ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನ ಸಖೀಕೇಳೆ ಜ್ಞಾನಿಗಳಾರಾಧಿಸುವಾ | ಶ್ರೀನಿವಾಸನಾ ತಂದುತೋರೆ ತನುವಿನೋಳು ಪ ಹಲವು ಸಾದಿನದಿಂದ ಬಳಲಿ ಹಂಬಲಿಸಿದೆ | ಜಲ ಜಾಕ್ಷ ಮೈಯ್ಯ ದೋರನೇ 1 ಕಣ್ಣಿಗೆ ಕಣ್ಣಾಗದನಕಾ ಬಣ್ಣ ಬಣ್ಣದ ಚಿತ್ಸುಖಾ | ಕನ್ನಿಕಾ ರನ್ನಳೆ ತಂದು ತೋರೇ 2 ಸೋಹ್ಯ ಸೊನ್ನಿಯ ದೋರಿಸಿ ಬಾಹ್ಯರಂಗ ಮರೆಸಿ | ಸಹ ಜಾನಂದದ ಕೂಡಿಸೇ 3 ಗುರು ಮಹಿಪತಿ ಸ್ವಾಮಿ ಸ್ಮರಿಸುವರಂತರ್ಯಾಮಿ | ನೆರೆದು ತಾನೇ ತಾನಾದನೇ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿದೆ ನಿನ್ನ ನೀರಜಪಾದ | ಇಂಬಿನಲ್ಲಿಟ್ಟು ಸಲಹೊ ಪ್ರಸಾದ ಪ ಅಂಬರೀಷನ ಶಾಪ ಹಿಂಗಿಸಿ ಕಳೆದ ದ- | ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ ಅ.ಪ ಉಗ್ರನ್ನ ಖಳವಂಚಿಸಿ ತನ್ನ ಕ- | ರಾಗ್ರವಾ ಶಿರದಲ್ಲಿ ಇಡಬರಲು || ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ | ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು1 ಕಾಲದೂತರು ಅಜಾಮಿಳನೆಳೆಯಲು | ನಾಲಿಗೆಯಿಂದ ನಾರಗÀನೆನ್ನಲು || ಆಲಸ್ಯ ಮಾಡದೆ ನಿನ್ನ ದೂತರನಟ್ಟಿ | ಓಲಗ ವೈಕುಂಠವಿತ್ತ ಭಾಂದವನೆಂದು 2 ಭೂತಳದೊಳು ನಿನ್ನನು ಪೋಲುವ | ದಾತರ ನಾನೆಲ್ಲಿ ಕಾಣೆ ಶ್ವೇತವಾಹನ || ದಾತ | ವಿಜಯವಿಠ್ಠಲನಹುದೆಂದು ದೃಢವಾಗಿ 3
--------------
ವಿಜಯದಾಸ
ನಂಬಿದೆ ನಿನ್ನ ಪಾದವ ಕಾಣಬೇಕೆಂದು ಹಂಬಲಿಸಿದೆ ಮಾಧವ ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ ಕಮಲಾಂಬಕ ರಂಗಾ ಪ ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ ಇಂದಿರಾ ಮನೋವಿಲಾಸ ವೃಂದಾರಕರ ನಿಜಕೋಶಾ ಮಂದರಧರ ವಸುಂಧರಪತಿ ಪುರಂದರ ವಂದಿತ ಸುಂದರಾಂಗ ಕಂಬು ಇಂದೀಗ ತೊಂದರೆಕಿಡದಿರು 1 ತಂದಿತಾಯಿಗಳವರಾರೊ ತಾವಳಿದು ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು ಪೊಂದದೆನಲೊ ಇಳಿಜಾರು ಎಂದೆಂದಿಗಿದರ ಗಂಧದೊಳಗೆ ನಾ ಬಂದು ಬಳಲಿ ಸಂ ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ ತಂದೆ ತಾಯಿ ಸರ್ವಂದವು ನೀನೆ 2 ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ ಕುಂದಿದೆ ಎಲ್ಲ ಕಾವಿಲಿ ಬೆಂದೆನೋ ಬಲು ಕೋವಿಲಿ ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ ಇಂದು ಚರಣರವಿಂದವ ತೋರಿಸುವ ಬಂಧು ವಿಜಯವಿಠ್ಠಲೆಂದಹುದೆಂದು 3
--------------
ವಿಜಯದಾಸ