ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೈ ಸೈ ಶರಣಾಗತ ವತ್ಸಲ ನೀ ನೋಯಿಸಬಂದಸುರೆಗೆ ನಿರ್ಮಲ ಸುಖವಿತ್ತಿ ಪ. ಬೆನ್ನಿನ ಮೇಲೆ ಬೆಟ್ಟವ ಪೊರಿಸಿದ ಸುರ- ರನ್ನು ಕಾಪಾಡಿ ಸುಧೆಯನುಣಿಸಿದಿ ನೀ 1 ಹಂಜಿಯಂದದಿ ತಲೆ ನರತಿಹ ಬ್ಯಾಡತಿ ನಿರಂಜನ ಮೂರುತಿ2 ಅಟ್ಟಿ ಬರುತ ನಿನ್ನ ಕಟ್ಟಿದ ಗೋಪೆಗೆ ಪೊಟ್ಟೆಯೊಳಿಹ ಸರ್ವ ಲೋಕವ ತೋರಿದಿ 3 ಅಗ್ರಜ ಭಾರ್ಯಳನುಳುಪಿ ಕೊಲ್ಲಿಸಿದಂಥ ಸುಗ್ರೀವನ ಕೂಡೆ ಸಖ್ಯವ ಬೆಳಸಿದಿ 4 ಪಾತಕಿ ಪತಿಯಾದ- ಜಾಮಿಳನನು ತನ್ನ ನಿಲಯಕೆ ಕರೆಸಿದಿ 5 ವಿಧ ವಿಧದನ್ನವ ಕುರುಪತಿಯಲಿ ಬಿಟ್ಟು ಕುಡುತೆ ಪಾಲುಂಡುವ 6 ಕಂಡವರನು ಕೊಂದಿಹ ಕ್ರೂರನ ಮುನಿ ಮಂಡಲದಲಿ ಪ್ರಚಂಡನೆಂದೆನಿಸಿದಿ 7 ಕುಂತಿಯ ಕುವರನ ಕುದುರೆಯ ನಡೆಸುತ ಅಂತರಂಗ ಸಖ್ಯವ ಬೆಳೆಸಿದಿ ನೀ 8 ಖುಲ್ಲ ಚೇಷ್ಟೆಯ ಮಾಡಿ ಕಲ್ಲಾಗಿ ಬಿದ್ದ ಅ- ಹಲ್ಯೆ ಪತಿವ್ರತೆ ಎಂಬ ಬಿರುದ ಕೊಟ್ಟ್ಟಿ 9 ತಂದೆಯ ಕೊಲ್ಲಬೇಕೆಂದು ಸನ್ನಹಗೈದ ಕಂದನ ಸ್ವಾಂಕದೊಳಂದು ಕುಳ್ಳಿರಿಸಿದಿ 10 ಎಷ್ಟೊ ಪಾಪಗಳಟ್ಟುಳಿ ಬಿಡಿಸಿರೆ ಭ್ರಷ್ಟನೆಂದೆನ್ನೊಳು ನಿಷ್ಠುರವ್ಯಾತಕೆ 11 ಪನ್ನಗ ಗಿರಿವರ 12
--------------
ತುಪಾಕಿ ವೆಂಕಟರಮಣಾಚಾರ್ಯ
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು
ಹರಿ ನಿನ್ನೊಲುಮೆಯು ಆಗುವತನಕ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅರಿತು ಸುಮ್ಮಗಿರುವುದೆ ಲೇಸು ಪ.ಮರಳಿ ಮರಳಿ ತಾ ಪಡೆಯದ ಭಾಗ್ಯವು |ಮರುಗಿದರೆ - ತನಗಾದೀತೆ ? ಅಪದೂರು ಬರುವ ನಂಬಿಗೆಯನು ಕೊಟ್ಟರೆ |ದುರ್ಜನ ಬರುವುದು ತಪ್ಪೀತೆ ||ದೂರ ನಿಂತು ಮೊರೆಯಿಟ್ಟು ಕೂಗಿದರೆ |ಚೋರರಿಗೆ ದಯ ಪುಟ್ಟೀತೆ |ಜಾರನಾರಿ ತಾ ಪತಿವ್ರತೆ ಎನ್ನಲು |ಜಾಣರಿಗೆ - ನಿಜ ತೋರೀತೆ ||ಊರ ಬಿಟ್ಟು ಬೇರೂರಿಗೆ ಹೋದರೆ |ಪ್ರಾರಬ್ಧವು ಬೇರಾದೀತೆ 1ಪಾಟುಪಡುವುದು ಪಣೆಯಲ್ಲಿರಲು |ಪಟ್ಟಮಂಚ ತನಗಾದೀತೆ ||ಹೊಟ್ಟೆಯಲ್ಲಿ ಸುತರಿಲ್ಲೆಂದು ಹೊರಳಲು |ಹುಟ್ಟು ಬಂಜೆಗೆ ಮಕ್ಕಳಾದೀತೆ ?||ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |ಬೇಟೆಗಾರಗೆ ದಯ ಪುಟ್ಟೀತೆ ||ಕೆಟ್ಟ ಹಾವು ತಾ ಕಚ್ಚಿದ ವಿಷವದು |ಬಟ್ಟೆಯಲೊರಸಲು ಹೋದೀತೆ 2ಧನಿಕನ ಕಂಡು ಪಾಡಿ ಪೊಗಳಿದರೆ |ದಾರಿದ್ರ್ಯವು ತಾ ಹಿಂಗೀತೆ ||ದಿನದಿನ ನೊಸಲೊಳು ನಾಮವನಿಟ್ಟರೆ |ದೇವರಿಗೆ ತೃಪ್ತಿಯಾದೀತೆ ||ಎಣಿಸಿಕೊಂಡು ಎಳ ಹಂಜಿಯ ನೂತರೆ |ಅಣೆಯದ ಸಾಲವು ತೀರೀತೆ |ಅನುದಿನದಲಿ ಶ್ರೀ ಪುರಂದರವಿಠಲನ |ನೆನೆಯದಿದ್ದರೆಭವಹಿಂಗೀತೆ3
--------------
ಪುರಂದರದಾಸರು