(ಈ) ತಾತ್ವಿಕ ಕೃತಿಗಳು
ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಪ
ರಾಮಾನುಜ ಬೆಳೆದ ಧರೆಯೊಳಗೆ ಅ.ಪ
ನಾರದ ಬಿತ್ತಿದ ನಾರಾಯಣ ಬೀಜಕೆ
ಧೀರಾಂಬರೀಷನು ಗೊಬ್ಬರವಾದ ಕು-
ಮಾರ ಪ್ರಹ್ಲಾದನು ನೀರಾಗೆರೆದ
ಆ ರುಕುಮಾಂಗದ ಗಾಳಿಯಾದ1
ನಾರಾಯಣನೆಂಬ ಬೀಜಮಂತ್ರವು ಕು-
ವರ ಧ್ರುವನ ಕಾವಲಿನಲ್ಲಿ
ಸರಸರ ಬೆಳೆಯಿತು ಆಳುವಾರರು ಭೂ
ಸುರ ಭಾಗವತರುಗಳಲಿ 2
ರಮಾನುಜನಿದರ ಒಕ್ಕಣೆಮಾಡಿ
ಸಮಾನತೆಯಿಂದ ಹಂಚಿದನು
ಶ್ರಿಮಣಿಯಲ್ಲಿ ತುಂಬಿದನು
ಸಮಾನ ವೇದವೆನಿಸಿದನು 3
ಹಬ್ಬಿತು ಹರಡಿತು ಧರೆಯೆಲ್ಲ
ಉಬ್ಬಿತು ಉಲಿಯಿತು ಗಿರಿಯೆಲ್ಲ
ಅಬ್ಬಬ್ಬ ಜಾಜಿಪುರೀಶ ಕೇಶವನಾಮವು
ಹಬ್ಬವಾಯಿತು ನಮಗೆಲ್ಲ 4