ಮಾವಿನಕೆರೆ 4
ನೀನಿಲ್ಲದೆನಗಾರೋ ಮಾಂಗಿರಿಯ ರಂಗ ಪ
ಮಾನಾಪಮಾನಕ್ಕೆ ಹೊಣೆಗಾರ ರಂಗಾ ಅ.ಪ
ಗಿರಿಯೊಳಗೆ ವಾಸಿಸುವೆ ನರರ ಗೋಜೆನಗೇಕೆ
ನರರ ನೇತ್ರಂಗಳಿಗೆ ಹರನಂತೆ ಕಾಂಬೇ
ಧರೆಯೊಳಗೆ ವಾಸಿಸುವರಾರ ಹಂಗೆನಗಿಲ್ಲ
ಕೊರತೆಯೇ ಎನಗಿಲ್ಲವೆಂದರಿಯಬೇಡಾ 1
ಗಿಯಾದರೇನಯ್ಯ ಸುರಲೋಕಕದು ಪೂಜ್ಯ
ಹರನಾದಡೇನಯ್ಯ ಹರಗೆ ಪಿತನೀನು
ನರರ ಹಂಗೇಕಿಲ್ಲ ಗಿರಿಯನೇರುವ ಭಕ್ತ [ಜ]
ನರಅಂಜಿಟ್ಟಾ ಹರಕೆಗಳು ಸಾಲವೇ ರಂಗ 2
ಶಾಮಜೋಯಿಸ ನಿನ್ನ ಸೋಮಧರನೆಂಬರಿಗೆ
ವಿಭೂತಿ ಅಕ್ಷತೆಯ ನೀಡುವಾ
ಸೋಮಸುಂದರ ನಮ್ಮ ಮಾಂಗಿರಿಯ ರಂಗಯ್ಯ
ಸ್ತೋಮ ಜನಗಳಿಗದು ತಿರುಮಣಿಯೂ ಜೀಯ 3