುಗಳು ಕರದಲಿ ಜಪಮಣಿ ಧರಿಸಿ ಜಪಿಸುವರೊ ಕರುಣಾ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ಪ ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ಅ.ಪ. ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ 1 ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ ಮನದೊಳು ಜಾಂಬುವಂತನ ಪರಿಪಾಲಾ ವಿ- ಶ್ವಂಭರಂಬರಗ್ಗಣಿಯ ಪಡೆದ ವೃ- ತ್ತುಂಬರೇಶಾಂಬುಧಿ ಶಾಯಿ 2 ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಾಳೆ ಹೆಗ್ಗಾಳೆ ತಮ್ಮಟಿ ನಿ- ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ ಸೂಳೈಸುತಲಿರೆ ಭಾಗವತರು ಸಂ ಮೇಳದಿ ಕುಣಿದೊಲಿದಾಡೆ ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ ಢಾಲುಗಳು ಒಪ್ಪಿರಲು3 ಹಂಸವಾಹನ ಕ್ರತುಧ್ವಂಸಿ ಸುಮನಸೋ ತ್ತಂಸ ಕೃಶಾನು ಪಾಪಿಗಳ ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ ಕೌಂಶಿಕಾಪತಿಯು ಧನವ ಅಂಶಮಾಲಿ ಸೋಮಕಂಶಿಕಮುನಿ ಪರಮ ಹಂಸರು ಅಲ್ಲಲ್ಲಿ ನಿಂದು ಸಂಶಯ ಮಾಡದೆ ಸಮ್ಮೊಗರಾಗಿಹರು ಕಂಸಾರಿ ತ್ರಿಗುಣಾತೀಶ 4 ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು 5 ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆ ಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಅಂದವಾಗಿಹುದೇನೊ ದೇವ6 ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾ- ರಥಾಂಗ ಪಾಣಿ ವಿಹಂಗ ಪ್ಲ- ಸಂಗೀತ ಲೋಲ ಗೋಪಾಂಗನೆಯರ ಅಂತ- ರಂಗ ಸಂತಾಪ ವಿದೂರ 7 ತಡಮಾಡಲಾಗದೊ ಪೊಡವೀಶ ನೀನಿಂದು ತಡೆವರಿನ್ನಾರೈಯ ವಡೆಯ ವೇದವೇದ್ಯ ಕಡೆಗಣ್ಣಿನಿಂದ ನೋಡಿದಲೆ ನಡೆವುದು ನುಡಿವುದು ಅಡಿಗಡಿಗೆ ನೀನು ಬಿಡದೆ ಒಳಗೆ ಹೊರಗಿದ್ದು ಸಡಗರ ದೈವವೆ ನುಡಿಯ ಲಾಲಿಸುವುದು ವಡನೊಡನೆ ಪಾಲಿಸುತ್ತ 8 ಹತ್ತವತಾರದ ಹರಿಯೆ ಘನಸಿರಿಯೆ ಮತ್ತೊಬ್ಬರನು ಹೀಗೆ ಕರೆಯೆ ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ- ನ್ಹತ್ತಿಲಿ ಆಡುವ ಮರಿಯೆ ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ ಅತ್ತಿತ್ತ ಪೋಗದೆ ಇತ್ತ ಬಾರೈಯ ಎ- ನ್ಹತ್ತಿಲಿ ವೆಂಕಟದೊರೆಯ 9
--------------
ವಿಜಯದಾಸ
ವೇಂಕಟೇಶನೆ ಎನ್ನಾ ಪಾಲಿಪುದೊ ಹರಣ ಪ ಪಂಕಜೋದ್ಭವ ಹರ ವಂದ್ಯ ಪರಾತ್ಪರ ನಿಖಿಲಾಗಮೈಕವಿಜ್ಞೇಯ ಲೋಕೋದ್ಧಾರ ಅ.ಪ ವತ್ಸರ ಬ- ಹುಧಾನ್ಯ ಸಂದ ಶುಕ್ಲ ದ್ವಿತೀಯ ಸಂಧ್ಯಾಸವನ ಬಂದು ಕೀರ್ತನ ಸೇವಾ- ನಂತರದಿ ಎನ್ನಾ ಮಂದಿರದೊಳು ಸುಪ್ತಾವಸ್ಥೆ ಯಿಂದಿರಲಾಗ ಅಂದು ಕಡೆಯ ಯಾ- ಮದಿ ತೈಜಸನೆ ನೀ ಹಂಸರಿಂದೆನ್ನ ಮನಸಂಶಯ ಹರಿಸಿದೆ1 ಅರುಣೋದಯಲೆದ್ದು ಮುದದಿ ಕರಣಶುಧ್ದನಾಗಿ ತ್ವರಿತದಿ ಸ್ವಪನದ ವಿ- ವರಕಾಗಿ ಹರುಷದಿ ಹರಿಪೂಜಾಕಾಲದಿ ಅರುಹಿದ ಮರುತ ಮೂರುತಿಯಾ ಉರುತರ ಚರಿತೆಯ ನಿರುತಪೊಗಳಲಾಯತವಿತ್ತ ತಿರುಪತಿಶೈಲಾಧಿಪ ಮಮಕುಲಸ್ವಾಮಿ2 ಹರಿಗುರುಸೇವೆಯನು ಸರ್ವಸದ್ಯೋಗ್ಯಸಾಧನವನ್ನು ಪರಮಹಂಸರು ಇತ್ತವೇಂಕಟೇಶಾಂಕಿತ ಮೂರುತಿಯ ನುತಿಪಾ ನಿಜ ಹರಿಭಕುತರ ಚರಣಕಮಲಬಂಡುಣಿಯೆನಿಸಿ ಇವನನಿರುತ ರಕ್ಷಿಸೋ ಉರಗಾದ್ರಿವಾಸವಿಠಲಾ 3
--------------
ಉರಗಾದ್ರಿವಾಸವಿಠಲದಾಸರು
ಉಪ್ಪವಡಿಸಯ್ಯ ಕೃಷ್ಣ ಪ.ಉಪ್ಪವಡಿಸೈ ಬೊಮ್ಮನಪ್ಪ ಭುವನಾವಳಿಯಸ್ವಪ್ಪನಾದಿ ತ್ರಯವನಪ್ಪಿ ಪಾಲ್ಗಡಲ ಮಗಳಪ್ಪಿ ಅಹಿವರನ ಸುಪ್ಪತ್ತಿಗೆಲಿ ಒರಗಿಪ್ಪತಿಮ್ಮಪ್ಪವ್ರಜದಿ ದಯದಿಅ.ಪ.ಅರುಣಮೂಡಣವೇರೆ ತ್ವರಿತ ತಮಕುಲ ಜಾರೆಹರಿದವಭ್ರದ ತಾರೆ ತರಣಿಕರ ಬಳಿ ಸಾರೆಸರಸಿಜವಿಕಸತೋರೆ ಮರುತ ಪರಿಮಳ ಬೀರೆ ನೆರೆದುಹರುಷ ದಿವಿಗಣ ಬೀರೆ ಮೊರೆಯುತಿವೆ ಸುರಭೇರೆಪರಮಹಂಸರು ಮೇರೆ ಮರೆದು ಸ್ಮರಿಸುತಲೈದಾರೆಸರ್ವವೇದ ಘೋಷ ಹರಿಪರವೆನುತಲೈದಾರೆ ಕರುಣದಲಿವಸುಧ್ಯೆರೆದಕಾಷ್ಠಗಂಧಕುಸುಮಸರ ತಂದಿಹಳುಬಿಸಜಲೋಚನ ನಿಮ್ಮ ಸೊಸೆ ವಾಣಿ ಭಾರತಿಯುಲ್ಲಸದಿ ಪೊಂಭಾಂಡದಲಿ ಬಿಸಿನೀರು ತುಂಬಿಹರುಪಶುಪಸುಸುಪರ್ಣವಸನಉರಗೇಶ ರತುನನಾಸನಮಾಲ್ಯಸುರಪತಿಕಲಶ ವಹಿಸಿ ವರುಣಸ್ಮರತಿಲಕಹಸನ ಮಾಡುವ ಪಾವುಗೆಶಶಿಧರಿಸಿ ನಿಂದ ಸಂತಸದಿಸ್ವರ್ಧುನಿಯು ಗೋದೆ ಗೋವರ್ಧಿನಿಯು ಗಾತ್ರೆಅಜನರ್ಧಾಂಗಿ ಸರಸ್ವತಿ ಶ್ರೀವರ್ಧಿನಿಯು ಕಾವೇರಿನಿರ್ದೋಷಿ ಸರಯು ತುಂಗಭದ್ರೆ ಕಾಳಿಂದಿ ನರ್ಮದ್ಯೆಮರ್ದಿತಘೌಘೆಯು ಕುಮುದ್ವತಿ ವಂಜರೆ ಭೀಮೆನಿರ್ಧೂತಕಲಿಮಲಕಪರ್ದಿನಿಯು ತಾಮ್ರಪರ್ಣಿಊಧ್ರ್ವಗತಿಪ್ರದ ನದಿ ಬಂದಿರ್ದವಿದೆ ತೀರ್ಥ ಕ್ರಮಕಿನ್ನರರು ಸುರನಾಯಕ ಮನ್ನೆಯರು ಸಲೆ ದೇವಗನ್ನೆಯರುಕಿಂಪುರುಷಪನ್ನಗರು ವಿದ್ಯಾಧರನಿಕರ ತುಂಬುರರು ನಿನ್ನಗುಣಕೀರ್ತನೆಯ ಮಾರ್ಗೋನ್ನತದಚೆನ್ನ ಭೂಪಾಳಿ ದೇವ ಧನಶ್ರೀ ದೇಶಾಕ್ಷಿಸನ್ನುತವಸಂತ ಮಲಹ ನವೀನ ಮಾಳ್ಪ ಶ್ರೀಘನ್ನ ಸ್ವನಾಮಂಗಳನು ಪಾಡುವರಿದಕೋ ಧನ್ಯ ಸಂಗೀತಲೋಲ4ಸುರಮುನಿ ಭೃಗು ವಸಿಷ್ಠ ನರಪಋಷಿ ಸನಕಾದ್ಯಮರೀಚ್ಯತ್ರಿ ಪುಲಸ್ತ್ಯ ಆಂಗಿರ ಚ್ಯವನ ಸೌಭರಿಯು ಭಾರಧ್ವಾಜಗಸ್ತ್ಯ ಪರಾಶರ ಕಶ್ಯಪ ಜಮದಗ್ನಿ ಗಾಗ್ರ್ಯಮಾರ್ಕಂಡೇಯ ಬಕದಾಲ್ಭ್ಯ ಕರಂಧಮೋದ್ಧಾಲಕನುವರದಾಂಕ ಜಹ್ನುಮುನಿ ವರ್ಣಿಕುಲದಗಣಿತರುನೆರೆನೆರೆದುತುತಿಸಿಸುಖಭರಿತರಾಗುತ ನಿಮ್ಮ ಚರಣದೂಳಿಗಕ್ಷಿತಿಪರೊಳು ಮರುತ ಪ್ರಿಯವ್ರತ ಪ್ರಾಚೀನ ಬರ್ಹಿಪ್ರಥು ಗಯ ಧ್ರುವಿಕ್ಷ್ವಾಕು ದಿತಿಜಸುತ ಮಾಂಧಾತಪ್ರತಿಸಗರ ನಹುಷಬಲಿಶತಧನ್ವಿದೇಹಿ ದಶರಥಶ್ರುತಕೀರ್ತಿ ಶಿಬಿ ದೇವವ್ರತ ಅಂಬರೀಷನು ಭರತದ್ವಯ ಪುರೂರವ ಯಯಾತಿ ರಂತಿದೇವ ಪರೀಕ್ಷಿತನು ಮುಚುಕುಂದ ನಳ ಶತಪುಣ್ಯಶ್ಲೋಕ ನೃಪರತಿನಂದಗೋಕುಲದ ಗೋವಿಂದಗಾರ್ತರು ನಿದ್ರೆಹೊಂದೆದ್ದಾನಂದದಿಂ ದೀಪಗಳ ಪ್ರಜ್ವಲಿಸಿಮಿಂದು ಬ್ರಾಹ್ಮಿಯಲುಟ್ಟು ಪೊಂದೊಡಿಗೆ ಮಣಿದೊಡಿಗೆವಂದಿಸುತ ಗೃಹದೇವರ ದಧಿಮಥಿಸಿ ಬೆಣ್ಣೆಯಇಂದಿರೆರಮಣ ಮೆಲ್ಲಲೆಂದು ತೆಗೆದಿಡಲರುಹಬಂದಿಹರು ಗೋವಳರು ಮುಂದೆದ್ದು ತಮ್ಮ ಏಳೆಂದುಶ್ರೀಪತಿಯೆ ಬ್ರಹ್ಮಾದಿ ತಾಪಸರ ಪ್ರಭು ಏಳುದ್ವೀಪ ದ್ವೀಪಾಂತರದ ಭೂಪರರಸನೆ ಏಳುಕಾಪುರುಷ ಕಾಳ ಕುಮುದಾಪಹರಹರಿಏಳು ಕೋಪಹೇಪಾರ್ಥಸಖಸುಪ್ರತಾಪ ಜಗ ಎರಡೇಳುವ್ಯಾಪಕನೆ ವಿಬುಧಕುಲಸ್ಥಾಪಕನೆ ಮೂರೇಳುಕೂಪಕುಲನಾಶಕ ಚಮೂಪ ಸಂಹರ ಏಳು ದ್ರೌಪದೀ ಬಂಧು ಏಳು 8ಶ್ರುತಿಯ ತರಲೇಳು ಭೂಭೃತವ ಹೊರಲೇಳುಶುಭಧೃತಿಯನಾಳೇಳು ದುರ್ಮತಿಯ ಸೀಳೇಳಮರತತಿಯ ಸಲಹೇಳು ನಿಜಪಿತನ ಕಾಯೇಳು ಮಹಿಸುತೆಗೆಸತಿಯರಾಳೇಳು ಪತಿವ್ರತೆರ ಗೆಲಲೇಳುಕಲಿಖತಿಯ ಕಳಿಯೇಳು ಪಂಡಿತರುಳುಹಲೇಳು ನಮಗತಿಶಯ ಪ್ರಸನ್ನವೆಂಕಟಪತಿ ಕೃಷ್ಣ ಸದ್ಗತಿದಾತ ತಾತಯೇಳೈ 9
--------------
ಪ್ರಸನ್ನವೆಂಕಟದಾಸರು