ಹಯವದನನ ಪಾದದ್ವಯವ ನೆನೆಯದವ
ಜಯಿಸುವನೆಂತೋ ಸಂಸ್ಮøತಿ ಫಲವ ಪ.
ಕಾಗೆಯಂತಾದರು ಬಿದ್ದರು ಎದ್ದರು
ಯೋಗದೊಳಿದ್ದರು ಬಿದ್ದವನೆ
ಆಗಮವನು ತಂದು ಅಜನಿಗೆ ಬೋಧಿಸಿ-
ದಾ ಗುಣನಿಧಿಯನರ್ಚಿಸದವನು 1
ಬೂದಿಗೆ ವಾದಿಸಿ ಮಣ್ಣಮೇಲುಣ್ಣಲು
ಸಾಧಿಪುದೇನವ ಶ್ರವ ಶ್ರಾವಕ ವ್ರತವ
ಬೂದಿಯ ಮಾಡಿದ ಮಣ್ಣಿನ ಗಂಡನ
ಹಾದಿಯನೊಲ್ಲದ ಹಂಚುನರ2
ಉಟ್ಟದ ಬಿಟ್ಟು ತನ್ನಟ್ಟಲು ಬಟ್ಟೆಯ
ಕಷ್ಟ ತಾ ಬಟ್ಟು ಕಂಗೆಟ್ಟನೈಸೆ
ಸೃಷ್ಟಿಸಿ ಸಲಹುವ ಹಯವದನನ ಪರಿ-
ತುಷ್ಟಿಗೆ ಪುಟ್ಟದ ದುಷ್ಟಪಶು3