ಸಾಮಾಜಿಕ
ಹಿಂಗಿಲ್ಲದವನಿಗೆ ವನವಾಸ ಪ
ಹಂಗುಳ್ಳವನಿಗೆ ಉಪವಾಸ ಅ.ಪ
ಕಳ್ಳಿಯ ಬೇಲಿಗೆ ನುಗ್ಗಬೇಡಣ್ಣ
ಸುಳ್ಳು ಹೇಳುವುದ ಸುಡಬೇಕಣ್ಣ 1
ನೇಮನಿಷ್ಠೆಗಳ ಸಡಿಲಿಸಬೇಡ
ರಾಮಧ್ಯಾನವ ಬಿಡಲೂಬೇಡ 2
ಹಾರುವ ಮನವನು ಹಿಡಿಯಬೇಕಣ್ಣ
ಶ್ರೀರಂಗನಾಥನ ಮರೆಯಬೇಡಣ್ಣ3
ಹಂಸ ತಾವರೆಗಳಂತಿರಬೇಕಣ್ಣ
ಕಂಸಾರಿಯ ಭಕ್ತನೆಂದೆನಿನಿಣ್ಣ 4
ಮಂಗನ ಚೇಷ್ಟೆಯ ಮಾಡಬೇಡಪ್ಪಾ
ಮಾಂಗಿರಿರಂಗನ ಮರೆಯಬೇಡಪ್ಪಾ5