ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಭಕ್ತಪೋಷಣಭೂಷ ಮನ್ಮಂದಿರವಾಸ ಶ್ರೀನಿವಾಸ ಪಾದಾತನ ಜನರನು ಸಾನುರಾಗದೊಳ್ಮಾನಿಸಿ ಸಲಹುವ ಪ. ಬಾಲತ್ವದಿಂದ ಬಹುವಿಧವಾದ ಭಕ್ತಿಯನಿತ್ತು ಲಾಲಿಸಿ ಪೊರೆದ ಪೂಜ್ಯಪಾದ ಈ ಮಧ್ಯದೊಳಾದ ಧಾಳಿಗಳನು ನಿರ್ಮೂಲಗೈದ ಕರು- ಣಾಳು ರಾಜ ನಿನ್ನಾಳಾಗಿಹೆನು 1 ಪಂಚಭೌತಿಕವಾದ ತನುವಿಂದ ಆಗುವ ತಪ್ಪ ಕಿಂಚಿನ ವರದ ನೀ ದಯದಿಂದ ಕ್ಷಮಿಸೈ ಗೋವಿಂದ ವಂಚಿಸಿ ದಾನವದಿತಿಜರ ಸುರರಿಗೆ ಹಂಚಿದಿ ಸುಧೆಯನು ಶುಭಕರದಿಂದ 2 ಕಮಲಾಬ್ಜಭವರುದ್ರೇಂದ್ರಾದಿಗಳು ಪಾದಯುಗ ಕಲ್ಪ ದ್ರುಮ ನಿನ್ನ ನೆಳಲನಾಶ್ರೈಸಿಹರು ಕರುಣಾರಸದೋರು ನಮಿಸುವೆ ಎಂಬೀ ಮಮತೆಯಿಂದ ಎ- ನ್ನಮಿತಪರಾಧವ ಕ್ಷಮಿಸುವ ಹರಿಯೆ 3 ಇಂದ್ರಿಯಂಗಳ ಭಾವನೆ ಬಹುಘೋರ ಅದರಲ್ಲಿ ಮುಳುಗಿದ- ರಿಂದಿರಾಧವ ನೀನೆ ಬಹುದೂರ ಆ ರೀತಿಯ ಭಾರ ಹೊಂದಿದ ದಾಸರಿಗೆಂದು ತಾರಾ- ಮಂದರಾದ್ರಿಧರಾ ಮಾಧವಧೀರ 4 ಚರಣ ಸಂಸ್ಮರಣೆ ಮಾತ್ರ ಬೇಕು ಇದರಿಂದ ಸರ್ವ ಪುರುಷಾರ್ಥ ಲಬ್ಧಿಗಿನ್ನು ಸಾಕು ಇರುವುದೆ ಈ ನಾಕು ಉರಗ ಗಿರೀಂದ್ರನ ಶಿರದಲಿ ಮಂಡಿಸಿ ಮೆರೆವ ಸುಖಾಂಬುಧಿ ಸುರವರ ನಾಥ5
--------------
ತುಪಾಕಿ ವೆಂಕಟರಮಣಾಚಾರ್ಯ