ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗಿನ್ಯಾತರ ಹಂಗೇನು | ಘನ ಗುರು ತಾನಾದ ಶ್ರಯಧೇನು ಪ ಸುರಲೋಕ ಪದವಿಯ ಸುಖದಿಚ್ಛೆಯಾತಕ | ಪರಗತಿ ದಾಯಕ ದೊರಕಿರಲಿಕ್ಕೆ 1 ರಿದ್ದಿ ಶಿದ್ದಿಗಳೆಂಬ ಮಾತಿನ ಗೊಡವಿಲ್ಲಾ | ಪಾದ ಕಮಲಾ 2 ಹಂಬಲಿಸೆನು ಯೋಗ ಭೋಗ ಮುಕ್ತಿಯ ನಾಲಕು | ಅಂಬುಜಾಕ್ಷನ ಸೇವೆಲಿರುವುದೇ ಸಾಕು 3 ತಂದೆ ಮಹೀಪತಿ ಪ್ರಭು ದಯದಿಂದಲಿ | ಕಂದಗ ವಿಶ್ರಾಂತಿ ಇದಿರಿಟ್ಟಿರಲಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರುಹಾಳುಬಾವಿಯ ಪೋಲ್ವ ಭವದಿ ಬಳಲುವ ಜೀವರು ಪ. ಮೇಲೆ ಬಹ ಕಾರ್ಯಜಾಲ ಹಂಬಲಿಸುವಖೂಳ ಜಲಜದ ಕೋಳದೊಳು ಹಲುಬುವಳಿಯಂತೆಕಾಲಪಾಶಕ್ಕೆ ಸಿಕ್ಕಿ ಪುಸಿಯಾಗದೆ ಉಳಿಯಫಾಲದ ಬರಹವ ಮೀರಿ ನಡೆವ ಮನುಜನು ದಾವ 1 ತೈಲ ವಿಕ್ರಯದ ಶೆಟ್ಟಿ ಮೇಲೆ ಬಹ ಲಾಭಗಳಸಾಲ ಯೋಚಿಸಿ ತನ್ನ ಮೂಲಧನವ ನೀಗಿದ ಗಡಬಾಳುವ ಸುತನ ಬಯಸಿ ಮದುವೆಯ ಮಾಡಿದ ಚೆಲ್ವಬಾಲಕಿ ಬದುಕದೆ ಗರ್ಭದೊರಸೆ ಬಿದ್ದುಹೋಗಳೆ2 ಖೂಳಕೊಬ್ಬಿನಲ್ಲುಂಡು ಶಾಲ್ಯಾನ್ನ ದಕ್ಕದಿರೆನಾಳೆಬಹ ಸಂಕಟವನರಿಯದ ಮನುಜನಲ್ಲವೆತಾಳದಮರನÀ ನೆಳಲಿಗೆಂದು ಬಂದು ಕುಳಿತರೆಬೋಳುತಲೆಯಲಿ ಅದರ ಫಲ ಬಿದ್ದು ಸಾಯನೆÉ 3 ಸೂಳೆಯರ ಮೆಚ್ಚಿದವ ಅವರು ಕೊಟ್ಟ ಮದ್ದಿನಿಂದಬೀಳ್ವುದೀ ತನುವೆಂದು ಅಕಟಕಟ ಬಲ್ಲನೆಮಾಳಿಗೆಯ ತೊಲೆ ಮುರಿದು ಮರಣ ಬಂದೀತೆಂದುಲೋಲಾಕ್ಷಿಯರ ಸಂಗಡ ಮಲಗಿದವ ಬಲ್ಲನೆ 4 ಶೂಲಧರ ಖಳನಿಗೆ ವರವ ಕೊಟ್ಟು ಕಂಗೆಟ್ಟುಕೋಲುತಾಗಿದ ಹರಿಣನಂತೆ ಹರಿಯ ಸಾರ್ದಗಡಆಲಸ್ಯಭಯ ಭಕ್ತಿಭರಿತ ನರರೇನ ಬಲ್ಲರುಕೇಳೆಯಾನಋತೇ ಯೆಂಬ ಶ್ರುತಿಯ ಸಂಭ್ರಮವ 5 ಬೊಮ್ಮ ತಾಕಾಲೂರಿ ತಪಗೈದು ಜಗವ ಮಾಡಿದ ಗಡ 6 ಶ್ರೀಲೋಲ ಹಯವದನ ಸರ್ವಸ್ವತಂತ್ರ ತನ್ನತೋಳ ಬಲದಿಂದೊಬ್ಬನೇ ತೊಡಗಿದ ಕಾರ್ಯ ಈಡೇರಿಸುವಈಲೋಕವೆಲ್ಲವಳಿಯಲು ಆಲದೆಲೆಯ ಮೇಲೆಲೀಲೆಯಿಂ ಪವಡಿಸಿ ಸೃಜಿಸಿದಗೆ ಪರರ ಹಂಗೇ 7
--------------
ವಾದಿರಾಜ
ಮಾವಿನಕೆರೆ 4 ನೀನಿಲ್ಲದೆನಗಾರೋ ಮಾಂಗಿರಿಯ ರಂಗ ಪ ಮಾನಾಪಮಾನಕ್ಕೆ ಹೊಣೆಗಾರ ರಂಗಾ ಅ.ಪ ಗಿರಿಯೊಳಗೆ ವಾಸಿಸುವೆ ನರರ ಗೋಜೆನಗೇಕೆ ನರರ ನೇತ್ರಂಗಳಿಗೆ ಹರನಂತೆ ಕಾಂಬೇ ಧರೆಯೊಳಗೆ ವಾಸಿಸುವರಾರ ಹಂಗೆನಗಿಲ್ಲ ಕೊರತೆಯೇ ಎನಗಿಲ್ಲವೆಂದರಿಯಬೇಡಾ 1 ಗಿಯಾದರೇನಯ್ಯ ಸುರಲೋಕಕದು ಪೂಜ್ಯ ಹರನಾದಡೇನಯ್ಯ ಹರಗೆ ಪಿತನೀನು ನರರ ಹಂಗೇಕಿಲ್ಲ ಗಿರಿಯನೇರುವ ಭಕ್ತ [ಜ] ನರಅಂಜಿಟ್ಟಾ ಹರಕೆಗಳು ಸಾಲವೇ ರಂಗ 2 ಶಾಮಜೋಯಿಸ ನಿನ್ನ ಸೋಮಧರನೆಂಬರಿಗೆ ವಿಭೂತಿ ಅಕ್ಷತೆಯ ನೀಡುವಾ ಸೋಮಸುಂದರ ನಮ್ಮ ಮಾಂಗಿರಿಯ ರಂಗಯ್ಯ ಸ್ತೋಮ ಜನಗಳಿಗದು ತಿರುಮಣಿಯೂ ಜೀಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾರ ಭಯವೇನಿಹುದು ಶ್ರೀವೇಂಕಟೇಶ ನೀನೆ ದಯವಾದ ಮೇಲ್ಯಾರ ಹಂಗೇನು ಪ ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು ಅಡವಿಯೊಳು ಮೃಗಬಂದು ತಡೆದರೇನು ತೊಡೆಯನೇರುವ ಮಗನ ಅಡವಿಗಟ್ಟಿದರೇನು ನೆಗಳು ಕಾಲ್ಪಿಡಿದರೇನು 1 ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು ಕಾಳ ರಾಕ್ಷಸ ಕೈಯ ಪಿಡಿದರೇನು ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು ಹಗೆ ತನಗೆ ವಿಷವಿಕ್ಕಲೇನು 2 ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು ರಾಗದೊಳು ಬಲವಂತ ಕರೆಯಲಾಗಿ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ ಆಗ ಬಿಡಿಸಿದವರಾರು ನಾಗಗಿರಿವಾಸ 3 ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು ಒಡೆಯ ರಕ್ಷಿಸುಯೆಂದು ನಡುಗುತಿರಲು ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ 4 ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು ಸಡಗರದ ಮಡದಿಯಳ ಮಾತ ಕೇಳಿ ಒಡೆಯ ನೀನೆಯೆಂದು ಕಡುತಪವನರ್ಚಿಸಲು ಉಡುಗಣಕೆ ಮೇಲಾದ ಪದವ ತೋರಿದೆಲಾ 5 ಮೃಗ ಜಲದ ಹೊಂಡದೊಳಗಾಡುತಿರೆ ಕಂಡು ಕಡು ರೋಷದಲಿ ಕಾಲ್ಪಿಡಿಯಲು ಪುಂಡರಿಕಾಕ್ಷನನು ಭಯಗೊಂಡು ಕರೆದರೆ ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು 6 ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ ಹೆಬ್ಬಾವು ಆತನನು ಮೈಸುತ್ತಲು ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ 7 ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ ಭರದಿಂದ ಕಂಬದೊಳು ಹೊರಟು ಬಂದು ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ ತರಳನನು ಕಾಯಿದವರಾರು ಶ್ರೀಹರಿಯೆ 8 ಉರಿಯ ಮನೆಯಂದರಿಯದರಸರೈವರ ಹೊಗಲು ಇರಿಸಿರ್ದ ಬಾಗಿಲೊಳು ಉರಿ ಮುಸುಕಲು ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು 9 ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು ತಂದೆ ಬರೆದಿಹ ಲಿಖಿತ ನಂದನನು ನೋಡಿ ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ ನಂದಳಿದ ಮಾಯವೇನೆಂದು ಹೇಳಯ್ಯ 10 ಕಾಯ ಭಯ ಹೊರತಾಗಿ ಮೀರಿದಾಪತ್ತಿನಲಿ ಕಡೆ ಸೇರಿಸೊ ಭೂರಮಣ ವರಾಹತಿಮ್ಮಪ್ಪ ಚರಣವನು ಕುಲಿಶ ನೀನಾಗು 11
--------------
ವರಹತಿಮ್ಮಪ್ಪ
ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು